ದಾಖಲೆಯ ಸತತ ಇಳಿಕೆ ಕಾಣುತ್ತಿರುವ ಪೆಟ್ರೋಲ್‌, ಡೀಸೆಲ್‌ ಬೆಲೆ! ಗ್ರಾಹಕರಿಗೆ ರಿಲೀಫ್‌

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಕಳೆದ ಎರಡು ತಿಂಗಳಿಂದಲೂ ಇಂಧನ ಬೆಲೆಯಲ್ಲಿ ಇಳಿಕೆ ಕಾಣುತ್ತಲೇ ಸಾಗಿದ್ದು, ವರ್ಷದ ಕೊನೆ ದಿನವೂ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಗೆ ಸಾಕ್ಷಿಯಾಗಿದೆ. ಪೆಟ್ರೋಲ್‌ ಲೀ.ಗೆ 20 ಪೈಸೆ ಮತ್ತು ಡೀಸೆಲ್‌ಗೆ 23 ಪೈಸೆ ದೇಶದ ಪ್ರಮುಖ ನಗರಗಳಲ್ಲಿ ಕಡಿಮೆಯಾಗಿದೆ.

ಬೆಂಗಳೂರೂ ಕೂಡ ಬೆಲೆ ಇಳಿಕೆಗೆ ಸಾಕ್ಷಿಯಾಗಿದ್ದು, ಭಾನುವಾರ ಲೀಟರ್‌ ಪೆಟ್ರೋಲ್‌ಗೆ 21 ಪೈಸೆ ಇಳಿಕೆಯಾಗುವ ಮೂಲಕ 69.39 ರೂ.ಗಳಷ್ಟಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ 23 ಪೈಸೆ ಇಳಿಕೆಯಾಗಿ 63.20 ರೂ.ಗೆ ಮಾರಾಟವಾಗುತ್ತಿದೆ.

ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 20 ಪೈಸೆ ಕಡಿಮೆಯಾಗುವ ಮೂಲಕ 68.84 ರೂ.ಗಳಷ್ಟಿದ್ದರೆ, ಡೀಸೆಲ್‌ 23 ಪೈಸೆ ಇಳಿಕೆಯಾಗುವ ಮೂಲಕ 62.86 ರೂ.ಗಳಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಲೀ. ಪೆಟ್ರೋಲ್‌ 74.47 ರೂ.ಗೆ ಮಾರಾಟವಾಗುತ್ತಿದ್ದು, 20 ಪೈಸೆ ಕಡಿಮೆಯಾಗಿದೆ. ಇನ್ನು ಡೀಸೆಲ್‌ ಲೀ.ಗೆ 25 ಪೈಸೆ ಕಡಿಮೆಯಾಗಿ 65.76 ರೂ.ಗಳಷ್ಟಿದೆ.

ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 21 ಪೈಸೆ ಕಡಿಮೆಯಾಗಿ 71.42 ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 66.36 ರೂ.ಗಳಿಗೆ ಮಾರಾಟವಾಗುವ ಮೂಲಕ 24 ಪೈಸೆ ಇಳಿಕೆಯಾಗಿದೆ. ಅದೇ ರೀತಿ ಕೋಲ್ಕತಾದಲ್ಲಿಯೂ 19 ಪೈಸೆ ಕಡಿಮೆಯಾಗಿ 70.96 ರೂ.ಗೆ ಪೆಟ್ರೋಲ್‌ ಮಾರಾಟವಾಗುತ್ತಿದ್ದು, ಡೀಸೆಲ್‌ ಪ್ರತಿ ಲೀಟರ್‌ಗೆ 23 ಪೈಸೆ ಕಡಿಮೆಯಾಗಿ 64.61 ರೂ.ಗಳಷ್ಟಿದೆ. (ಏಜೆನ್ಸೀಸ್)