More

    ಗದಗ: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜನ ಜಾಗೃತಿ ಜಾಥಾ

    ಗದಗ:

    ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ  ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಮ್ಸ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಭಾರತೀಯ ವೈದ್ಯಕೀಯ ಸಂಘ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ ಇವರ ಸಂಯುಕ್ತ ಆಶ್ರಯದಲ್ಲಿ  ಬುಧವಾರ ನಗರದ  ಮುನ್ಸಿಪಲ್ ಕಾಲೇಜು ಅವರಣದಿಂದ   ಮಹಾತ್ಮ ಗಾಂಧಿ ವೃತ್ತದವರಗೆ     ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಜಾಥಾ ಉದ್ಘಾಟಿಸಿ ಮಾತನಾಡಿ  ತಂಬಾಕು ಉತ್ಪನ್ನ ಹಾಗೂ ಸೇವನೆ ಬಹಳ ಅಪಾಯಕಾರಿಯಾಗಿದ್ದು ಅದರಿಂದ ಹಲವಾರು ರೋಗಗಳು ಹೇಗೆ ಬರುತ್ತವೆ ಎಂದು ಜನರಿಗೆ  ಜಾಗೃತಿ  ಮೂಡಿಸಲು  ಜಾಥಾ ಕಾರ್ಯಕ್ರಮ  ಮಾಡುತ್ತಿದ್ದೆವೆ ಎಂದು ತಿಳಿಸಿದರು.

     ಸಿಗರೇಟು, ತಂಬಾಕು ಉತ್ಪನ್ನಗಳ ಪೂರೈಕೆ ಅದರ ಮಾರಾಟಕ್ಕೆ ಸಂಬಂಧಪಟ್ಟಂತೆ  ನಿಷೇಧ ಕಾನೂನು 2003 ರಲ್ಲಿ  ಜಾರಿಗೆ ಬಂದಿದ್ದು  ಜನ ಸಾಮಾನ್ಯರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ.    ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಅಪರಾಧ ,ಸಾರ್ವಜನಿಕ ಸ್ಥಳದಲ್ಲಿ ಶಾಲಾ ಕಾಲೇಜುಗಳ ಹತ್ತಿರದಲ್ಲಿ ಸಿಗರೇಟು, ತಂಬಾಕು,ಬೀಡಿ ಮಾರಾಟ ಮಾಡಿದ್ದಲ್ಲಿ  ಕಾನೂನಿನನ್ವಯ 200 ರೂ ಗಳ ದಂಡ ವಿಧಿಸಲಾಗುವುದು.

    ದೃಶ್ಯ ಹಾಗು ಮುದ್ರಣ ಮಾಧ್ಯಮದ ಮೂಲಕ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡಿದ್ದಲ್ಲಿ ಎರಡು ವರ್ಷ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.  ತಂಬಾಕು ಉತ್ಪನ್ನಗಳ ಹಾನಿಯ ಅರಿವು ಸಾರ್ವಜನಿಕರಿಗೆ  ಇರಬೇಕಾಗುತ್ತದೆ ಆಗ  ನಿಷೇಧ ಕಾ0iÉ್ದು ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗಲು ಸಾಧ್ಯ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ  ಗದಗ ಐ.ಎಮ್.ಎ. ಮಾಜಿ ಅಧ್ಯಕ್ಷ   ಡಾ. ಪ್ಯಾರ ಅಲಿ ನೂರಾನಿ ಮಾತನಾಡಿ ತಂಬಾಕು ಒಂದು ಅಪಾಯಕಾರಿ ವಸ್ತು, ತಂಬಾಕು  ಉತ್ಪನ್ನಗಳಿಂದ ಆಗುವ ಪರಿಣಾಮಗಳು ಮತ್ತು ರೋಗಗಳ  ಬಗ್ಗೆ  ಸಾರ್ವಜನಿಕರಿಗೆ  ಸಂದೇಶವನ್ನು ಪರಿಣಾಮಕಾರಿಯಾಗಿ ಮೂಡಿಸಬೇಕು ಎಂದು ಹೇಳಿದರು.

