25.3 C
Bangalore
Friday, December 13, 2019

ಶನಿವಾರ ಫುಲ್ ಡೇ ಸ್ಕೂಲ್

Latest News

ಯುವತಿಯರನ್ನು ಚುಡಾಯಿಸುತ್ತಿದ್ದ ದೆಹಲಿ ಮೂಲದ ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಬೆಳಗಾವಿ: ಯುವತಿಯನ್ನ ಚೂಡಾಯಿಸುತ್ತಿದ್ದ ಯುವಕನಿಗೆ ಸಾರ್ವಜನಿಕರು ಹಿಗ್ಗಾ ಮಗ್ಗಾ ಥಳಿಸಿದ ಘಟನೆ ನಗರದ ಶಿವಾಜಿ ನಗರದಲ್ಲಿ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಯುವತಿಯರನ್ನು ಚುಡಾಯಿಸುತ್ತಿದ್ದ ಹಿನ್ನೆಲೆಯಲ್ಲಿ...

ಬಿಷಪ್ ವಿಲಿಯಂ ಕಡೆಯಿಂದ ತೊಂದರೆ ಆಗಿಲ್ಲ

ಮೈಸೂರು: ನನಗೆ ಮೈಸೂರಿನ ಬಿಷಪ್ ವಿಲಿಯಂ ಕಡೆಯಿಂದ ತೊಂದರೆ ಆಗಿಲ್ಲ. ಯಾರೋ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡು, ದೂರು ಬರೆಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಸಹನಾ ಹೇಳಿದರು. ಜಿಲ್ಲಾ ಪತ್ರಕರ್ತರ...

ಬಾಲಕಿ ಅತ್ಯಾಚಾರ ಖಂಡಿಸಿ ಗ್ರಾಮಸ್ಥರು ಕರೆಕೊಟ್ಟ ಕಡೋಲಿ ಬಂದ್ ಯಶಸ್ವಿ

ಬೆಳಗಾವಿ: ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಶುಕ್ರವಾರ ಗ್ರಾಮಸ್ಥರು ಕರೆ ಕೊಟಿದ್ದ ಕಡೋಲಿ ಬಂದ್​ ಸಂಪೂರ್ಣ ಯಶಸ್ವಿಯಾಯಿತು. 6 ವರ್ಷದ ಬಾಲಕಿಯ ಮೇಲೆ...

ನಿರ್ಭಯ ಪ್ರಕರಣ: ಮರಣದಂಡನೆ ಪಶ್ನಿಸಿದ ಆರೋಪಿಯ ಮೇಲ್ಮನವಿ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಸಂತ್ರಸ್ತೆ ತಾಯಿ

ನವದೆಹಲಿ: ನಿರ್ಭಯ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಓರ್ವ ಆರೋಪಿ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲಿಸಲು ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಮೇಲ್ಮನವಿಯನ್ನು ನಿರಾಕರಿಸುವಂತೆ ಸಂತ್ರಸ್ತೆಯ...

ವಿದ್ಯಾರ್ಥಿಗಳಿಗೆ ಕಲಾಪಗಳ ಅರಿವು ಇರಲಿ: ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಅರ್ಜುನ್ ಅಭಿಮತ

ಬಳ್ಳಾರಿ: ವಿದ್ಯಾರ್ಥಿಗಳಿಗೆ ಕಲಾಪಗಳ ಅರಿವು ಅತ್ಯವಶ್ಯವಾಗಿ ಬೇಕಾಗಿದ್ದು ಸಂಸತ್ ಚರ್ಚೆಯಂತ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಿ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಅರ್ಜುನ ಹೇಳಿದರು. ನಗರದ ಸಮಗ್ರ ಶಿಶು ಅಭಿವೃದ್ಧಿ...

ಮಂಗಳೂರು: ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಶಾಲೆಗಳಿಗೆ 6 ದಿನ ನಿರಂತರ ರಜೆ ಸಾರಲಾಗಿತ್ತು. ಕೈತಪ್ಪಿ ಹೋದ ಈ ಅವಧಿಯನ್ನು ಸರಿದೂಗಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶನಿವಾರ ಇಡೀ ದಿನ ತರಗತಿ ನಡೆಸಬೇಕೇ ಅಥವಾ ಮಧ್ಯಾವಧಿ ರಜೆ ಕಡಿತಗೊಳಿಸಿ ಶಾಲೆ ನಡೆಸಬೇಕೇ ಎನ್ನುವ ಕುರಿತು ಎರಡು ದಿನದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಡಿಡಿಪಿಐ ವೈ.ಶಿವರಾಮಯ್ಯ ತಿಳಿಸಿದ್ದಾರೆ.

ಶಾಲಾ ಅವಧಿಯನ್ನು ಯಾವ ರೀತಿ ಸರಿದೂಗಿಸಬೇಕು ಎನ್ನುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಲಾಗಿದೆ. ಈ ವೇಳೆ ಹಲವು ಅಭಿಪ್ರಾಯಗಳು ಬಂದಿದ್ದು, ಅಕ್ಟೋಬರ್ ರಜೆಯ 4-5 ದಿನವನ್ನು ತರಗತಿಗೆ ಬಳಸುವ ಬಗ್ಗೆಯೂ ಚರ್ಚೆ ನಡೆದಿದೆ. ಸರ್ಕಾರಿ ರಜೆ ಹೊರತುಪಡಿಸಿ ಮಳೆಯಿಂದಾಗಿ 5 ರಜೆ ನೀಡಲಾಗಿದ್ದು (ಮಂಗಳೂರು ತಾಲೂಕಿನಲ್ಲಿ ನಾಲ್ಕು) ಶನಿವಾರ ತರಗತಿ ನಡೆಸಿದರೆ 2 ತಿಂಗಳ ಕಾಲ ನಡೆಸಬೇಕಾಗುತ್ತದೆ. ಹಾಗಾಗಿ ಮಧ್ಯಾವಧಿ ರಜೆಯನ್ನು ಬಳಸಿಕೊಂಡರೆ ಎರಡು ತಿಂಗಳ ಕಾಲ ಶನಿವಾರ ಇಡೀ ದಿನ ತರಗತಿ ನಡೆಸುವುದು ತಪ್ಪುತ್ತದೆ. ಆದರೆ, ಮಧ್ಯಾವಧಿ ಪರೀಕ್ಷೆಗೆ ಮೊದಲು ತರಗತಿ ಪೂರ್ಣಗೊಳಿಸಬೇಕಿರುವುದರಿಂದ ಇದು ಅಸಾಧ್ಯ ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು. ಭಾನುವಾರ ತರಗತಿ ನಡೆಸುವುದಿಲ್ಲ ಎಂದು ಡಿಡಿಪಿಐ ಈ ವೇಳೆ ಸ್ಪಷ್ಟಪಡಿಸಿದರು.

ವಾರ ಪೂರ್ತಿ ಶಾಲೆಗೆ ರಜೆ: ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯ ಮಂಗಳೂರು ತಾಲೂಕು ಹೊರತುಪಡಿಸಿ ಎಲ್ಲ ತಾಲೂಕಿನಲ್ಲಿ 6 ದಿನವೂ ಶಾಲೆಗೆ ರಜೆಯಿತ್ತು. ಸೋಮವಾರ ನಾಗರ ಪಂಚಮಿ ಹಿನ್ನೆಲೆಯಲ್ಲಿ ರಜೆಯಿದ್ದರೆ, ಉಳಿದ 5 ದಿನ ಮಳೆ ಕಾರಣ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಮಾತ್ರ ಶಾಲೆಗಳು ನಡೆದಿತ್ತು. ಆ.12ರಂದು ಸೋಮವಾರ ಬಕ್ರೀದ್ ಹಿನ್ನೆಲೆಯಲ್ಲಿ ಶಾಲೆ ರಜೆಯಿತ್ತು. 9ದಿನಗಳ ನಂತರ ಶಾಲೆಗಳು ಆರಂಭವಾಗಿವೆ. ಈ ರಜಾ ಅವಧಿಯನ್ನು ಸರಿದೂಗಿಸಬೇಕಿದೆ.

ಕಳೆದ ವರ್ಷ ಶನಿವಾರ ಶಾಲೆ: ಕಳೆದ ವರ್ಷವೂ ಮಳೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಹಲವು ದಿನ ರಜೆ ಘೋಷಿಸಲಾಗಿತ್ತು. ಬಳಿಕ ಶನಿವಾರ ತರಗತಿ ನಡೆಸಿ ರಜೆಯನ್ನು ಸರಿದೂಗಿಸಲಾಗಿತ್ತು. ಈ ಬಾರಿಯೂ ಶನಿವಾರ ಶಾಲೆ ನಡೆಸುತ್ತೇವೆ ಎಂದು ಹಲವು ಶಾಲೆಗಳ ಮುಖ್ಯಸ್ಥರು ಸಂಪರ್ಕಿಸಿದ್ದು, ಉಪನಿರ್ದೇಶಕರ ಅಧಿಕೃತ ಆದೇಶ ಬರದೆ ಶಾಲೆ ನಡೆಸುವುದು ಬೇಡ ಎಂದು ತಿಳಿಸಿದ್ದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ವಿಜಯ ವಾಣಿಗೆ ತಿಳಿಸಿದ್ದಾರೆ.

ಶಾಲೆಗಳಿಗೆ ಆದೇಶ: ಮಳೆ ಪ್ರವಾಹದಿಂದಾಗಿ ರಸ್ತೆ ಸಂಪರ್ಕ ಕಡಿತ, ಸೇತುವೆ ಕುಸಿತ ಸಂಭವಿಸಿದ ಊರು, ಪ್ರದೇಶಗಳ ಮಕ್ಕಳನ್ನು ಶಾಲೆಗೆ ಹಾಜರಾಗುವಂತೆ ಒತ್ತಾಯಿಸಬಾರದು. ಎಲ್ಲವೂ ಸಹಜ ಸ್ಥಿತಿಗೆ ಬರುವವರೆಗೆ ಅವರಿಗೆ ವಿನಾಯಿತಿ ನೀಡಬೇಕು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ತಪಾಸಣೆ ಆರೋಗ್ಯ ಇಲಾಖೆ ಅಧಿಕಾರಿಗಳ ಮೂಲಕ ನಡೆಸಲು ಕ್ರಮಕೈಗೊಳ್ಳಬೇಕು. ನೆರೆಪೀಡಿತ ಪ್ರದೇಶಗಳ ಶಾಲೆಗಳ ಧಾರಣಾ ಸಾಮರ್ಥ್ಯ ಕುರಿತು ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್‌ಗಳ ಮೂಲಕ ತಪಾಸಣೆ ನಡೆಸಿ ಬಳಿಕ ತರಗತಿ ಆರಂಭಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಲೆಗಳ ಮುಖ್ಯಸ್ಥರಿಗೆ ಡಿಡಿಪಿಐ ಆದೇಶಿಸಿದ್ದಾರೆ. ನೆರೆಯಿಂದಾಗಿ ಜಿಲ್ಲೆಯ ನೂರು ಶಾಲೆಗಳಿಗೆ ಭಾಗಶಃ ಹಾನಿಯಾಗಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕಿನಲ್ಲಿ ಗರಿಷ್ಠ ಹಾನಿಯಾಗಿದೆ.

 ಉಡುಪಿ ಪ್ರೌಢಶಾಲೆಗಳಿಗೆ ಶನಿವಾರ ವಿಶೇಷ ತರಗತಿ
ಉಡುಪಿ:
ನಿರಂತರ ರಜೆ ಹಿನ್ನೆಲೆಯಲ್ಲಿ ಪಾಠ, ಶೈಕ್ಷಣಿಕ ಚಟುವಟಿಕೆ ಸರಿದೂಗಿಸುವ ನಿಟ್ಟಿನಲ್ಲಿ ಶನಿವಾರ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ. ಪ್ರೌಢಶಾಲೆಯಲ್ಲಿ ಶನಿವಾರ ಇಡೀ ದಿನ ವಿಶೇಷ ತರಗತಿಗಳು ಈಗಲೂ ನಡೆಯುತ್ತಿದೆ. ಈ ಬಗ್ಗೆ ವಿಶೇಷ ಆದೇಶವೇನು ಹೊರಡಿಸುವುದಿಲ್ಲ. ಪಾಠ, ಪ್ರವಚನಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಶಾಲೆಗಳ ಮುಖ್ಯಸ್ಥರಿಗೆ, ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಅದರಂತೆ ತರಗತಿಗಳು ನಡೆಯುತ್ತಿದೆ. ಪ್ರಾಥಮಿಕ ಶಾಲೆಗಳ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ, ಭಾನುವಾರ ತರಗತಿ ನಡೆಸುವ ಬಗ್ಗೆ ತೀರ್ಮಾನವಾಗಿಲ್ಲ. ಆದೇಶವು ಹೊರಡಿಸಿಲ್ಲ ಎಂದು ಡಿಡಿಪಿಐ ಸ್ಪಷ್ಟಪಡಿಸಿದ್ದಾರೆ.

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...