More

    ರೆಸಲೂಷನ್​ 2019 ಹೀಗೆಲ್ಲಾ ಆಯ್ತಪ್ಪ: ಅಮ್ಮಂದಿರು ರೇಗಲೇಬೇಕಾಗತ್ತೆ ಬಿಡಿ

    ಜನವರಿ ಎಂದರೆ ಹಲವರಿಗೆ ಅದು ‘ಸಾಧನೆ’ಯ ಮಾಸ. ಹೋದ ವರ್ಷ ಮಾಡದ ಏನಾದರೊಂದು ಸಾಧನೆ ಈ ವರ್ಷ ಮಾಡಬೇಕು ಎನ್ನುವ ಹಂಬಲ. ಕಳೆದ ವರ್ಷ ಇಂಥದ್ದೇ ರೆಸಲೂಷನ್ ಮಾಡಿ ಎಷ್ಟರಮಟ್ಟಿಗೆ ಸಕ್ಸಸ್ ಆಗಿದ್ದೀರಿ ಎಂದು ವಿಜಯವಾಣಿ ಕೇಳಿದ ಪ್ರಶ್ನೆಗೆ ಬಂದ ಸಾವಿರಾರು ಪತ್ರಗಳಲ್ಲಿ ಆಯ್ದ ಕೆಲವು ಪತ್ರಗಳ ಎರಡನೆಯ ಭಾಗ.

    ಅಮ್ಮಂದಿರು ರೇಗಲೇಬೇಕಾಗತ್ತೆ ಬಿಡಿ

    ಮಗ ಬೆಳೀತಾ ಇದ್ದಾನೆ. ಅವನ ಮೇಲೆ ರೇಗೋದು ಕಡಿಮೆ ಮಾಡು ಅಂತ ಪದೇ ಪದೇ ಮನೆಯವರು ಹೇಳಿದ ಮಾತನ್ನು ಈ ವರ್ಷವಾದರೂ ಪಾಲಿಸಬೇಕು ಅಂತ ಅಂದುಕೊಂಡಿದ್ದೆ. ಅದೇ ಸಂಕಲ್ಪದಿಂದ ಎರಡು ದಿನ ತಾಳ್ಮೆ ತಗೊಂಡಿದ್ದೆ. ಯಾಕೆ ಅಮ್ಮ ರೇಗೋದು ಕಾಣಿಸ್ತಿಲ್ಲ ಅಂತ ನನ್ನ ಮುಖ ನೋಡಿ ಅಮ್ಮನಿಗೇನಾದ್ರು ಆಗಿದ್ಯಾ ಅಂತ ವಿಚಿತ್ರವಾಗಿ ನೋಡ್ತಿದ್ದ ಮಗ. ನಾನು ಖುಷಿಯಲ್ಲಿ ಕ್ಯಾಲೆಂಡರ್ ಮೇಲೆ ‘ಬೈದಿಲ್ಲ ಬೈದಿಲ್ಲ’ ಅಂತ ಬರೆದಿಟ್ಟೆ. ಮೂರನೆಯ ದಿನ ಬೆಳಗ್ಗೆ ಶಾಲೆಗೆ ಹೊರಟವನು ‘ಮರೆತೆ’ ಎಂದು ಮನೆಗೆ ಬಂದವ ಪಾಕೆಟ್ ಮನಿಯಿಂದ ಹಣವನ್ನು ಬ್ಯಾಗ್​ಗೆ ಹಾಕಿಕೊಳ್ಳುವುದನ್ನು ನೋಡಿದೆ. ಇದ್ಯಾಕೆ ಕಳ್ಳನ ಹಾಗೆ ಹಣ ಅಡಗಿಸ್ತಾ ಇದ್ದಾನೆ ಎಂದುಕೊಂಡು ರೆಸಲೂಷನ್ ಮರೆತೆ. ರೇಗೋಕೆ ಶುರು ಮಾಡಿದೆ. ಅಮ್ಮ ತನ್ನ ಮೊದಲಿನ ರೂಪಕ್ಕೆ ಬಂದಿದ್ದಾಳೆ ಎಂದು ತಿಳಿದ ತಕ್ಷಣ ಮಗ ಸತ್ಯ ಹೇಳಿದ, ‘ನಿನ್ನೆ ನನ್ನ ಫ್ರೆಂಡ್ ಮನೆಯಲ್ಲಿ ಹೇಳದೆ ಹಣ ತಂದು ಸ್ನಾ್ಯಕ್ಸ್ ಕೊಟ್ಟಿದ್ದ. ಇವತ್ತು ನನ್ನ ಬಾರಿ’ ಅಂತ ತಲೆ ತಗ್ಗಿಸಿದ. ರೇಗುತ್ತಲೇ ಬುದ್ಧಿ ಹೇಳಿದೆ. ಮತ್ತೆ ಅವನು ಅಂಥ ಕೆಲಸ ಮಾಡಲಿಲ್ಲ. ಅವನ ಸ್ನೇಹಿತನ ಮನೆಗೂ ವಿಷಯ ತಿಳಿಸಿದೆ. ಒಟ್ನಲ್ಲಿ ರೆಸಲೂಷನ್ ಠುಸ್ ಆಯ್ತು. ಅಮ್ಮಂದಿರು ಒಂದೊಂದ್ ಸಲನಾದರೂ ರೇಗಲೇಬೇಕಾಗತ್ತೆ ಬಿಡಿ ಅಲ್ವಾ?

    | ರಜನಿಭಟ್ ಕಲ್ಮಡ್ಕ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts