ಇನ್ನರ್​ವ್ಹೀಲ್​ ಕ್ಲಬ್​ ಗದಗ ಬೆಟಗೇರಿಯಿಂದ 51 ಶಿಕ್ಷಕರಿಗೆ ನೇಷನ್​ ಬಿಲ್ಡರ್​ ಅವಾರ್ಡ

ಆದರ್ಶ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ: ಬುರಡಿ

ವಿಜಯವಾಣಿ ಸುದ್ದಿಜಾಲ ಗದಗ
ಆದರ್ಶ ಸಮಾಜ ನಿರ್ಮಾಣವಾಗುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳಲ್ಲಿ ಆಂತರಿಕ ಮೌಲ್ಯಗಳನ್ನು ವೃದ್ಧಿಸುವ ಕಾರ್ಯ ಶಿಕ್ಷಕರಿಂದ ನಿರಂತರವಾಗಿ ನಡೆಯುತ್ತಿದೆ. ಶಿಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ ಎಂದು ಗದಗ ಶಹರ ಶಿಕ್ಷಕ ಆರ್​. ಎಸ್​. ಬುರಡಿ ಹೇಳಿದರು.
ಮಂಗಳವಾರ ನಗರದ ಉಷಾದೇವಿ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್​ ಸೆಂಟರ್​ನಲ್ಲಿ ಇನ್ನರ್​ ವ್ಹೀಲ್​ ಕ್ಲಬ್​ ವತಿಯಿಂದ ಶಿಣ ೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಆಯ್ದ 51 ಶಿಕ್ಷಕರಿಗೆ “ನೇಷನ್​ ಬಿಲ್ಡರ್​ ಅವಾರ್ಡ’ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಎಲ್ಲರ ಅನುಭವಗಳು ಒಂದೇ ಆಗಿರುತ್ತದೆ. ಆದರೆ ಸಾಮಾನ್ಯರಿಗಿಂತ ಭಿನ್ನವಾದ ಅಸಮಾನ್ಯವಾದ ಅನುಭವ ಹೊಂದಿರುವವರೇ ನಿಜವಾದ ಸಾಧಕರು. ಇವರು ತಮ್ಮ ಬದುಕಿನ ಅನುಭವಗಳನ್ನು ಸಮಾಜದೊಡನೆ ಹಂಚಿಕೊಂಡು ಮುಂದೆ ಸಾಗುವರು. ಇದಕ್ಕೆ ಶಿಕರು ಹೊರತಾಗಿಲ್ಲ ಎಂದರು.
ಅಧ್ಯತೆ ವಹಿಸಿದ್ದ ಕ್ಲಬ್​ ಅಧ್ಯೆ ನಾಗರತ್ನ ಮಾರನಬಸರಿ ಮಾತನಾಡಿ, ಇನ್ನರ್​ವ್ಹೀಲ್​ ಕ್ಲಬ್​ ಗದಗ&ಬೆಟಗೇರಿ 51ನೇ ವರ್ಷಾಚರಣೆಯಲ್ಲಿದೆ. ಸಮಾಜಮುಖಿಯಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿ ಗೊಳಿಸಲಾಗಿದೆ. ಶಿಕರ ದಿನಾಚರಣೆಯ ಅಂಗವಾಗಿ ಕ್ಲಬ್​ನ ಸದಸ್ಯರ ಸಹಮತದಿಂದ 51 ಶಿಕ ಶಿಕಿಯರನ್ನು ವಿವಿಧ ಹಂತಗಳಲ್ಲಿ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಲಾಗಿದೆ ಎಂದರು.
ಪ್ರೇಮಾ ಗುಳಗೌಡ್ರ ಮಾತನಾಡಿ, ಇನ್ನರ್​ ವ್ಹೀಲ್​ ಕ್ಲಬ್​ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಸಂಸ್ಥೆಯ ಮಾರ್ಗಸೂಚಿಯನ್ನು ಅನುಸರಿಸಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನೇಷನ್​ ಬಿಲ್ಡರ್​ ಅವಾರ್ಡ ಶೈಣಿಕ ಕಾರ್ಯೇತ್ರದಲ್ಲಿ ಸಾಧನೆ ಮಾಡಿದ ಶಿಕ ಬಳಗಕ್ಕೆ ನೀಡುವ ಪ್ರಶಸ್ತಿಯಾಗಿದೆ. ಇಂದು ಕ್ಲಬ್​ದಿಂದ 51 ಶಿಕರನ್ನು ಸನ್ಮಾನಿಸಲಾಗಿದೆ. ಈಗಾಗಲೇ ಸರ್ಕಾರಿ ಶಾಲೆಗಳನ್ನು ಪ್ರತಿ ವರ್ಷ ದತ್ತು ಪಡೆದು ಶಾಲೆಗಳಿಗೆ ಬೇಕಾದ ಶೈಣಿಕ ಸೌಲಭ್ಯಗಳನ್ನು ಹಾಗೂ ವಿಕಲಚೇತನ, ಬಡಮಕ್ಕಳ, ಶೈಣಿಕ ಪ್ರಗತಿಗೆ ಸಹಾಯ ನೀಡಲಾಗಿದೆ. ಬರಲಿರುವ ದಿನಗಳಲ್ಲಿ ಇನ್ನಷ್ಟು ಶೈಣಿಕ ಚಟುವಟಿಕೆಗಳಿಗೆ ಪೂರಕವಾಗಿ ಕ್ಲಬ್​ ಕಾರ್ಯ ನಿರ್ವಹಿಸಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಬ್​ ಕಾರ್ಯದಶಿರ್ ವೀಣಾ ತಿರ್ಲಾಪೂರ, ಶಿಕರು ಮಕ್ಕಳ ಬಾಳಿನಲ್ಲಿ ಬೆಳಕು ಬೀರಬಲ್ಲ ಜ್ಯೋತಿಗಳು. ಶಿಕರ ದಿನಾಚರಣೆಯ ಅಂಗವಾಗಿ ಗ್ರಾಮೀಣ ಹಾಗೂ ಶಹರ ವಲಯದ ವಿವಿಧ ಶಾಲೆಗಳ ಶಿಕರನ್ನು ಆಯ್ಕೆ ಮಾಡಲಾಗಿದೆ. ಮುಖ್ಯವಾಗಿ ಕ್ಲಬ್​ನ ದತ್ತು ಶಾಲೆ, ನನ್ನ ಶಾಲೆ ನನ್ನ ಕೊಡುಗೆ ಯಶಸ್ವಿ ಅನುಷ್ಠಾನ, ನಲಿಕಲಿ ಬೋಧನೆಯ ರ್ಪೂಣತೆ, ಅತಿಥಿ ಶಿಕರಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, 38 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ, ನಿವೃತ್ತಿಯ ಅಂಚಿನಲ್ಲಿರುವ ಹಾಗೂ ವಿವಿಧ ೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕ ಶಿಕ ಶಿಕಿಯರನ್ನು ಸನ್ಮಾನಿಸಿ ಇನ್ನಷ್ಟು ಸ್ಪೂತಿರ್ ತುಂಬಲಾಯಿತು ಎಂದರು.
ಅನ್ನರ್ಪೂಣ ವರವಿ, ಶಾಂತಾ ನಿಂಬಣ್ಣವರ, ಜ್ಯೋತಿ ದಾನಪ್ಪಗೌಡ್ರ, ಜಯಶ್ರೀ ಉಗಲಾಟ, ನಂದಾ ಬಾಳಿಹಳ್ಳಿಮಠ, ಪುಷ್ಪಾ ಭಂಡಾರಿ, ಮೀನಾ ಕೊರವನವರ, ಪೂಜಾ ಭೂಮಾ, ರಾಜೇಶ್ವರಿ ಬಳ್ಳಾರಿ, ಸುಶೀಲಾ ಕೋಟಿ ಇತರರು ಇದ್ದರು.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…