‘ಫುಲ್​ ಮೀಲ್ಸ್​’ ತಿನ್ನಲು ರೆಡಿಯಾದ ಲಿಖಿತ್​ ಶೆಟ್ಟಿ; ಪೋಸ್ಟರ್​ ಬಿಡುಗಡೆ

blank

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ ‘ಫ್ಯಾಮಿಲಿ ಪ್ಯಾಕ್​’ ನಂತರ ನಾಯಕ ಲಿಖಿತ್​ ಈಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದ ಮೂಲಕ ಬಂದಿದ್ದಾರೆ. ಅದೇ ‘ಫುಲ್​ ಮೀಲ್ಸ್​’. ಈ ಚಿತ್ರಕ್ಕೆ ಅವರು ನಾಯಕನಷ್ಟೇ ಅಲ್ಲ, ನಿರ್ಮಾಪಕರೂ ಹೌದು.

ಇದನ್ನೂ ಓದಿ: ಕೋಮಲ್​ ಅಭಿನಯದ ‘ಯಲಾ ಕುನ್ನಿ’ ಮೂಲಕ ವಜ್ರಮುನಿ ಮೊಮ್ಮಗನ ಎಂಟ್ರಿ …

'ಫುಲ್​ ಮೀಲ್ಸ್​' ತಿನ್ನಲು ರೆಡಿಯಾದ ಲಿಖಿತ್​ ಶೆಟ್ಟಿ; ಪೋಸ್ಟರ್​ ಬಿಡುಗಡೆ‘ಫುಲ್​ ಮೀಲ್ಸ್​’ ಚಿತ್ರದ ಪೋಸ್ಟರ್​ ಇತ್ತೀಚೆಗೆ ಬಿಡುಡೆಯಾಗಿದೆ. ಇದೊಂದು ಮನರಂಜನಾತ್ಮಕ ಚಿತ್ರವಾಗಿದ್ದು, ಲಿಖಿತ್​ ಜತೆಗೆ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ನಟಿಸುತ್ತಿದ್ದಾರೆ. ಇಬ್ಬರು ನಾಯಕಿಯರ ಮಧ್ಯೆ ಪೆಚ್ಚಾಗಿ ಲಿಖಿತ್​ ನಿಂತಿದ್ದಾರೆ. ಚಿತ್ರತಂಡದವರು ಚಿತ್ರಕಥೆಯನ್ನು ಬಿಟ್ಟುಕೊಡದಿದ್ದರೂ, ಇಬ್ಬರೂ ನಾಯಕಿಯರ ಮಧ್ಯೆ ಒಬ್ಬ ಸಿಕ್ಕಿಕೊಂಡಾಗ ಏನಾಗುತ್ತದೆ ಎಂಬುದನ್ನು ಹಾಸ್ಯಮಯವಾಗಿ ಈ ಚಿತ್ರದಲ್ಲಿ ಹೇಳಲಾಗಿದೆ.

ಈಗಾಗಲೇ ‘ಫುಲ್​ ಮೀಲ್ಸ್​’ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಚಿತ್ರೀಕರಣ ಪೂರ್ಣವಾಗಲಿದೆ. ಈ ಚಿತ್ರಕ್ಕೆ ಎನ್​. ವಿನಾಯಕ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಾಜಿ ಪತ್ನಿ-ಸಹೋದರನ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಾಲಿವುಡ್​ ನಟ ನವಾಜುದ್ದೀನ್ ಸಿದ್ಧಿಕಿ

‘ಫುಲ್​ ಮೀಲ್ಸ್​’ ಚಿತ್ರದಲ್ಲಿ ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧು ಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್ ಶಾಸ್ತ್ರಿ, ಗಣೇಶ್ ರಾವ್ ಮುಂತಾದವರು ನಟಿಸಿದ್ದು, ಗುರುಕಿರಣ್ ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.

ಇಂಗ್ಲಿಷ್ ಮೋಹ.. ಟ್ರೋಲ್​ ಆದ ಮೋಹಕತಾರೆ; ವೀಕೆಂಡ್ ವಿದ್ ರಮೇಶ್ ಶೋನಲ್ಲಿನ ರಮ್ಯಾ ನಡೆಗೆ ಕಿಡಿಕಾರಿದ ಕನ್ನಡಿಗರು

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…