     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಜಗದೀಶ ನುಚ್ಚಿನ  ಅವರು ಮಾತನಾಡಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು  1987 ಮೇ 31 ರಿಂದ ಆರಂಭಿಸಲಾಗಿದ್ದು , ಇಲ್ಲಿಯವರೆಗೂ  ಈ ದಿನವನ್ನು ಆಚರಿಸಲಾಗುತ್ತಿದೆ  ಈ ವರ್ಷದ ಘೋಷಣೆ ಬಹಳ ಅತ್ಯುತ್ತಮ ಘೋಷಣೆಯಾಗಿದೆ ನಮಗೆ ಆಹಾರ ಬೇಕು ತಂಬಾಕು ಬೇಡ ಘೋಷಣೆಯು  ಪರಿಣಾಮಕಾರಿಯಾಗಿದ್ದು  ಸಾರ್ವಜನಿಕರಿಗೆ  ತಿಳುವಳಿಕೆ ಮೂಡಿಸುವಲ್ಲಿ  ಸಹಕಾರಿಯಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ  ಡಾ.ಅರುಂಧತಿ ಕುಲಕರ್ಣಿ, ಮನೋವೈದ್ಯರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ  ಡಾ. ರಾಘವೇಂದ್ರ ಪಾಟೀಲ್,   ತಾಲೂಕಾ ಆರೋಗ್ಯ ಅಧಿಕಾರಿ  ಡಾ.ಪ್ರೀತ ಖೋನಾ,   ಸಿಬ್ಬಂದಿಗಳಾದ  ಉಮೇಶ ಕರಮುಡಿ. ಗೀತಾ ಕಾಂಬಳೆ.ಎಸ್.ಎನ್. ಲಿಂಗದಾಳ.ಪ್ರಭು ಹೊನಗುಡಿ. ಎಸ್.ದೇವರವರ. ವೈ.ಜಿ ಲಿಂಬಿಕಾಯಿ. ಎಸ್.ಎಸ್. ಕುಬಸದ. ಶ್ರೀಧರ ಎಮ್ ಸಿ.  ವಿನಾಯಕ ಕಾಳೆ.  ನಾಗರಾಜ ಜೋಗೀನ್.  ವಿನಾಯಕ ವಾಗಮೋರೆ. ಬಿ.ಎಮ್.ಕುಕನೂರ, ಗದಗ ತಾಲೂಕಾ ಆರೋಗ್ಯ ಅಧಿಕಾರಿ ಕಛೇರಿ ಸಿಬ್ಬಂದಿಗಳಾದ ವಾ0iÀiï.ವಾ0iÀiï. ಹಕ್ಕಿ ಹಾಗೂ ಕಛೇರಿ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.. ಎಸ್.ಎಸ್.ಪೀರಾ  ಇವರು ಕಾರ್ಯಕ್ರಮದಲ್ಲಿ  ಸ್ವಾಗತಿಸಿ ನಿರೂಪಣೆ ಮಾಡಿದರು, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ  ಗೀತಾ ಕಾಂಬಳೆ ವಂದಿಸಿದರು.

    ವಿಶ್ವ ಸ್ಕಿಜೋಫೆÇೀನಿಯಾ ಜಾಥಾ  :  ಇದೇ ಸಂದರ್ಭದಲ್ಲಿ ವಿಶ್ವ ಸ್ಕಿಜೋಫೋನಿಯಾ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ವಿಶ್ವ ಸ್ಕಿಜೋಫೋನಿಯಾ ಒಂದು ತೀವ್ರತರ ಮಾನಸಿಕ ಕಾಯಿಲೆಯಾಗಿದ್ದು ಇದು ಬಹುಮುಖಿ ರೋಗವಾಗಿದೆ. ಇದರಲ್ಲಿ ಮುಖ್ಯವಾಗಿ ಆಲೋಚನೆ, ಭಾವನೆಗಳು ಮತ್ತು ಪಂಚೇಂದ್ರಿಯಗಳ ಮೂಲಕ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಸಂವೇಧನಾ ಕ್ರಿಯೆ ಏರುಪೇರಾಗುತ್ತದೆ. ಅಂತಹ ರೋಗಿಗಳನ್ನು ಸಮಾಜದ ಎಲ್ಲ ವರ್ಗಗಳು ದಯಾಳುತನ ತೋರಿಸಿ ರೋಗಿಗಳನ್ನು ಮುಖ್ಯವಾಹಿನಿಗೆ ತರಬೇಕು. ಉತ್ತಮ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದ್ದು ಇಂತಹ ರೋಗ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸುವಂತೆ ಜಾಗೃತಿ ಮೂಡಿಸಲಾಯಿತು.    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts