ವಿಜಯವಾಣಿ ಸುದ್ದಿಜಾಲ ಗದಗ
ದೇಹದ ಯಾವುದೇ ಭಾಗದಲ್ಲಿ ತಿಳಿ, ಬಿಳಿ ಅಥವಾ ತಾಮ್ರ ಬಣ್ಣದ ಸ್ಪರ್ಶ ಜ್ಞಾನ ಇಲ್ಲದ ಮಚ್ಚೆಗಳು ಇದ್ದರೆ ಆಯೋಗ್ಯ ಪರೀಸಿಕೊಳ್ಳಬೇಕು ಎಂದು ಆರೋಗ್ಯ ನಿರೀಣಾಧಿಕಾರಿ ಶಿದ್ದಪ್ಪ ಲಿಂಗದಾಳ ಹೇಳಿದರು.
ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿ ಬುಧವಾರ ಮನೆ ಮನೆ ಬೇಟಿ ನೀಡಿ ಕುಷ್ಠರೋಗ ಕುರಿತು ಜಾಗೃತಿ ಮೂಡಿಸಿ, ಮಾತನಾಡಿದ ಅವರು, ಕುಷ್ಠರೋಗವು ಮೈಕ್ರೋಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಇದು ಮುಖ್ಯವಾಗಿ ನರಗಳು ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮದ ಮೇಲ್ಬಾಗದಲ್ಲಿ ಮಚ್ಚೆಗಳು, ದೇಹದ ಯಾವುದೇ ಭಾಗದಲ್ಲಿ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಒಂದು ಅಥವಾ ಹಲವಾರು ಮಚ್ಚೆಗಳು ಇದ್ದು, ಮಚ್ಚೆಗಳಿಗೆ ಸ್ಪರ್ಶ ಜ್ಞಾನ ಇರಿದಿದ್ದರೆ ಅವು ಕುಷ್ಠ ರೋಗದ ಲಕ್ಷಣಗಳಾಗಿರಬಹುದು. ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆಯಿಂದ ಕುಷ್ಠರೋಗವನ್ನು ವಾಸಿ ಮಾಡಬಹುದು ಎಂದರು.
ಪ್ರಾಥಮಿಕ ಆರೋಗ್ಯ ಸುರಾಧಿಕಾರಿ ಸವಿತಾ ಪವಾರ ಮಾತನಾಡಿ, ದೇಹದ ಮೇಲೆ ಯಾವುದಾದರೂ ತದ್ದು ಮಚ್ಚೆ ಕಲೆಗಳು, ಚಿಹ್ನೆಗಳು ಕಂಡು ಬಂದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ್ನು ಸಂಪಕಿರ್ಸಿ ಪರೀಸಿಕೊಳ್ಳಬೇಕು. ಕುಷ್ಠರೋಗ ಖಚಿತಪಟ್ಟರೆ ಉಚಿತವಾಗಿ ಬಹುವಿದ ಔಷದದಿಂದ ಗುಣಪಡಿಸಲಾಗುವುದು ಎಂದರು.
ಆಶಾ ಕಾರ್ಯಕರ್ತೆಯರಾದ ಮಾಲಾ ಮೇವುಂಡಿ, ರೇಣುಕಾ ಪೂರದ, ಮೀನಾ ವಡ್ಡರ, ಲಲಿತಾ ಅಂಗಡಿ, ಮಂಜುಳಾ ಆರಿ, ಲಕ್ಷಿ$್ಮ ಪೂಜಾರ, ಉಮಾ ಖಾನಾಪೂರ ಇತರರು ಇದ್ದರು.