ನಿಮ್ಮ ದೇಹದಲ್ಲಿ ಮೆಗ್ನಿಶಿಯಂ ಕೊರತೆ ಇದ್ದರೆ ಇವುಗಳನ್ನು ತಿನ್ನಿ ಸಾಕು! Magnesium

blank

Magnesium : ನಾವು ಸೇವಿಸುವ ಆಹಾರಗಳಲ್ಲಿ ಪೌಷ್ಟಿಕಾಂಶ ಭರಿತ ಆಹಾರವನ್ನು ಸೇವನೆ ಮಾಡುವುದು ನಮಗೆ ಅತಿ ಮುಖ್ಯವಾದ ಅಂಶವಾಗಿದೆ. ಸುಖಾಸುಮ್ಮನೆ ಆಹಾರ ಸೇವನೆ ಮಾಡಿ, ಅದರಿಂದ ನಮಗೆ ಯಾವುದೇ ಪೌಷ್ಟಿಕಾಂಶಗಳು ಸಿಗದೇ ಇದ್ದರೆ ನಮ್ಮ ದೇಹಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಪ್ರತಿ ಬಾರಿ ನಮಗೆ ಪೌಷ್ಟಿಕಾಂಶಗಳು ಸಿಗುತ್ತಾ ಹೋದರೆ ನಮ್ಮ ದೇಹದ ಎಲ್ಲಾ ಅಂಗಾಂಗಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ.

ನಾವಿಲ್ಲಿ ಮೆಗ್ನಿಶಿಯಂ ಅಂಶ ಎನ್ನುವುದು ನಮ್ಮ ದೇಹಕ್ಕೆ ಎಷ್ಟು ಮುಖ್ಯ ಮತ್ತು ಅದರಿಂದ ನಮ್ಮಲ್ಲಿರುವ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬುದನ್ನ ತಿಳಿಯೋಣ. ಜೊತೆಗೆ ಯಾವ ಯಾವ ಆಹಾರ ಪದಾರ್ಥಗಳಲ್ಲಿ ಮೆಗ್ನಿಶಿಯಂ ಅಂಶ ದಿನನಿತ್ಯ ಹೆಚ್ಚಾಗಿ ಸಿಗುತ್ತದೆ ಎಂಬುದನ್ನು ತಿಳಿಯೋಣ.

ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು ತಮ್ಮ ದೇಹಕ್ಕೆ ನಿತ್ಯ ಬೇಕಾದ ಮೆಗ್ನಿಶಿಯಂ ಅವಶ್ಯಕತೆಗಳನ್ನು ಪೂರೈಸುವುದಿಲ್ಲ. ನರಗಳ ಕಾರ್ಯ, ರಕ್ತದೊತ್ತಡ ನಿಯಂತ್ರಣ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಮೂಳೆ ಆರೋಗ್ಯ ನಿರ್ವಹಣೆಗೆ ಮೆಗ್ನಿಶಿಯಂ ಅತ್ಯಗತ್ಯ ಎಂದು ಗುರುತಿಸಲಾಗಿದೆ.

ವಯಸ್ಕ ಪುರುಷರಿಗೆ ದಿನಕ್ಕೆ 400 ರಿಂದ 420 ಮಿಲಿಗ್ರಾಂ ಮತ್ತು ಮಹಿಳೆಯರಿಗೆ 310 ರಿಂದ 400 ಮಿಲಿಗ್ರಾಂ ಮೆಗ್ನಿಶಿಯಂ ಅಗತ್ಯವಿದೆ. ನಿಮ್ಮ ದೈನಂದಿನ ಮೆಗ್ನಿಶಿಯಂ ಅಗತ್ಯವನ್ನು ಪೂರೈಸಲು ಹಲವು ಆಹಾರಗಳಿದ್ದರೂ, ಅದನ್ನು ಹೆಚ್ಚಿಸಲು ಒಂದು ಸುಲಭ ಮಾರ್ಗವಿದೆ. ಮೆಗ್ನಿಶಿಯಂ ಸಮೃದ್ಧವಾಗಿರುವ ಹಣ್ಣುಗಳ ಮೂಲಕ ಆರೋಗ್ಯಕರ ಮತ್ತು ರುಚಿಕರ ರೀತಿಯಲ್ಲಿ ಅದನ್ನು ನೀವು ಪಡೆಯಬಹುದು.

