Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿಶ್ವನಾಥ್ ರಾಮಚಂದ್ರಪ್ಪ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಹಾಫ್ ಕಾಮರ್ಸ್ ನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ “ಸ್ವಭಾವ ಸಚ್ಚಿತ ಸಂಸ್ಕಾರ ಸ್ವಚ್ಛತಾ ಈ ಸ್ವಚ್ಛತಾ” ಜಾಗೃತಿ ಕಾರ್ಯಕ್ರಮವನ್ನು ಹಾಯಿಸಲಾಗಿತ್ತು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ. ಗಿರಿರಾಜಕುಮಾರ್ ರವರು ಸಸಿಗೆ ನೀರಿರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ. ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಕನಸಾದ ಈ ಒಂದು ಯೋಜನೆಯನ್ನು ನಾವೆಲ್ಲರೂ ಎನ್ ಎಸ್ ಎಸ್ ಘಟಕದಿಂದ ಯಶಸ್ವಿಗೊಳಿಸೋಣ ಮುಖ್ಯವಾಗಿ ಈ ಯೋಜನೆಯ ಉದ್ದೇಶ ಮೊದಲು ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಇಟ್ಟುಕೊಳ್ಳುವ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸುವ ನಾಟಕಗಳು ಹಾಡುಗಳ ಮೂಲಕ ಅವರಿಗೆ ತಿಳುವಳಿಕೆ ನೀಡಬೇಕು ಕಾರಣ ಹಿರಿಯರು ಹೇಳಿದ ಹಾಗೆ ಮನೆಯ ಮೊದಲ ಪಾಠಶಾಲೆ ಎಂಬು ಹಾಗೆ ಸ್ವಚ್ಛತೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ತಿಳಿ ಹೇಳಬೇಕು. ಶೌಚಾಲಯಗಳ ಬಳಕೆ ಸಾರ್ವಜನಿಕ ಸ್ಥಳಗಳು ಅದರಲ್ಲೂ ಮುಖ್ಯವಾಗಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಿಕ್ಷಣ ಇಲಾಖೆಗಳು, ಕ್ರೀಡಾಂಗಣಗಳು ಸಾರ್ವಜನಿಕ ಕಟ್ಟಡಗಳು ವಾಣಿಜ್ಯ ಪ್ರದೇಶ ಸಮುದಾಯ ಭವನ ಎಲ್ಲರನ್ನೂ ಕೈಬೀಸಿ ಕರೆಯುತ್ತಿರುವ ಪ್ರವಾಸಿ ಸ್ಥಾನಗಳು ಈ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಈ ಒಂದು ಯೋಜನೆ ಯಶಸ್ಸು ಬೀಳುತ್ತದೆ ಎಂದು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹಂಚಿಕೊಂಡರು.
ಮಹಾವಿದ್ಯಾಲಯದ ಉಪರಾಚಾರ್ಯರು ಹಾಗೂ ಐಕ್ಯೂ ಏ ಸಿ ಕೋಆರ್ಡಿನೇಟರ್ ಡಾ. ವಿ ಟಿ ನಾಯಕರವರು ಮಾತನಾಡಿ ಪ್ರತಿ ಗ್ರಾಮ ಗ್ರಾಮಗಳಲ್ಲಿ ಈ ಒಂದು ಸ್ವಚ್ಛತಾ ಅಭಿಯಾನ ನಡೆದರೆ ದೇಶದ ಪ್ರಧಾನಿಗಳ ಕನಸನ್ನ ನಾವು ನನಸು ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು ಈ ಒಂದು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕ ಸೇವಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಮಹಾವಿದ್ಯಾಲಯದ ಕ್ರೀಡಾಂಗಣ ಮತ್ತು ಆವರಣವನ್ನು ವಿದ್ಯಾರ್ಥಿಗಳು ಶುಚಿಗೊಳಿಸಿದರು.