ಯಕ್ಕುಂಡಿ: ನಾಳೆಯಿಂದ ಪೀರ ದಿಲಾವರಗೋರಿ ಶಹಾವಲಿ ಉರುಸ್

ಯಕ್ಕುಂಡಿ: ಸವದತ್ತಿ ತಾಲೂಕಿನ ಯಕ್ಕುಂಡಿ,ಧೂಪದಾಳ ಗ್ರಾಮಗಳ ಮಧ್ಯೆ ಇರುವ ಪೀರ ದಿಲಾವರಗೋರಿ ಶಹಾವಲಿ ಉರುಸ್ ಬುಧವಾರದಿಂದ ಜು.25ರವರೆಗೆ ಜರುಗಲಿದೆ. ಬುಧವಾರ ರಾತ್ರಿ ಮನರಂಜನೆ ಕಾರ್ಯಕ್ರಮ ಜರುಗುವವು. ಬೆಳಗ್ಗೆ 5 ಗಂಟೆಗೆ ಧೂಪದಾಳ ಗ್ರಾಮದ ಮೋಹನರಾವ ದೇಸಾಯಿ ಮನೆಯಿಂದ ಮೆರವಣಿಗೆ ಮೂಲಕ ತೆರಳಿ ಗಂಧ ಸಮರ್ಪಿಸಲಾಗುವುದು. ಶ್ರೀ ಕುಮಾರೇಶ್ವರ ಸಂಸ್ಥಾನ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ ಹಾಗೂ ಧರ್ಮಗುರು ಮುರಶೀದ್ ಪೀರಾ ಪೀರಜಾದೆ ಅವರು ವಲಿಗಳಿಗೆ ಗಂಧ ಸಮರ್ಪಿಸುವರು.

ಗುರುವಾರ ರಾತ್ರಿ 10.30 ಗಂಟೆಗೆ ಕವ್ಹಾಲಿ ಗಾಯನ ಕಾರ್ಯಕ್ರಮ ಜರುಗುವುದು. ಅದೇ ದಿನ ರಾತ್ರಿ 10.30 ಗಂಟೆಗೆ ಮಾನಕ್ಕಾಗಿ ಪ್ರಾಣ ಬಿಟ್ಟ ಮುತ್ತೈದೆ ನಾಟಕ ಪ್ರದರ್ಶನ ಜರುಗುವುದು. ಜು.26ರಂದು ರಾತ್ರಿ 10 ಗಂಟೆಗೆ ರಸಮಂಜರಿ ಮತ್ತು ನಗೆಹಬ್ಬ ಕಾರ್ಯಕ್ರಮ, ಜು.27 ರಂದು ಜಾನಪದ ವೈವಿಧ್ಯ ಕಾರ್ಯಕ್ರಮ ಜರಗುವುದು. ಶುಕ್ರವಾರ ಮತ್ತು ಶನಿವಾರ ಬಯಲು ಕುಸ್ತಿ ಸ್ಪರ್ಧೆ ಜರುಗಲಿವೆ ಎಂದು ಉರುಸ್ ಕಮಿಟಿ ತಿಳಿಸಿದೆ.

Leave a Reply

Your email address will not be published. Required fields are marked *