ಮತ್ತೆ ಉತ್ತರಮುಖಿಯಾದ ಪೆಟ್ರೋಲ್‌, ಡೀಸೆಲ್‌ ಬೆಲೆ! ಬೆಂಗಳೂರಿನಲ್ಲೆಷ್ಟು?

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತ ಆರನೇ ದಿನವಾದ ಮಂಗಳವಾರವೂ ಇಂಧನ ಬೆಲೆಯನ್ನು ಏರಿಕೆ ಮಾಡಿವೆ. ಇದರಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಿದೆ.

ಬೆಂಗಳೂರಿನಲ್ಲೂ ಕೂಡ ಇಂಧನ ಬೆಲೆ ಏರಿಕೆಗೆ ಸಾಕ್ಷಿಯಾಗಿದ್ದು, ಲೀಟರ್‌ ಪೆಟ್ರೋಲ್‌ಗೆ 09 ಪೈಸೆ ಹೆಚ್ಚಾಗಿ, 74.04 ರೂ. ತಲುಪಿದೆ. ಇನ್ನು ಡೀಸೆಲ್‌ ಬೆಲೆಯಲ್ಲೂ 13 ಪೈಸೆ ಏರಿಕೆಯಾಗಿದ್ದು, 69.14 ರೂ.ಗೆ ಮಾರಾಟವಾಗುತ್ತಿದೆ.

ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 09 ಪೈಸೆ ಏರಿಕೆಯಾಗುವ ಮೂಲಕ 71.66 ರೂ.ಗಳಷ್ಟಿದ್ದರೆ, ಡೀಸೆಲ್‌ 12 ಪೈಸೆ ಏರಿಕೆಯಾಗಿ 66.92 ರೂ.ಗಳಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಲೀ. ಪೆಟ್ರೋಲ್‌ 77.29 ರೂ.ಗೆ ಮಾರಾಟವಾಗುತ್ತಿದ್ದು, 09 ಪೈಸೆ ಜಾಸ್ತಿಯಾಗಿದೆ. ಇನ್ನು ಡೀಸೆಲ್‌ ಲೀ.ಗೆ 13 ಪೈಸೆ ಕಡಿಮೆಯಾಗಿ Rs 70.10 ರೂ.ಗಳಷ್ಟಿದೆ.

ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 09 ಪೈಸೆ ಏರಿಕೆಯಾಗಿ 74.41 ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 70.72 ರೂ.ಗಳಿಗೆ ಮಾರಾಟವಾಗುವ ಮೂಲಕ 13 ಪೈಸೆ ಏರಿಕೆಯಾಗಿದೆ. ಅದೇ ರೀತಿ ಕೋಲ್ಕತಾದಲ್ಲಿಯೂ 09 ಪೈಸೆ ಜಾಸ್ತಿಯಾಗಿ 73.76 ರೂ.ಗೆ ಪೆಟ್ರೋಲ್‌ ಮಾರಾಟವಾಗುತ್ತಿದ್ದು, ಡೀಸೆಲ್‌ ಪ್ರತಿ ಲೀಟರ್‌ಗೆ 12 ಪೈಸೆ ಕಡಿಮೆಯಾಗಿ 68.71 ರೂ.ಗಳಷ್ಟಿದೆ. (ಏಜೆನ್ಸೀಸ್)