ಮುದ್ದಹನುಮೇಗೌಡ ಹಣ ಪಡೆದುಕೊಂಡಿಲ್ಲ, ಅವರು ಪಕ್ಷದ ನಿಷ್ಠಾವಂತ ಸಂಸದ: ಪರಮೇಶ್ವರ್​

ಬೆಳಗಾವಿ: ನಾಮಪತ್ರ ಹಿಂಪಡೆಯಲು ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಕೆ.ಎನ್​. ರಾಜಣ್ಣ ಅವರು ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ಡಿಸಿಎಂ ಜಿ. ಪರಮೇಶ್ವರ್​ ಅವರು ನಿರಾಕರಿಸಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪರಮೇಶ್ವರ್​ ಅವರು ವೈರಲ್​ ಆಗಿರುವ ಆಡಿಯೋದಲ್ಲಿ ಮಾತನಾಡಿರುವ ದರ್ಶನ್​ ಚುನಾವಣೆ ಪ್ರಚಾರದಲ್ಲಿ ನನ್ನ ಜತೆ ಇದ್ದ. ಅವನು ಹೇಳಿರುವ ಬಗ್ಗೆ ಯಾವುದೇ ದಾಖಲಿಗಳಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಸರ್ಕಾರ ಸುಭದ್ರವಾಗಿದೆ

ಮೈತ್ರಿ ಸರ್ಕಾರ ಸುಭದ್ರವಾಗಿದೆ. ನಿನ್ನೆ ರಮೇಶ್​ ಜಾರಕಿಹೊಳಿಯನ್ನು ಭೇಟಿ ಮಾಡಲು ಪ್ರಯತ್ನಿಸಿದ್ದೆ. ಅವರು ಬೆಂಗಳೂರಿನಲ್ಲಿದ್ದರೂ ನನ್ನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರು ರಾಜೀನಾಮೆ ಕೊಡುತ್ತೇನೆ ಎಂದು ಬಹಳ ದಿನದಿಂದ ಹೇಳುತ್ತಿದ್ದಾರೆ. ಅವರು ರಾಜೀನಾಮೆ ಕೊಟ್ಟರೆ ಮುಂದೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಚರ್ಚೆ ನಡೆಸುತ್ತಿದ್ದೇವೆ. ನಿನ್ನೆ ನಾನು, ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ. ಶಿವಕುಮಾರ್​ ಈ ಕುರಿತು ಚರ್ಚೆ ಮಾಡಿದ್ದೇವೆ ಎಂದು ಪರಮೇಶ್ವರ್​ ತಿಳಿಸಿದರು.

ಕಾಲಿಗೆ ನಮಸ್ಕರಿಸಿದ ಲಕ್ಷ್ಮೀ ಹೆಬ್ಬಾಳ್ಕರ್​

ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪರಮೇಶ್ವರ್​ ಅವರನ್ನು ಸ್ವಾಗತಿಸಲು ಆಗಮಿಸಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಡಿಸಿಎಂ ಕಾಲಿಗೆ ನಮಸ್ಕರಿಸಿದರು.

One Reply to “ಮುದ್ದಹನುಮೇಗೌಡ ಹಣ ಪಡೆದುಕೊಂಡಿಲ್ಲ, ಅವರು ಪಕ್ಷದ ನಿಷ್ಠಾವಂತ ಸಂಸದ: ಪರಮೇಶ್ವರ್​”

  1. Hello Siddaramaiah. BJPyavarige Nachike agabekku intha samrisha sarkaradara bagge mathanadalu maha harishchandrana makkalu

Comments are closed.