ಎರಡು ದಿನಗಳ ನಂತರ ಮತ್ತೆ ಇಳಿದ ಪೆಟ್ರೋಲ್​, ಡೀಸೆಲ್​ ಬೆಲೆ

ಬೆಂಗಳೂರು: ಕಳೆದ ಎರಡು ದಿನಗಳಿಂದ ಯಾವುದೇ ವ್ಯತ್ಯಾಸ ಕಾಣದ ಪೆಟ್ರೋಲ್, ಡೀಸೆಲ್​ ಬೆಲೆಯಲ್ಲಿ ಶುಕ್ರವಾರ ಇಳಿಕೆ ಕಂಡು ಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀ. ಪೆಟ್ರೋಲ್​ ದರದಲ್ಲಿ 21 ಪೈಸೆ ಇಳಿಕೆಯಾಗಿದ್ದು 68.44 ರೂ. ಆಗಿದೆ. ಡೀಸೆಲ್​ ಬೆಲೆಯಲ್ಲಿ 22 ಪೈಸೆ ಇಳಿಕೆಯಾಗಿ 62.44 ರೂ.ಗೆ ಮಾರಾಟವಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ತೈಲ ದರದ ವ್ಯತ್ಯಾಸದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಶುಕ್ರವಾರ ಬೆಲೆ ಇಳಿಕೆಯಾಗಿದೆ. ಸಿಲಿಕಾನ್​ ಸಿಟಿಯಲ್ಲಿ ಲೀ. ಪೆಟ್ರೊಲ್​, ಡೀಸೆಲ್​ ದರ ಕ್ರಮವಾಗಿ 69.01 ರೂ. (20 ಪೈಸೆ ಇಳಿಕೆ) ಮತ್ತು 62.80 ರೂ. (21 ಪೈಸೆ ಇಳಿಕೆ) ಆಗಿದೆ.

ಮೆಟ್ರೋ ನಗರಗಳ ಇಂದಿನ ಪೆಟ್ರೋಲ್​ ದರ

  • ಮುಂಬೈ- 74.10 ರೂ. (20 ಪೈಸೆ ಇಳಿಕೆ)​
  • ಕೋಲ್ಕತ- 70.58 ರೂ. (20 ಪೈಸೆ ಇಳಿಕೆ)
  • ಚೆನ್ನೈ- 71.01 ರೂ. (21 ಪೈಸೆ ಇಳಿಕೆ)​

ಮೆಟ್ರೋ ನಗರಗಳ ಇಂದಿನ ಡೀಸೆಲ್​​ ದರ

  • ಮುಂಬೈ- 65.34 ರೂ. (22 ಪೈಸೆ ಇಳಿಕೆ)
  • ಕೋಲ್ಕತ- 64.21 ರೂ. (21 ಪೈಸೆ ಇಳಿಕೆ)
  • ಚೆನ್ನೈ- 65.91 ರೂ. (23 ಪೈಸೆ ಇಳಿಕೆ)

One Reply to “ಎರಡು ದಿನಗಳ ನಂತರ ಮತ್ತೆ ಇಳಿದ ಪೆಟ್ರೋಲ್​, ಡೀಸೆಲ್​ ಬೆಲೆ”

Comments are closed.