ಸಂಕ್ರಾತಿ ದಿನವೂ ಗ್ರಾಹಕರಿಗೆ ತಟ್ಟಿದೆ ಪೆಟ್ರೋಲ್, ಡೀಸೆಲ್​ ಬೆಲೆ ಏರಿಕೆ ಬಿಸಿ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಳಿತಗಳಾಗುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಸಂಕ್ರಾಂತಿ ಹಬ್ಬದಂದು ಗ್ರಾಹಕರಿಗೆ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಬಿಸಿ ತಟ್ಟಿದೆ.

ದೇಶದ ಮೆಟ್ರೋ ನಗರಗಳಲ್ಲಿ ಮಂಗಳವಾರ ಪೆಟ್ರೋಲ್, ಡೀಸೆಲ್​ ಬೆಲೆ 28-31ಪೈಸೆ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್​ 70.41 ರೂ. ಮತ್ತು ಡೀಸೆಲ್​ 64.47 ರೂ. ಗೆ ಮಾರಾಟವಾಗುತ್ತಿದೆ.

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ 30 ಪೈಸೆ ಏರಿಕೆ ನಂತರ ಪೆಟ್ರೋಲ್​ 72.73 ರೂ. ಮತ್ತು ಡೀಸೆಲ್​ 66.59 ರೂ.ಗೆ ಮಾರಾಟವಾಗುತ್ತಿದೆ.

ವಾಣಿಜ್ಯ ನಗರಿ ಮುಂಬೈಯಲ್ಲಿಯೂ ಪೆಟ್ರೋಲ್​, ಡೀಸಲ್​ ದರ 31 ಪೈಸೆ ಏರಿಕೆಯಾಗಿದ್ದು ಕ್ರಮವಾಗಿ 76.05 ರೂ. ಮತ್ತು 67.49 ರೂ.ಗೆ ತಲುಪಿದೆ .

ದೇಶದ ಇತರ ನಗರಗಳಾದ ಚೆನ್ನೈ ಮತ್ತು ಕೋಲ್ಕತದಲ್ಲಿ ಕ್ರಮವಾಗಿ 28 ಪೈಸೆ ಮತ್ತು 29 ಪೈಸೆ ಏರಿಕೆಯಾಗಿದ್ದು, 73.08 ರೂ. ಮತ್ತು 72.52 ರೂ.ಗೆ, ಮಾರಾಟವಾಗುತ್ತಿದೆ. (ಏಜೆನ್ಸೀಸ್)