VIDEO| ಮಹಿಳಾ ದಿನದಂದು ಮಹಿಳೆಯರಿಗೆ ವಿಶೇಷವಾಗಿ ಶುಭಕೋರಿದ ಗಾಲಿ ಜನಾರ್ದನ ರೆಡ್ಡಿ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನವಾದ ಇಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಹಿಳೆಯರಿಗಾಗಿ ವರನಟ ಡಾ.ರಾಜ್​ಕುಮಾರ್​ ಅವರ ಹಾಡೊಂದನ್ನು ಸಮರ್ಪಿಸಿ, ಮಹಿಳೆಯರ ಬಗ್ಗೆ ಸುದೀರ್ಘವಾಗಿ ಬರೆದು ವಿಶೇಷವಾಗಿ ಶುಭಕೋರಿದ್ದಾರೆ.

ತಮ್ಮ ಫೇಸ್​ಬುಕ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ರೆಡ್ಡಿ ಅವರು ಕಳೆದ ವರ್ಷದ ತಮ್ಮ 25ನೇ ಮದುವೆ ವಾರ್ಷಿಕೋತ್ಸವ​ಕ್ಕೆ ಸಂಬಂಧಪಟ್ಟ ವಿಡಿಯೋವೊಂದನ್ನು ಅಪ್​ಲೋಡ್​ ಮಾಡಿ ತಮ್ಮ ಮಡದಿಗೆ ಮಹಿಳಾ ದಿನದ ಉಡುಗೊರೆಯಾಗಿ ನೀಡಿದ್ದಾರೆ.

ರೆಡ್ಡಿ ಅವರ ಫೇಸ್​​​ಬುಕ್​ ಫೋಸ್ಟ್​ ಹೀಗಿದೆ…
ಮೈಯನು ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು… ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು… ಸಮಸ್ತ ಮಹಿಳಾ ಕುಲಕ್ಕೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು.

ಕನ್ನಡದ ವರನಟ ಡಾ.ರಾಜ್ ಕುಮಾರ್ ಹಾಡಿರುವ ಈ ಸುಮಧುರ ಗೀತೆ ಮಹಿಳೆಯ ತ್ಯಾಗ, ಸಹನೆ ಮತ್ತು ವಾತ್ಸಲ್ಯ ಭರಿತ ಹೃದಯಕ್ಕೆ ಪೂರಕವಾಗಿದ್ದು ವಿಶ್ವ ಮಹಿಳಾ ದಿನಾಚರಣೆ ಶುಭ ಸಂದರ್ಭದಲ್ಲಿ ಸ್ಮರಿಸಲು ಸಂತೋಷವೆನಿಸುತ್ತಿದೆ.

ಈ ವಿಶ್ವ ಮಹಿಳಾ ದಿನಾಚರಣೆ ವೇಳೆ ಮಹಿಳೆಯರ ಕುರಿತು ಅಕ್ಷರದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಮಹಿಳೆಯ ಹೃದಯ ಆಗಸದಷ್ಟು ವಿಶಾಲ, ಮನಸ್ಸು ಸಾಗರದಷ್ಟೇ ಸಮಾನ. ಮಹಿಳೆ ನಿಜಕ್ಕೂ ಅನಂತ ಸೃಷ್ಟಿಗೆ ಕಾರಣಳು. ಆದಿಶಕ್ತಿಯಾಗಿ ಎಲ್ಲೆಡೆ ವ್ಯಾಪಿಸಿರುವ ಮಹಿಳೆ ನಿಜಕ್ಕೂ ಈ ಜಗತ್ತಿನ ಅದ್ಭುತವಾದ ಕೊಡುಗೆ.

ಪುರಾಣಗಳಲ್ಲೂ, ಇತಿಹಾಸದಲ್ಲೂ ಮಹಿಳೆ ಎಂದಿಗೂ ಅಗ್ರ ಸ್ಥಾನದಲ್ಲಿದ್ದಾಳೆ. ಈಶ್ವರನಿಗೆ ಅರ್ಧಾಂಗಿಯಾಗಿ, ವಿಷ್ಣುವಿನಲ್ಲಿ ಅನುರಕ್ತಳಾಗಿ, ಬ್ರಹ್ಮನಿಗೆ ಸರಸ್ವತಿಯಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಮೂಲ ಕಾರಣಳಾಗಿದ್ದಾಳೆ. ಶಕ್ತಿ ದೇವತೆಯಾದ ಮಹಿಳೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಸ್ಕಾರಗಳಿಗೆ ಸ್ಫೂರ್ತಿದಾಯಕಳು.

ಇಂತಹ ಮಹಿಳೆಯ ಬಗ್ಗೆ ಇಡೀ ಜಗತ್ತೇ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಗೌರವ ಸಲ್ಲಿಸುತ್ತಿದೆ.

ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯದ ಅನುಮತಿ ಪಡೆದು ನನ್ನ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾನು ಬಳ್ಳಾರಿಗೆ ಆಗಮಿಸಿದಾಗ ಸರಳ ಕಾರ್ಯಕ್ರಮದಲ್ಲಿ ನನ್ನ ಪತ್ನಿಗಾಗಿ ನಾನು ಸಮರ್ಪಿಸಿ ಧ್ವನಿಗೂಡಿಸಿದ ಆ ಹಾಡನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಿದ್ದೇನೆ.

ನನ್ನೆಲ್ಲ ನೋವು, ನಲಿವು, ಕಷ್ಟ, ನಷ್ಟಗಳು, ಸುಖ, ಸಂತೋಷ ಹೀಗೆ ನಾನಾ ರೀತಿಯ ಸಂದರ್ಭಗಳಲ್ಲಿ ಭಾಗಿಯಾಗಿ ಎಲ್ಲ ಸಮಯದಲ್ಲೂ ನನಗೆ ಪ್ರೋತ್ಸಾಹ ನೀಡುತ್ತಾ, ನನ್ನ ಶ್ರೇಯಸ್ಸನ್ನೇ ಬಯಸುತ್ತಾ, ಮಕ್ಕಳ ಪಾಲನೆ ಮಾತ್ರವಲ್ಲದೆ ನನ್ನನ್ನು ನಂಬಿದ ನೂರಾರು ಕುಟುಂಬಗಳ ಸದಸ್ಯರಿಗೆ ತಾಯಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸಿದ ನನ್ನ ಪತ್ನಿ ಶ್ರೀಮತಿ ಲಕ್ಷ್ಮಿಅರುಣಾಗೆ ಈ ಶುಭ ಸಂದರ್ಭದಲ್ಲಿ ಹೃದಯಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ.

ಮತ್ತೊಮ್ಮೆ ವಿಶ್ವ ಮಹಿಳಾ ದಿನಾಚರಣೆ ಶುಭ ಸಂದರ್ಭದಲ್ಲಿ ಸಮಸ್ತ ಮಹಿಳೆಯರಿಗೆ ನನ್ನ ಹಾರ್ದಿಕ ಶುಭಾಶಯಗಳು…!!
-ಗಾಲಿ ಜನಾರ್ಧನ ರೆಡ್ಡಿ

Women's Day Special video

ಮೈಯನು ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು…. ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು….!!ಸಮಸ್ತ ಮಹಿಳಾ ಕುಲಕ್ಕೆ ವಿಶ್ವ ಮಹಿಳಾ ದಿನಾಚರಣೆ ಯ ಶುಭಾಶಯಗಳು….!! ಕನ್ನಡದ ವರನಟ ಡಾ.ರಾಜ್ ಕುಮಾರ್ ಹಾಡಿರುವ ಈ ಸುಮಧುರ ಗೀತೆ ಮಹಿಳೆಯ ತ್ಯಾಗ, ಸಹನೆ ಮತ್ತು ವಾತ್ಸಲ್ಯ ಭರಿತ ಹೃದಯಕ್ಕೆ ಪೂರಕವಾಗಿದ್ದು ವಿಶ್ವ ಮಹಿಳಾ ದಿನಾಚರಣೆ ಶುಭ ಸಂದರ್ಭದಲ್ಲಿ ಸ್ಮರಿಸಲು ಸಂತೋಷವೆನಿಸುತ್ತಿದೆ. ಈ ವಿಶ್ವ ಮಹಿಳಾ ದಿನಾಚರಣೆ ವೇಳೆ ಮಹಿಳೆಯರ ಕುರಿತು ಅಕ್ಷರದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಮಹಿಳೆಯ ಹೃದಯ ಆಗಸದಷ್ಟು ವಿಶಾಲ, ಮನಸ್ಸು ಸಾಗರದಷ್ಟೇ ಸಮಾನ. ಮಹಿಳೆ ನಿಜಕ್ಕೂ ಅನಂತ ಸೃಷ್ಟಿಗೆ ಕಾರಣಳು. ಆದಿಶಕ್ತಿಯಾಗಿ ಎಲ್ಲೆಡೆ ವ್ಯಾಪಿಸಿರುವ ಮಹಿಳೆ ನಿಜಕ್ಕೂ ಈ ಜಗತ್ತಿನ ಅದ್ಭುತವಾದ, ಕೊಡುಗೆ. ಪುರಾಣಗಳಲ್ಲೂ, ಇತಿಹಾಸದಲ್ಲೂ ಮಹಿಳೆ ಎಂದಿಗೂ ಅಗ್ರ ಸ್ಥಾನದಲ್ಲಿದ್ದಾಳೆ. ಈಶ್ವರನಿಗೆ ಅರ್ಧಾಂಗಿಯಾಗಿ, ವಿಷ್ಣುವಿನಲ್ಲಿ ಅನುರಕ್ತಳಾಗಿ, ಬ್ರಹ್ಮನಿಗೆ ಸರಸ್ವತಿಯಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಮೂಲ ಕಾರಣಳಾಗಿದ್ದಾಳೆ. ಶಕ್ತಿ ದೇವತೆಯಾದ ಮಹಿಳೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಸ್ಕಾರಗಳಿಗೆ ಸ್ಫೂರ್ತಿದಾಯಕಳು. ಇಂತಹ ಮಹಿಳೆಯ ಬಗ್ಗೆ ಇಡೀ ಜಗತ್ತೇ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಗೌರವ ಸಲ್ಲಿಸುತ್ತಿದೆ.ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯದ ಅನುಮತಿ ಪಡೆದು ನನ್ನ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾನು ಬಳ್ಳಾರಿಗೆ ಆಗಮಿಸಿದಾಗ ಸರಳ ಕಾರ್ಯಕ್ರಮದಲ್ಲಿ ನನ್ನ ಪತ್ನಿಗಾಗಿ ನಾನು ಸಮರ್ಪಿಸಿ ಧ್ವನಿಗೂಡಿಸಿದ ಆ ಹಾಡನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಿದ್ದೇನೆ. ನನ್ನೆಲ್ಲ ನೋವು, ನಲಿವು, ಕಷ್ಟ, ನಷ್ಟಗಳು, ಸುಖ, ಸಂತೋಷ ಹೀಗೆ ನಾನಾ ರೀತಿಯ ಸಂದರ್ಭಗಳಲ್ಲಿ ಭಾಗಿಯಾಗಿ ಎಲ್ಲ ಸಮಯದಲ್ಲೂ ನನಗೆ ಪ್ರೋತ್ಸಾಹ ನೀಡುತ್ತಾ, ನನ್ನ ಶ್ರೇಯಸ್ಸನ್ನೇ ಬಯಸುತ್ತಾ, ಮಕ್ಕಳ ಪಾಲನೆ ಮಾತ್ರವಲ್ಲದೆ ನನ್ನನ್ನು ನಂಬಿದ ನೂರಾರು ಕುಟುಂಬಗಳ ಸದಸ್ಯರಿಗೆ ತಾಯಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸಿದ ನನ್ನ ಪತ್ನಿ ಶ್ರೀಮತಿ ಲಕ್ಷ್ಮಿಅರುಣಾ ಗೆ ಈ ಶುಭ ಸಂದರ್ಭದಲ್ಲಿ ಹೃದಯಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ. ಮತ್ತೊಮ್ಮೆ ವಿಶ್ವ ಮಹಿಳಾ ದಿನಾಚರಣೆ ಶುಭ ಸಂದರ್ಭದಲ್ಲಿ ಸಮಸ್ತ ಮಹಿಳೆಯರಿಗೆ ನನ್ನ ಹಾರ್ದಿಕ ಶುಭಾಶಯಗಳು…!!-ಗಾಲಿ ಜನಾರ್ಧನ ರೆಡ್ಡಿI WISH WOMEN A HAPPY WOMEN’S DAY!!ಮೈಯನು ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು…. ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು….!!The above lines are a part of the song sung by DR. Rajkumar, which speaks about the sacrifice, patience and affection which fill women’s heart. I am extremely happy to remind myself of this wonderful song. Women cannot explained through mere words. Their character, personality is unique to them. It is women who are responsible for the creation of the world. As Adi Shakti, women are ubiquitous, indeed an excellent creation of nature. Women have been given an important place in both Puranas and history. As Parvati to shiva, as Lakshmi to Vishnu and as Saraswati to Brahma, women have been responsible for creation and maintenance of rhythm of the entire world. To this wonderful creation of nature, that is women, the world thanks them through the celebration of International Women’s day. Last year, I had been to Ballari, with the permission from the Supreme Court to celebrate my 25th marriage anniversary. It was celebrated in a simple way. I am remembering the song which I dedicated to my wife, on that auspicious day. on this day, I thank my wife for being a part of my exhilarations and blues, for motivating me and for wishing for my welfare. I congratulate my wife lakshmi aruna for not only looking after my family and children, but also for looking after hundreds of families, who trusted her and were dependent on her, like a mother. Once again, HAPPY WOMEN’S DAY…!!- Gali Janardhan Reddy

Gali Janardhan Reddy ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮಾರ್ಚ್ 7, 2019