ನೀರವ್​ಗಿಲ್ಲ ಜಾಮೀನು, ಜೈಲೇ ಗತಿ: ಮನವಿ ತಿರಸ್ಕರಿಸಿದ ಲಂಡನ್ ಕೋರ್ಟ್

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ (ಪಿಎನ್​ಬಿ) ಸಾವಿರಾರು ಕೋಟಿ ವಂಚನೆಗೈದು ಬ್ರಿಟನ್​ಗೆ ಪರಾರಿಯಾಗಿರುವ ಆರ್ಥಿಕ ಅಪರಾಧಿ ನೀರವ್ ಮೋದಿ ಜಾಮೀನು ಕೋರಿಕೆಯನ್ನು ವೆಸ್ಟ್​ಮಿನ್​ಸ್ಟರ್ ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ. ಜತೆಗೆ ನ್ಯಾಯಾಂಗ ಬಂಧನವನ್ನು ಇನ್ನೂ 28 ದಿನ ವಿಸ್ತರಿಸಿದೆ.

ನೀರವ್ ಪರ ವಕೀಲರ ಮನವಿಯನ್ನು ಮುಖ್ಯ ನ್ಯಾಯಾಧೀಶೆ ಎಮ್ಮಾ ಅರ್ಬುತ್ನೋಟ್ ಪುರಸ್ಕರಿಸಲಿಲ್ಲ. ಜಾಮೀನು ಕುರಿತಾದ ಸಂಕ್ಷಿಪ್ತ ವಿಚಾರಣೆಯನ್ನು ಮೇ 24 ಮತ್ತು ಗಡಿಪಾರು ಪ್ರಕರಣದ ವಿಸõತ ವಿಚಾರಣೆಯನ್ನು ಮೇ 30ಕ್ಕೆ ನಡೆಸುವುದಾಗಿ ಹೇಳಿದ್ದಾರೆ.

ವಿಡಿಯೋ ಕಾನ್ಪರೆನ್ಸ್​ನಲ್ಲಿ ಹಾಜರು: ಮನವಿ ಅರ್ಜಿ ತಿರಸ್ಕೃತಗೊಂಡ ಬಳಿಕ, ಹೆಚ್ಚಿನ ದಾಖಲೆಗಳನ್ನು ಲಗತ್ತಿಸಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬೇಕಿದ್ದರೆ ಸೂಚಿಸಬೇಕೆಂದು ನೀರವ್ ಪರ ವಕೀಲರು ಕೋರ್ಟ್​ಗೆ ವಿನಂತಿ ಮಾಡಿದರು. ಆದರೆ ನ್ಯಾಯಾಧೀಶರು ಅದನ್ನು ಪರಿಗಣಿಸಲಿಲ್ಲ. ವ್ಯಾಂಡ್ಸ್​ವರ್ತ್

ಸೆರೆಮನೆಯಲ್ಲಿ ಸದ್ಯ ಬಂಧಿಯಾಗಿರುವ ನೀರವ್ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ವೆಸ್ಟ್​ಮಿನ್​ಸ್ಟರ್ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗಿಯಾಗಿದ್ದರು.

ಲಂಡನ್​ನಲ್ಲಿ ನೆಲೆಸಿರುವ 48 ವರ್ಷದ ನೀರವ್ -ಠಿ; 12 ಸಾವಿರ ಕೋಟಿ ಸಾಲ ಮರುಪಾವತಿಸಬೇಕಿದೆ. ಅವರನ್ನು ಹಸ್ತಾಂತರಿಸುವಂತೆ ಭಾರತದ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇ.ಡಿ) ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. ಈ ಅರ್ಜಿಯನ್ನು ಮಾನ್ಯ ಮಾಡಿ ವೆಸ್ಟ್​ಮಿನ್​ಸ್ಟರ್ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಸಂಬಂಧ ನೀರವ್​ರನ್ನು ಕಳೆದ ಮಾ.19ರಂದು ಬ್ರಿಟನ್ ಪೊಲೀಸರು ಬಂಧಿಸಿದ್ದರು. ಕೂಡಲೇ ಜಾಮೀನು ನೀಡುವಂತೆ ನೀರವ್ ಕೋರ್ಟ್

ಮೊರೆಹೋಗಿದ್ದರಾದರೂ, ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ಮಾರ್ಚ್ 29ರಂದು ಎರಡನೇ ಬಾರಿ ನೀರವ್ ಜಾಮೀನು ಅರ್ಜಿ ಸಲ್ಲಿಸಿದ್ದರು. ತಮ್ಮ ಪ್ರಭಾವ ಬೀರಿ ಆರೋಪಿ ನೀರವ್ ಸಾಕ್ಷಿಗಳನ್ನು ನಾಶ ಪಡಿಸುವ

ಸಾಧ್ಯತೆ ಹೆಚ್ಚಿದೆ ಎಂದು ಸಿಬಿಐ ಮತ್ತು ಇ.ಡಿ ವಾದಿಸಿದ್ದವು. ಪರಿಣಾಮ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಭಾರತದ ತನಿಖಾ ಸಂಸ್ಥೆಗಳ ಪರವಾಗಿ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (ಸಿಪಿಎಸ್) ವಕಾಲತ್ತು ವಹಿಸಿದೆ.

-ಠಿ;3.28 ಕೋಟಿಗೆ ಕಾರು ಹರಾಜು

ಪಿಎನ್​ಬಿ ಹಗರಣದ ಪ್ರಮುಖ ಆರೋಪಿಗಳಾದ ನೀರವ್ ಮೋದಿ ಮತ್ತು ಆತನ ಸಂಬಂಧಿ ಮೆಹುಲ್ ಚೋಕ್ಸಿಗೆ ಸೇರಿದ 12 ಕಾರುಗಳನ್ನು ಗುರುವಾರ ಹರಾಜು ಹಾಕಲಾಗಿದೆ. ಇವು -ಠಿ; 2.70 ಲಕ್ಷದಿಂದ -ಠಿ; 1.33 ಕೋಟಿವರೆಗೂ ಮಾರಾಟವಾಗಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನೀರವ್​ಗೆ ಸೇರಿದ ಕಾರುಗಳನ್ನು (ಬಹುತೇಕ ಐಷಾರಾಮಿ ಕಾರು) ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿತ್ತು. ರೋಲ್ಸ್ ರಾಯ್್ಸ ಕಾರು -ಠಿ; 1.30 ಕೋಟಿಗೆ ಹರಾಜಾಗಿದೆ. ಈ ಹರಾಜಿನಿಂದ ಇ.ಡಿ.ಗೆ ಒಟ್ಟಾರೆ -ಠಿ; 3.28 ಕೋಟಿ ಸಂಗ್ರಹವಾಗಿದೆ.