ಮೆಗ್ನಿಶಿಯಂ ಅಧಿಕವಾಗಿರುವ 6 ಹಣ್ಣುಗಳು :

ನಿಮ್ಮ ದೇಹದಲ್ಲಿ ಮೆಗ್ನಿಶಿಯಂ ಕೊರತೆ ಇದ್ದರೆ ಇವುಗಳನ್ನು ತಿನ್ನಿ ಸಾಕು! Magnesium
ಪಪ್ಪಾಯಿ
ಪ್ರತಿದಿನ ಪಪ್ಪಾಯಿ ತಿನ್ನುವುದು ದೇಹದ ಆಕಾರ ಮತ್ತು ಫಿಟ್ನೆಸ್​ ಪಡೆಯಲು ಉತ್ತಮ ಮಾರ್ಗವಾಗಿದೆ. ಇದು ಮೆಗ್ನಿಶಿಯಂ ಜೊತೆಗೆ ನಿಮ್ಮ ದೈನಂದಿನ ಆರೋಗ್ಯ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಪಪ್ಪಾಯಿ ಪ್ರತಿ ಕಪ್‌ಗೆ 34.6 ಮಿಲಿಗ್ರಾಂ ಮೆಗ್ನಿಶಿಯಂ ಅನ್ನು ನೀಡುತ್ತದೆ. ಇದು ದೈನಂದಿನ ಅಗತ್ಯಗಳ 8.2% ಅನ್ನು ಪೂರೈಸುತ್ತದೆ. ಈ ಹಣ್ಣಿನಲ್ಲಿ ಲೈಕೋಪೀನ್ ಸಮೃದ್ಧವಾಗಿದೆ, ಇದು ಹೃದಯ ಕಾಯಿಲೆ ತಡೆಗಟ್ಟುವಿಕೆಗೆ ಪೂರಕವಾಗಿದೆ.

ಮುಳ್ಳು ಪೇರಳೆ
ಈ ಹಣ್ಣಿನಲ್ಲಿ ಅತ್ಯಧಿಕ ಮೆಗ್ನಿಶಿಯಂ ಸಾಂದ್ರತೆ ಸೇರಿದೆ. ಮುಳ್ಳು ಪೇರಳೆಯು ಮೆಗ್ನಿಶಿಯಂ ಭರಿತ ಹಣ್ಣಾಗಿದ್ದು, 1 ಕಪ್ ಸೇವನೆಗೆ 127 ಮಿಲಿಗ್ರಾಂಗಳನ್ನು ಹೊಂದಿರುತ್ತದೆ. ಇದು ದೈನಂದಿನ ಮೌಲ್ಯದ 30% ರಷ್ಟಿದೆ. ಈ ಹಣ್ಣು ದೈನಂದಿನ ವಿಟಮಿನ್ ‘ಸಿ’ ಅವಶ್ಯಕತೆಯ 23% ಮತ್ತು ಫೈಬರ್ ಅಗತ್ಯಗಳ 19.2% ಅನ್ನು ಸಹ ಒದಗಿಸುತ್ತದೆ.

ಅಂಜೂರ
ಅಂಜೂರವು ನಿಮ್ಮ ಅಹಾರ ಕ್ರಮಕ್ಕೆ ಅದ್ಭುತವಾದ ಹಣ್ಣಾಗಿದೆ. ಇಷ್ಟೇ ಅಲ್ಲ ಒಣಗಿದ ಅಂಜೂರಗಳು ಎರಡನೇ ಸ್ಥಾನದಲ್ಲಿದ್ದು, ಪ್ರತಿ ಕಪ್‌ಗೆ 101 ಮಿಲಿಗ್ರಾಂ ಮೆಗ್ನಿಶಿಯಂ ಅನ್ನು ನೀಡುತ್ತವೆ. ಇದು ದೈನಂದಿನ ಮೌಲ್ಯದ 24% ಅನ್ನು ಪೂರೈಸುತ್ತದೆ. ಈ ಹಣ್ಣುಗಳು ವಿಶೇಷವಾಗಿ ಫೈಬರ್‌ನಲ್ಲಿ ನಮೃದ್ಧವಾಗಿವೆ. ಪ್ರತಿ ಕಪ್‌ಗೆ 14.6 ಗ್ರಾಂಗಳನ್ನು ಹೊಂದಿರುತ್ತವೆ. ಇದು ದೈನಂದಿನ ಫೈಬರ್ ಅವಶ್ಯಕತೆಗಳ 50% ಕ್ಕಿಂತ ಹೆಚ್ಚು ಪೂರೈಸುತ್ತದೆ.

ಬಾಳೆಹಣ್ಣು

ನಿಮ್ಮ ದೇಹದಲ್ಲಿ ಮೆಗ್ನಿಶಿಯಂ ಕೊರತೆ ಇದ್ದರೆ ಇವುಗಳನ್ನು ತಿನ್ನಿ ಸಾಕು! Magnesium
ಹಳದಿ ಉದ್ದನೆಯ ಈ ಬಾಳೆ ಹಣ್ಣುಗಳನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಬಾಳೆಹಣ್ಣುಗಳು ಪ್ರತಿ ಕಪ್‌ಗೆ 40.6 ಮಿಲಿಗ್ರಾಂ ಮೆಗ್ನಿಶಿಯಂ ಅನ್ನು ಹೊಂದಿರುತ್ತವೆ. ಇದು ದೈನಂದಿನ ಅಗತ್ಯಗಳಲ್ಲಿ 9.6% ಅನ್ನು ಪೂರೈಸುತ್ತದೆ. ಈ ಉಷ್ಣವಲಯದ ಹಣ್ಣುಗಳು ವಿಟಮಿನ್ ಬಿ 6 ರಲ್ಲಿ ಸಮೃದ್ಧವಾಗಿವೆ. ಇದು ಚಯಾಪಚಯ ಮತ್ತು ರೋಗನಿರೋಧಕ ಕಾರ್ಯಕ್ಕೆ ಅವಶ್ಯಕವಾಗಿದೆ. ದಿನಕ್ಕೆ ಒಂದು ಬಾಳೆಹಣ್ಣನ್ನು ಸೇವಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.

