ಹೆಗಡೆ ಕಾರ್ಯ ಶ್ಲಾಘನೀಯ

ಮೋರಟಗಿ: ರಾಜ್ಯಾದಂತ ನಮ್ಮ ಊರು ನಮ್ಮ ಕೆರೆ ಹಾಗೂ ಕೆರೆ ಸಂಜೀವಿನಿ ಮೂಲಕ ಹಲವಾರು ಹಳ್ಳಿಗಳಿಗೆ ನೀರಿನ ಬವಣೆಯನ್ನು ನೀಗಿಸಿದ ಡಾ.ವೀರೇಂದ್ರ ಹೆಗಡೆ ಅವರ ಕಾರ್ಯ ಶ್ಲಾಘನೀಯ ಎಂದು ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಶಿವಾನಂದ ಪೀರಶೆಟ್ಟಿ ಹೇಳಿದರು.
ಸಮೀಪದ ಗಬಸಾವಳಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರಪೀಡಿತ ಜಿಲ್ಲೆಗಳಲ್ಲಿ ಒಂದಾದ ವಿಜಯಪುರ ಜಿಲ್ಲಾ ವಿಭಾಗದ ಪ್ರತಿಯೊಂದು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದರು.
ಕಲ್ಲಪ್ಪ ಕುಂಬಾರ, ಸಾಹೇಬಗೌಡ ಬಿರಾದಾರ, ಬಸನಗೌಡ ಬಿರಾದಾರ, ಸಿದ್ದು ಮಂಗಾಳಿ, ಗುರುರಾಜ ಹಡಪದ, ನಿಂಗಪ್ಪ ಬಿರಾದಾರ ಇತರರು ಇದ್ದರು.


Leave a Reply

Your email address will not be published. Required fields are marked *