ಇಂಧನ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

ಗೋಕಾಕ: ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸಿದ್ದರೂ ರಾಜ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪೆಟ್ರೋಲ್, ಡೀಸೆಲ್ ತೆರಿಗೆ ದರ ಹೆಚ್ಚಿಸಿದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಭಾನುವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆದು, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ತೆರಿಗೆ ದರ ಹೆಚ್ಚಿಸಿ ಜನತೆ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೆ ಸರ್ಕಾರ ಹೆಚ್ಚಿಸಿದ ತೆರಿಗೆ ದರ ಕಡಿತಗೊಳಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಗ್ರಾಮೀಣ ಘಟಕದ ಅಧ್ಯಕ್ಷ ವಿರೂಪಾಕ್ಷ ಯಲಿಗಾರ, ಲಕ್ಕಪ್ಪ ತಹಸೀಲ್ದಾರ್, ವಿವೇಕ ವಾಡ್ಕರ, ಜಗದೀಶ ಸದರಜೋಶಿ, ಶಕೀಲ ಧಾರವಾಡಕರ, ಉಮೇಶ ನಿರ್ವಾಣಿ, ಚಿದಾನಂದ ದೇಮಶೆಟ್ಟಿ, ಲಕ್ಷ್ಮಣ ತಳ್ಳಿ, ವೀರೇಂದ್ರ ಎಕ್ಕೇರಿಮಠ, ಬಸವರಾಜ ಹಿರೇಮಠ, ತವನಪ್ಪ ಬೆನ್ನಾಡಿ, ಬಸಲಿಂಗಪ್ಪ ನಾವಲಗಟ್ಟಿ, ಇತರರು ಇದ್ದರು.