ಏಪ್ರಿಕಾಟ್​
ಒಣಗಿದ ಏಪ್ರಿಕಾಟ್‌ಗಳು ಪ್ರತಿ ಕಪ್‌ಗೆ 41.6 ಮಿಲಿಗ್ರಾಂ ಮೆಗ್ನಿಶಿಯಂ ಅನ್ನು ನೀಡುತ್ತವೆ. ಇದು ದೈನಂದಿನ ಅವಶ್ಯಕತೆಯ 9.9% ಅನ್ನು ಒದಗಿಸುತ್ತದೆ. ಅವು ದೈನಂದಿನ ಕಬ್ಬಿಣದ ಅಗತ್ಯಗಳಲ್ಲಿ 19.2% ಅನ್ನು ಸಹ ಪೂರೈಸುತ್ತವೆ, ಆಮ್ಲಜನಕ ಮತ್ತು ಹಾರ್ಮೋನ್ ಪೂರೈಕೆಗೆ ಉತ್ತಮವಾಗಿದೆ. ಅವುಗಳನ್ನು ಹಾಗೆಯೇ ಸೇವಿಸಬಹುದು ಅಥವಾ ಯಾವುದೇ ಸಲಾಡ್‌ ಜೊತೆ ಸೇರಿಸಿ ಸೇವಿಸಬಹುದು.

ಪೇರಲ
ಈ ಸುಂದರವಾದ ಹಸಿರು ಹಣ್ಣು ವಿಟಮಿನ್ ‘ಸಿ’ ಅಂಶ ಬಿಡುಗಡೆ ಮಾಡುತ್ತದೆ. ಆದಾಗ್ಯೂ ಇದು ನಿಮ್ಮ ಆರೋಗ್ಯವನ್ನು ಕಾಪಾಡಲು ಸಾಕಷ್ಟು ಮೆಗ್ನಿಶಿಯಂ ನೀಡುತ್ತದೆ. ಪೇರಲವು ಪ್ರತಿ ಕಪ್‌ಗೆ 36.4 ಮಿಲಿಗ್ರಾಂ ಮೆಗ್ನಿಶಿಯಂ ಅನ್ನು ಒದಗಿಸುತ್ತದೆ. ಇದು ದೈನಂದಿನ ಅವಶ್ಯಕತೆಯ 8.6% ಅನ್ನು ಪೂರೈಸುತ್ತದೆ. ಈ ಹಣ್ಣು ಪ್ರತಿ ಕಪ್‌ಗೆ 4.21 ಗ್ರಾಂ ಪ್ರೋಟೀನ್ ಹೊಂದಿದೆ.

ಮೆಗ್ನಿಷಿಯಂ ಮಹತ್ವ :
ನಮ್ಮ ದೇಹಕ್ಕೆ ದೈನಂದಿನ ಅವಶ್ಯಕತೆಗಳನ್ನು ಪಡೆಯಲು ವಿವಿಧ ಮೆಗ್ನಿಶಿಯಂ ಭರಿತ ಆಹಾರಗಳನ್ನು ಸೇವಿಸುವುದು ಬಹುಮುಖ್ಯವಾಗಿದೆ. ಅತ್ಯುತ್ತಮ ಮೆಗ್ನಿಶಿಯಂ ಸೇವನೆಗಾಗಿ ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ದ್ವಿದಳ ಧಾನ್ಯಗಳನ್ನು ಒಳಗೊಂಡ ಸಮತೋಲಿತ ಆಹಾರವನ್ನು ಸೇವಿಸಬೇಕಾಗಿರುತ್ತದೆ. ಅತಿಯಾದರೆ ಅಮೃತವೂ ವಿಷ ಎಂಬ ನುಡಿಯಂತೆ ಯಾವುದು ಕೂಡ ಅತಿಯಾಗಬಾರದು. ಅದೇ ರೀತಿ ಮೆಗ್ನಿಶಿಯಂ ಅನ್ನು ಅಳತೆ ಮೀರಿ ದೇಹಕ್ಕೆ ಸೇರಿಸಿದಾಗ ದೇಹದ ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ನಿಮಗೆ ವಾಂತಿ ಕೂಡ ಉಂಟಾಗಬಹುದು. ಆದ್ದರಿಂದ ಮೆಗ್ನಿಶಿಯಂ ಹೆಚ್ಚಾಗದಂತೆಯೂ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ.

Share This Article

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…

ಮಾವಿನಹಣ್ಣು ತಿಂದು ಈಸಿಯಾಗಿ ದೇಹದ ತೂಕ ಇಳಿಸಬಹುದು! ಹೊಸ ಅಧ್ಯಯನ.. mango

mango: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಮಾವಿನಹಣ್ಣನ್ನು ತಪ್ಪಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ತೂಕ…