ಬೆಂಗಳೂರು : ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರು ಮಳೆಯಿಂದಾಗಿ ಎಲ್ಲೆಡೆ ಜಲಧಾರೆಯ ಉಕ್ಕಿ ಹರಿಯುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೂ ಲೆಚ್ಚಿಸದ ಜನ ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಸೊಬಗನ್ನು ಸವಿಯಲು ಪ್ರವಾಸಿತಾಣಗಳತ್ತ ಮುಖಮಾಡಿದ್ದಾರೆ.
ಜೋಗ ಜಲಪಾತ, ಗಗನಚುಕ್ಕಿ , ಭರಚುಕ್ಕಿ, ಬಿಳಿಗಿರಿ ರಂಗನ ಬೆಟ್ಟ, ನಂದಿಬೆಟ್ಟ , ಮೇಕೆದಾಟು, ಬಂಡೀಪುರ,ನಾಗರಹೊಳೆ, ತಲಕಾಡು ಹಾಗೂ ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿಬೆಟ್ಟು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿತ್ತಿದ್ದಾರೆ.
ಕರೊನಾ ಸೋಂಕು , ಲಾಕ್‌ಡೌನ್ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರಿಂದ ಕೆಲ ತಿಂಗಳುಗಳ ಕಾಲ ಪ್ರವಾಸಿಗರು ತಾಣಗಳಿಗೆ ಮುಖಮಾಡಿರಲಿಲ್ಲ.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿ ಅವಕಾಶ ಕಲ್ಪಿಸಿದ್ದರಿಂದ
ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಕುಳಿತು ಬೇಸರವಾಗಿದ್ದವರು, ಇದೀಗ ಪ್ರವಾಸಿತಾಣಗಳಿಗೆ ತೆರಳುತ್ತಿದ್ದಾರೆ.
ವಿವಿಧ ರಾಜ್ಯಗಳಿಂದ ಪ್ರವಾಸಿಗರ ಆಗಮನ :
ಮಹಾರಾಷ್ಟ್ರ, ಗುಜರಾತ್,ರಾಜಸ್ಥಾನ್, ಹೊರ ದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದು, ರಾಜ್ಯದ ಪ್ರಮುಖ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ.
ಜಲಧಾರೆಯಲ್ಲೇ ಸಂಭ್ರಮ :
ಚಿಕ್ಕಮಗಳೂರು ಹಾಗೂ ಮಡಿಕೇರಿ ಗುಡ್ಡಗಾಡು ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಟ್ಟ ,ಗುಡ್ಡಗಳ ಮಧ್ಯೆ ಹರಿಯುತ್ತಿರುವ ಜಲಧಾರೆಯಲ್ಲೇ ಕೆಲವರು ಆಟವಾಡಿಗೊಂಡು ಸಂಭ್ರಮಿಸುತ್ತಿದ್ದಾರೆ.
ಗರಿಗೆದರಿದ ಪರಿಸರ ಪ್ರವಾಸೋದ್ಯಮ :
ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಲಾಕ್‌ಡೌನ್‌ನಿಂದ ಪರಿಸರ ಪ್ರವಾಸೋದ್ಯಮಕ್ಕೆ ನಷ್ಟ ಉಂಟಾಗಿತ್ತು.ಆನ್‌ಲಾಕ್‌ನಿಂದ ಚೇತರಿಕೆ ಕಂಡಿದೆ.ಪರಿಸರ ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗಳು ತುಂಬಿ ತುಳುಕುತ್ತಿದ್ದು, ಕಳೆದ 20 ದಿನದಲ್ಲೇ 5 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿದೆ ಎಂದು ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.