ಜೆಡಿಎಸ್​ಗೆ ತುಮಕೂರು ಬಿಟ್ಟುಕೊಟ್ಟಿರುವುದು ಬೇಸರ ತಂದಿದೆ: ಪರಮೇಶ್ವರ್​

ಬೆಂಗಳೂರು: ಸೀಟು ಹಂಚಿಕೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿರುವುದು ಬೇಸರ ತಂದಿದೆ. ತುಮಕೂರಿನಲ್ಲಿ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇತ್ತು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರನ್ನು ಅಭಿನಂದಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್​ ಅವರು ಕಳೆದ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆದ್ದಿತ್ತು. ಗೆದ್ದ ಅಭ್ಯರ್ಥಿಗಳನ್ನು ಬದಲಿಸುವುದು ಬೇಡ ಎಂದು ಮಾತುಕತೆಯಾಗಿತ್ತು. ತುಮಕೂರಿನಿಂದ ಮುದ್ದಹನುಮೇಗೌಡ ಅವರು ಗೆಲುವು ಸಾಧಿಸಿದ್ದರು. ಆದರೂ ಜೆಡಿಎಸ್​ಗೆ ತುಮಕೂರನ್ನು ಬಿಟ್ಟುಕೊಡಲಾಗಿದೆ. ಈ ವಿಷಯವನ್ನು ನಾವು ನಮ್ಮ ನಾಯಕರ ಗಮನಕ್ಕೆ ತಂದಿದ್ದು, ತುಮಕೂರನ್ನು ನಮಗೆ ಬಿಟ್ಟುಕೊಡುವಂತೆ ಮನವೊಲಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ತುಮಕೂರಿನಲ್ಲಿ ದೇವೇಗೌಡರು ನಿಲ್ಲುವುದಾದರೆ ಸ್ವಾಗತ. ಆದರೆ ಬೇರೆಯವರು ನಿಲ್ಲುವುದಾದರೆ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಿ ಎಂದು ನಾನು ಮನವಿ ಮಾಡಿದ್ದೇನೆ. ಹಾಗಾಗಿ ಅವರು ನನ್ನ ಮನವಿಗೆ ಸ್ಪಂದಿಸಿ ಕಾಂಗ್ರೆಸ್​ಗೆ ಬಿಟ್ಟುಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಪರಮೇಶ್ವರ್​ ತಿಳಿಸಿದರು.