More

    ರೆಸಲೂಷನ್​ 2019 ಹೀಗೆಲ್ಲಾ ಆಯ್ತಪ್ಪ: ಕೆಲ್ಸ ಸಿಗ್ತು, ಆದ್ರೆ ಮದ್ವೆ…?

    ಜನವರಿ ಎಂದರೆ ಹಲವರಿಗೆ ಅದು ‘ಸಾಧನೆ’ಯ ಮಾಸ. ಹೋದ ವರ್ಷ ಮಾಡದ ಏನಾದರೊಂದು ಸಾಧನೆ ಈ ವರ್ಷ ಮಾಡಬೇಕು ಎನ್ನುವ ಹಂಬಲ. ಕಳೆದ ವರ್ಷ ಇಂಥದ್ದೇ ರೆಸಲೂಷನ್ ಮಾಡಿ ಎಷ್ಟರಮಟ್ಟಿಗೆ ಸಕ್ಸಸ್ ಆಗಿದ್ದೀರಿ ಎಂದು ವಿಜಯವಾಣಿ ಕೇಳಿದ ಪ್ರಶ್ನೆಗೆ ಬಂದ ಸಾವಿರಾರು ಪತ್ರಗಳಲ್ಲಿ ಆಯ್ದ ಕೆಲವು ಪತ್ರಗಳ ಎರಡನೆಯ ಭಾಗ.

    ಕೆಲ್ಸ ಸಿಗ್ತು, ಆದ್ರೆ ಮದ್ವೆ…?

    ವಯಸ್ಸು ಮೂವತ್ತರ ಮೇಲಾಯ್ತು, ನನ್ನ ಸರಿಕರು ತಿಂಗಳಿಗೆ 20-30ಸಾವಿರ ದುಡಿಯುತ್ತಿದ್ದಾರೆ. ಅವರಿಗೆ ಮದುವೆಯಾಗಿ ಮಕ್ಕಳಿವೆ. ಆದರೆ ನನ್ನ ಕೈಯಲ್ಲಿ ಇನ್ನೂ ನೆಟ್ಟಗೊಂದು ಕೆಲಸವಿಲ್ಲ. ಸಿಕ್ಕ ಸಿಕ್ಕ ಕಡೆಗಳಲ್ಲಿ, ಕೊಟ್ಟಷ್ಟು ಹಣಕ್ಕೆ ದುಡಿಯೋದು. ಹೀಗೆ ಹೋದ್ರೆ ಯೂಸ್ ಆಗಲ್ಲಾ, ಎಂಬ ಮಾತನ್ನು ಮನದಟ್ಟು ಮಾಡಿಕೊಂಡು. ಅದೇನಾದರೂ ಸರಿಯೇ, 2019ರಲ್ಲೊಂದು ಕೆಲಸ ಹಿಡಿದು ನೆಲೆ ನಿಲ್ಲೋಣ, ಆಮೇಲೆ ಮದುವೆ, ಮಕ್ಕಳೆಂದು ಅಂದುಕೊಂಡದ್ದರ ಪರಿಣಾಮವಾಗಿ ಪತ್ರಿಕೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೇನೆ. ಸಂಬಳವೂ ಚೆನ್ನಾಗಿದೆ.ಕೆಲಸವೇನೋ ಅಂದುಕೊಂಡಂತೆ ಸಾಧಿಸಿಬಿಟ್ಟೆ, ಇನ್ನು ಮದುವೆ? ಈ ಹಾಳಾದ್ ಹಾರ್ಟ್​ನಲ್ಲಿ ಹೊಸ ಹೊಸ ಹುಡುಗಿಯರ ಹಾವಳಿ ಹೆಚ್ಚಾಗಿರೋ ಕಾರಣ, ಸದ್ಯ ಮದುವೆಯ ರೆಸಲೂಷನ್ ಮುಂದಕ್ಕೆ ಹಾಕಿದ್ದೇನೆ!

    | ಮಂಜುನಾಥ.ಎಸ್.ಕಟ್ಟಿಮನಿ ಇಬ್ರಾಹಿಮಪೂರ, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts