
ಹುಬ್ಬಳ್ಳಿ: ಹು- ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 40ರ ಗೋಪನಕೊಪ್ಪದ ಸಪ್ತಗಿರಿ ಪಾರ್ಕ್‌ನಲ್ಲಿ ನೂತನವಾಗಿ ಸುಧಾರಿತಗೊಂಡ ರಸ್ತೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಒಟ್ಟು 3.5 ಕೋಟಿ ರೂ. ವೆಚ್ಚದಲ್ಲಿ ಜೆ.ಕೆ. ಸ್ಕೂಲ್ ಮುಖ್ಯರಸ್ತೆಯ ಸುಂದರ ಟೌನ್, ಶಿರೂರುಪಾರ್ಕ್, ಸಪ್ತಗಿರಿ ಮುಖ್ಯರಸ್ತೆ ಸೇರಿದಂತೆ ಇತರೆಡೆಯ 8 ರಸ್ತೆಗಳನ್ನು ಗುಣಮಟ್ಟದ ಡಾಂಬರೀಕರಣ ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಈಶ್ವರಗೌಡ ಪಾಟೀಲ, ಶ್ರೀಶೈಲ ಜೋಡಳ್ಳಿ, ಮುತ್ತು ಪಾಟೀಲ, ಮಾರುತಿ ಅವರಸಂಗ, ರಾಯಪ್ಪ ಉಪ್ಪಾರ, ಯಲ್ಲಪ್ಪ ಇರನಟ್ಟಿ, ಚೇತನ, ಶ್ರೀಹರ್ಷಾ ಮೂರುಶಿಳ್ಳಿ, ಸಿದ್ದನಗೌಡ ಪಾಟೀಲ, ಬಸವರಾಜ ಹಳ್ಯಾಳ, ಅಜಯ ಕಟ್ಟಿ ಇತರರು ಉಪಸ್ಥಿತರಿದ್ದರು.