ಮತ್ತೆ ಏರಿಕೆಯಾಗಿದೆ ಪೆಟ್ರೋಲ್​, ಡೀಸೆಲ್​!

ಬೆಂಗಳೂರು: ದಿನ ಕಳೆದಂತೆ ಪೆಟ್ರೋಲ್​, ಡೀಸೆಲ್​ ಬೆಲೆ ಮತ್ತಷ್ಟು ದುಬಾರಿಯಾಗುತ್ತಿದ್ದು, ಇಂದೂ ಕೂಡ ಪ್ರತಿ ಲೀಟರ್​ ಪೆಟ್ರೋಲ್​ ದರ 28 ಪೈಸೆ ಮತ್ತು ಡೀಸೆಲ್​ 22 ಪೈಸೆ ಹೆಚ್ಚಳವಾಗಿದೆ ಎಂದು ಇಂಡಿಯನ್​ ಆಯಿಲ್​ ಕಾರ್ಪೊರೇಶನ್​ ತಿಳಿಸಿದೆ.

ಮುಂಬೈನಲ್ಲಿ ಇಂದು ಲೀಟರ್​ ಪೆಟ್ರೋಲ್​ ಬೆಲೆ 88.67 ರೂ. ಹಾಗೂ ಡೀಸೆಲ್​ 77.82 ರೂ ಇದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್​ 81.28 ರೂ. ಮತ್ತು ಡೀಸೆಲ್​ 73.30 ರೂ. ಆಗಿದೆ. ಕೋಲ್ಕತದಲ್ಲಿ ಒಂದು ಲೀಟರ್​ ಪೆಟ್ರೋಲ್​ 82.87 ಮತ್ತು ಡೀಸೆಲ್ 75.15 ರೂ. ಆಗಿದೆ.

ಇನ್ನೂ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 83.64 ರೂ. ಇದ್ದರೆ, ಡೀಸೆಲ್ ಬೆಲೆ 75.43 ರೂ. ಇದೆ.

ಪ್ರತಿ ದಿನ ಇದೇ ರೀತಿ ತೈಲ ದರ ಏರಿಕೆಯಾಗುತ್ತಿದ್ದು ಜನಜೀವನದ ಮೇಲೆ ಸಾಕಷ್ಟು ಹೊರೆ ಬೀಳುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿದ್ದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್​, ದೇಶದಲ್ಲಿ ಇಂಧನ ದರ ಹೆಚ್ಚಾಗುತ್ತಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುತ್ತಿರುವ ಏರುಪೇರಿನಂದಲೇ ಹೊರತು ಕೇಂದ್ರ ಸರ್ಕಾರಕ್ಕೆ ಇದರ ಮೇಲೆ ನಿಯಂತ್ರಣ ಇಲ್ಲ ಎಂದಿದ್ದಾರೆ. (ಏಜೆನ್ಸೀಸ್​)