ನಿಪ್ಪಾಣಿ: ವಿಶೇಷ ಕಾರ್ಯಾಗಾರದ ಮೂಲಕ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ವೃದ್ಧಿಯಾಗಲು ಸಾಧ್ಯ ಎಂದು ಜಿಲ್ಲಾ ನೋಡಲ್ ಅಧಿಕಾರಿ ವಿಜಯ ಕಾಂಬಳೆ ತಿಳಿಸಿದರು.
ಇಲ್ಲಿನ ವಿಎಸ್‌ಎಂ ಜಿ.ಐ.ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಜಿಲ್ಲಾಮಟ್ಟದ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ರಚನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ತಾಲೂಕಿನಲ್ಲಿ ಸಂಪನ್ಮೂಲ ಶಿಕ್ಷಕರು ವಲಯ ಮಟ್ಟದ ವಿಷಯವಾರು ಶಿಕ್ಷಕರಿಗೆ ಗುಣಮಟ್ಟದ ತರಬೇತಿ ನೀಡುವ ಮೂಲಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ರಾಜ್ಯ ಸಂಪನ್ಮೂಲ ಶಿಕ್ಷಕ ಶಿವಾನಂದ ಗುಂಡಾಳಿ ಪ್ರಶ್ನೆಪತ್ರಿಕೆ ರಚನೆ ಕುರಿತು ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕಿ ಭುವನೇಶ್ವರಿ ಅಳ್ಳಿಮೋರೆ, ವಿಷಯ ಪರಿವೀಕ್ಷಕ ಸಂಗಮೇಶ ಹೂಗಾರ, ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿನೇಂದ್ರ ನಿಲಜಗಿ, ಪ್ರಧಾನ ಕಾರ್ಯದರ್ಶಿ ಅಹ್ಮದ್‌ಅಲಿ ಪೀರಜಾದೆ, ಜಿಲ್ಲಾ ಸಂಪನ್ಮೂಲ ಶಿಕ್ಷಕ ಮಂಜುನಾಥ ಕಡೋಳಿ, ಶಿಕ್ಷಕ ಪಿ.ಎಸ್.ಐನಾಪುರೆ, ಎಸ್.ಎ.ಕಾಂಬಳೆ, ನಿಖಿಲ್ ಪೂಜಾರಿ, ಬಾಲಿಕಾ ಕೋನೆ ಇತರರಿದ್ದರು. ವಾಸಂತಿ ಮಾಳಿ ಮತ್ತು ಕಾಂಚನ ಕಮತೆ ಪ್ರಾರ್ಥಿಸಿದರು. ರವಿಂದ್ರ ಮಲಕಾಪುರೆ ಸ್ವಾಗತಿಸಿದರು. ಮಹಾಲಿಂಗೇಶ ಜೆ. ನಿರೂಪಿಸಿದರು.