ಇಂದೂ ಕೂಡ ಏರಿದೆ ಪೆಟ್ರೋಲ್, ಡಿಸೇಲ್​ ಬೆಲೆ

ದೆಹಲಿ: ಆಗಸ್ಟ್​ 16ರಿಂದ ನಿರಂತರವಾಗಿ ಏರುತ್ತಿರುವ ಪೆಟ್ರೋಲ್​ ಮತ್ತು ಡಿಸೇಲ್​ ದರ ಸೋಮವಾರವೂ ಏರಿಕೆ ಕಂಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ಇಂದು 79.15 ರೂ.ಗಳಾಗಿದ್ದು (ಏರಿಕೆ 31ಪೈಸೆ), ಡಿಸೇಲ್​ ದರ 71.15 (39 ಪೈಸೆ) ರೂ.ಗಳಾಗಿವೆ. ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ 81.12 ರೂ.ಗಳಾಗಿದ್ದು, ಡಿಸೇಲ್​ ಬೆಲೆ 72.51 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆಯ ದರಕ್ಕೂ ಇಂದಿನ ದರಕ್ಕೂ ಯಾವುದೇ ವ್ಯತ್ಯಾಸವಾಗಿಲ್ಲ.

ಇನ್ನು ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ 86.56 ರೂ.ಗಳಾಗಿದ್ದು (ಏರಿಕೆ-31 ಪೈಸೆ), ಡಿಸೇಲ್​ ದರ 75.54 ರೂ.ಗಳಾಗಿವೆ (ಏರಿಕೆ 44 ಪೈಸೆ).

ಪೆಟ್ರೋಲ್​ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಕುರಿತು ನಿನ್ನೆಯಷ್ಟೇ ಮಾತನಾಡಿದ್ದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್​, ಇದು ತಾತ್ಕಾಲಿಕ ಮಾತ್ರ ಎಂದು ಹೇಳಿದ್ದರು.

ಆಗಸ್ಟ್​ 16ರ ನಂತರ ಪೆಟ್ರೋಲ್​ ಮತ್ತು ಡಿಸೇಲ್​ ದರದಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಡಾಲರ್​ ಎದುರು ಭಾರತದ ರೂಪಾಯಿ ಅಪಮೌಲ್ಯವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.