ಪೆಟ್ರೋಲ್​, ಡೀಸೆಲ್ ಬೆಲೆ ಇಳಿಕೆ; ಹೊಸ ವರ್ಷದ ಖುಷಿಗೆ ಇಂಬು ನೀಡಿದ ತೈಲ ದರ

ಬೆಂಗಳೂರು: ಸತತ ಐದು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಇಳಿಕೆ ಮುಂದುವರಿದಿದ್ದು, ದೇಶಾದ್ಯಂತ ಹೊಸ ವರ್ಷವಾದ ಮಂಗಳವಾರವೂ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ 19 ಪೈಸೆ ಇಳಿಕೆಯಾಗಿ 68.65 ರೂ.ಗೆ ಮಾರಾಟವಾಗಿದ್ದರೆ, 20 ಪೈಸೆ ಇಳಿಕೆ ನಂತರ ಡೀಸೆಲ್​ 62.66 ರೂ. ಆಗಿದೆ.

ಇನ್ನು ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಕ್ರಮವಾಗಿ 10 ಪೈಸೆ, 20 ಪೈಸೆ ಇಳಿಕೆಯಾಗಿ, 69.26 ರೂ. ಮತ್ತು 63.05 ರೂ.ಗೆ ಮಾರಾಟಗೊಳ್ಳುತ್ತಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್​ 17 ಪೈಸೆ ಇಳಿಕೆ ನಂತರ 74.30 ರೂ. 20 ಪೈಸೆ ಇಳಿಕೆ ನಂತರ ಡೀಸೆಲ್​ 65.56 ರೂ. ಆಗಿದೆ. ಕೋಲ್ಕತ, ಚೆನ್ನೈ ಮತ್ತು ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್​ ಕ್ರಮವಾಗಿ 70.78 ರೂ., 71.22 ರೂ. ಮತ್ತು 66.14 ರೂ.ಗೆ ಮಾರಾಟಗೊಳ್ಳುತ್ತದೆ. ಅದೇ ರೀತಿ ಡೀಸೆಲ್​ ಕ್ರಮವಾಗಿ 64.42, 66.14 ಮತ್ತು 62.13 ರೂ.ಗೆ ಮಾರಾಟವಾಗುತ್ತಿದೆ.

ಕಳೆದ ವರ್ಷ ಅಕ್ಟೋಬರ್​ 4 ರಂದು ಪೆಟ್ರೋಲ್ ದರ ದೆಹಲಿಯಲ್ಲಿ 84 ರೂ. ಮತ್ತು ಮುಂಬೈನಲ್ಲಿ 91 .34 ರೂ. ತಲುಪಿ ​ ದಾಖಲೆಯ ಮಟ್ಟದ ಏರಿಕೆ ಕಂಡಿತ್ತು. (ಏಜೆನ್ಸೀಸ್)