ವಿಜಯವಾಣಿ ಸುದ್ದಿಜಾಲ ಗದಗ
ನಗರದ ಮುಕ್ಕಣ್ಣೇಶ್ವರ ಮಠದಲ್ಲಿ ಭಾನುವಾರ ಶ್ರೀದೇವಿ ಪುರಾಣ ಮಂಗಲೋತ್ಸವ ಕಾರ್ಯಕ್ರಮ ಜರುಗಿತು.
ಶಂಕರಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಆಧ್ಯಾತ್ಮೀಕ ಚಿಂತನೆ, ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ನಾವು ಜೀವನದಲ್ಲಿ ಬೆಳೆಸಿಕೊಂಡು ಬಂದಿದ್ದೆ ಆದರೆ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ. ಶ್ರೀದೇವಿಯ ಶಕ್ತಿಯಿಂದ ಜಗತ್ತು ಸೃಷ್ಟಿಯಾಗಿದೆ. ಬ್ರಹ್ಮ ವಿಷ್ಣು ಮಹೇಶ್ವರರಿಗೆ ದೇವಿ ಈ ಜಗತ್ತನ್ನು ಮುನ್ನಡೆಸಲು ಅ-ಧಿಕಾರ ನೀಡಿದಳು. ಸರ್ವ ದುಃಖ ನಿವಾರಣೆಗೆ ಮತ್ತು ಪರಮಾನಂದ ಪ್ರಾಪ್ತಿಗೆ ದೇವಿಯ ಆರಾಧನೆ, ಸಂತ ಶರಣರ ಪುರಾಣ ಪ್ರವಚನಗಳು ಜೀವನದಲ್ಲಿ ಮಾನವನಿಗೆ ಅತೀ ಅವಶ್ಯ ಎಂದು ಶ್ರೀಗಳು ಹೇಳಿದರು.
ಚಿಂತಕ ಸಿ. ಎ್. ಪಾಟೀಲ ಮಾತನಾಡಿ, ಮಠದಲ್ಲಿ ವರ್ಷಪರ್ಯಂತ ಆಧ್ಯಾತ್ಮಿಕ ಚಿಂತನೆ, ಗುರುಗಳ ದರ್ಶನ, ಗುರುಗಳ ವಾಣಿ ಶ್ರವಣ ಮಾಡುವದರಿಂದ ನಮ್ಮ ಮನಸ್ಸಿಗೆ ನೆಮ್ಮದಿ, ಸುಖ, ಶಾಂತಿ ಸಿಗುತ್ತದೆ. ಮಠದಲ್ಲಿ ನಡೆಯುವ ಧಾಮಿರ್ಕ ಕಾರ್ಯಕ್ರಮಗಳು ನಿರಂತರವಾಗಿ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಒಂಬತ್ತು ದಿನಗಳ ಕಾಲ ಪುರಾಣ ಪ್ರವಚನ ನೀಡಿದ ಮಹನೀಯರಿಗೆ ಮತ್ತು ಸಂಗೀತ ಸೇವೆ ಸಲ್ಲಿಸಿದ ಸಂಗೀತಗಾರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್.ಎಸ್. ಪಾಟೀಲ, ಬಸನಗೌಡ ಗೌಡರ, ಅಮೃತಾ ಭೋವಿ, ಜಿ. ಬಿ. ಚನ್ನಪ್ಪಗೌಡ್ರ, ಸಿ. ಎ್. ಪಾಟೀಲ, ಎಂ. ಎಸ್. ಸವಿರ್, ಬರಮಣ್ಣ ಇಂಡಿ, ಎಂ. ಬಿ. ದೇಸಾಯಿಗೌಡ್ರ ಇತರರು ಇದ್ದರು.