More

    ರೆಸಲೂಷನ್​ 2019 ಹೀಗೆಲ್ಲಾ ಆಯ್ತಪ್ಪ: ಸ್ವಿಚ್ ಆಫ್ ಆಗದ ಫೋನ್!

    ಜನವರಿ ಎಂದರೆ ಹಲವರಿಗೆ ಅದು ‘ಸಾಧನೆ’ಯ ಮಾಸ. ಹೋದ ವರ್ಷ ಮಾಡದ ಏನಾದರೊಂದು ಸಾಧನೆ ಈ ವರ್ಷ ಮಾಡಬೇಕು ಎನ್ನುವ ಹಂಬಲ. ಕಳೆದ ವರ್ಷ ಇಂಥದ್ದೇ ರೆಸಲೂಷನ್ ಮಾಡಿ ಎಷ್ಟರಮಟ್ಟಿಗೆ ಸಕ್ಸಸ್ ಆಗಿದ್ದೀರಿ ಎಂದು ವಿಜಯವಾಣಿ ಕೇಳಿದ ಪ್ರಶ್ನೆಗೆ ಬಂದ ಸಾವಿರಾರು ಪತ್ರಗಳಲ್ಲಿ ಆಯ್ದ ಕೆಲವು ಪತ್ರಗಳ ಎರಡನೆಯ ಭಾಗ.

    ಸ್ವಿಚ್ ಆಫ್ ಆಗದ ಫೋನ್!

    ಸ್ಮಾರ್ಟ್​ಫೋನ್ ಎಂಬ ಮಾಯಾ ಜಗತ್ತಿನಿಂದ ಹೊರಬರುವ ಸವಾಲನ್ನು ಸ್ವೀಕರಿಸಿದ್ದೆ. ಮೊಬೈಲ್​ಗೆ ಗುಡ್​ಬೈ ಹೇಳಲೇಬೇಕು ಎಂದುಕೊಂಡೆ. ಇದು ತುಂಬಾ ಸಿಂಪಲ್, ಫೋನ್ ಸ್ವಿಚ್ ಆಫ್ ಮಾಡಿದ್ರೆ ಆಯ್ತಲ್ಲ ಎಂದುಕೊಂಡೆ.ಆರಂಭದ ಎರಡು ದಿನ ಫೋನ್ ಸ್ವಿಚ್ ಆಫ್! ರೆಸಲೂಷನ್ ಸಕ್ಸಸ್ ಆಗಿದ್ದಕ್ಕೆ ಖುಷಿಯೋ ಖುಷಿ. ಆದರೆ ಮೂರನೇ ದಿನ…! ಇವತ್ತು ಪವಿ ಏನ್ ಸ್ಟೇಟಸ್ ಹಾಕಿರಬಹುದು? ಡಿ.ಪಿ ಚೇಂಜ್ ಮಾಡಿದ್ಲಾ? ಎಂಬ ಯೋಚನೆ ಬಂದು, ಒಂದು ಸಲ ತಾನೆ? ಫೋನ್ ಆನ್ ಮಾಡಿ ಮತ್ತೆ ಸ್ವಿಚ್ ಆಫ್ ಇಟ್ಟರಾಯ್ತು ಎಂದುಕೊಂಡೆ. ಮೊಬೈಲ್ ಆನ್ ಆಯ್ತು. ಪವಿಯ ಸೀರೆ ತುಂಬಾ ಇಷ್ಟವಾಗಿ ‘ಹಾಯ್ ಪವಿ, ಡಿ.ಪಿ. ಸೀರೆ ಚೆನ್ನಾಗಿದೆ ಕಣೆ, ಎಲ್ ತಗೊಂಡೆ…’ ಹೀಗೆ ಶುರು ಆದ ನಮ್ ಮಾತಿನಿಂದಾಗಿ, ಇದುವರೆಗೂ ಫೋನ್ ಸ್ವಿಚ್ ಆಫ್ ಆಗ್ಲೇ ಇಲ್ಲ!

    | ಶಿಲ್ಪಾ ಮೋಹನ್ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts