ಫೆ. 20 ರಿಂದ 22 ರ ವರೆಗೆ ಸಿದ್ಧಾರೂಢರ ಜಾತ್ರೆ

blank
blank

ಹಿಡಕಲ್ ಡ್ಯಾಂ: ಸಮೀಪದ ಪರಕನಹಟ್ಟಿ ಗ್ರಾಮದಲ್ಲಿ ಜಗದ್ಗುರು ಸಿದ್ಧಾರೂಢರ ಜಾತ್ರಾ ಮಹೋತ್ಸವ, ನೂತನ ರಥದ ಕಳಸಾರೋಹಣ ಹಾಗೂ ರಥೋತ್ಸವ ಸಮಾರಂಭ ಫೆ. 20 ರಿಂದ 22 ರ ವರೆಗೆ ಜರುಗಲಿವೆ.

20ಕ್ಕೆ ಇಂಚಲ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಗೆ ನೂತನ ರಥದ ಪೂಜೆ ಹಾಗೂ ಕಳಸಾರೋಹಣ, ಸಂಜೆ 6 ಗಂಟೆಗೆ ಮಹಾತ್ಮರಿಂದ ಪ್ರವಚನ ಜರುಗಲಿದೆ. ರಾತ್ರಿ ವಿವಿಧ ಗ್ರಾಮಗಳ ಸದ್ಬಕ್ತರಿಂದ ಭಜನಾ ಕಾರ್ಯಕ್ರಮಗಳು ಜರುಗಲಿವೆ.

21 ರಂದು ಶಿವನಾಮಸ್ಮರಣೆ, ಸಾಧಕರಿಗೆ ಸತ್ಕಾರ, ಪ್ರವಚನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಪರಕನಹಟ್ಟಿ ಭಜನಾ ಮಂಡಳದ ಆಶ್ರಯದಲ್ಲಿ ಭಜನಾ ಕಲಾ ಮೇಳ, ಸುಗಮ ಸಂಗೀತ, ರಾತ್ರಿ ಬಾಗಲಕೋಟ ಹಾಗೂ ಮಹಾಲಿಂಗಪುರ ತಂಡದಿಂದ ಭಜನೆ ಕಾರ್ಯಕ್ರಮ ಜರುಗಲಿದೆ.

22 ರಂದು ಮರಡಿಮಠದ ಕುದುರೆ ಸಮ್ಮಖದಲ್ಲಿ ಬೆಳಗ್ಗೆ 10 ಗಂಟೆಗೆ ನೂತನ ರಥೋತ್ಸವ ನಡೆಯಲಿದೆ. ಮರಡಿಮಠದ ಪವಾಡೇಶ್ವರ ಸ್ವಾಮೀಜಿ, ಗೋಕಾಕ ಆತ್ಮಾನಂದ ಸ್ವಾಮೀಜಿ, ಕುರಣಿ ಆನಂದ ಸ್ವಾಮೀಜಿ, ನವಲಗುಂದದ ಕೃಪಾನಂದ ಶ್ರೀಗಳು, ತೋಲಗಿ ಅದೃಶನಂದ ಸ್ವಾಮೀಜಿ, ಬೆಳವಿ ಚನ್ನಬಸವ ಶ್ರೀಗಳು ಭಾಗವಹಿಸಲಿದ್ದಾರೆ.

Share This Article

ಸಾಲದ ಹೊರೆಯಿಂದ ಬಳಲುತ್ತಿದ್ರೆ ಶ್ರಾವಣ ಮಾಸದಲ್ಲಿ ಈ ಸಣ್ಣ ಕೆಲಸ ಮಾಡಿ: ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಿರಿ.. | Shravan

Shravan: ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಈ ಪವಿತ್ರ ಮಾಸದಲ್ಲಿಯೇ ಶಿವನು ಪಾರ್ವತಿಯನ್ನು ವಿವಾಹವಾಗದ್ದು ಎಂದು…

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ..ಇಲ್ಲದಿದ್ದರೆ ಅಪಾಯ ಖಂಡಿತ! Monsoon

Monsoon: ಮಳೆಗಾಲದಲ್ಲಿ ಹವಾಮಾನದ ಬದಲಾವಣೆಯೂ ಆಹಾರದಲ್ಲಿನ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು…