ನೇಸರಗಿ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವು ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ ಮಾ.22ರಿಂದ 28ರ ವರೆಗೆ ಜರುಗಲಿದೆ.
22ರಂದು ಮಧ್ಯಾಹ್ನ 3 ಗಂಟೆಗೆ ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸುವರು. ಪ್ರಾಚಾರ್ಯ ಡಾ.ಕೀರನಾಯ್ಕ ಗಡ್ಡಿಗೌಡರ ಅಧ್ಯಕ್ಷತೆ ವಹಿಸುವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಕನಕಪ್ಪ ಪೂಜಾರ, ಗ್ರಾಪಂ ಅಧ್ಯಕ್ಷೆ ಶಾಂತವ್ವ ದೇಯಣ್ಣವರ, ಉಪಾಧ್ಯಕ್ಷೆ ಪಾರ್ವತಿ ಬಡಿಗೇರ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಶೇಗುಣಸಿ, ಮುಖ್ಯಶಿಕ್ಷಕ ಸಿ.ಎಸ್.ಗದಗ. ಪಿಡಿಒ ವನಜಾಕ್ಷಿ ಪಾಟೀಲ ಇತರರು ಆಗಮಿಸುವರು.
23ರಂದು ಗ್ರಾಮ ನೈರ್ಮಲ್ಯ ಪರಿಕಲ್ಪನೆ ಕುರಿತಾಗಿ ಶೋಭಾ ಸಿದ್ನಾಳ, 24ರಂದು ಮಹಿಳೆಯರ ಕಾನೂನುಗಳ ಕುರಿತಾಗಿ ಬೈಲಹೊಂಗಲ ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, 25ರಂದು ಲಿಂಗ ಸಮಾನತೆ ಕುರಿತಾಗಿ ನೀಲಾಂಬಿಕಾ ಹಾದಿಮನಿ, 26ರಂದು ಏಡ್ಸ್ ಜಾಗತಿ ಹಾಗೂ ಸುರಕ್ಷಾ ಕ್ರಮಗಳ ಕುರಿತಾಗಿ ಆಪ್ತ ಸಮಾಲೋಚಕ ಸತೀಶ ಮಳಲಿ, 27ರಂದು ಪರಿಸರ ಸಂರಕ್ಷಣೆಯಲ್ಲಿ ಯುವಶಕ್ತಿಯ ಪಾತ್ರದ ಕುರಿತಾಗಿ ಸುರೇಖಾ ಶೆಟ್ಟಿ ಉಪನ್ಯಾಸ ನೀಡಲಿದ್ದಾರೆ.
25ರಂದು ಬೈಲಹೊಂಗಲ ಸಾರ್ವಜನಿಕ ಅಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. 28ರಂದು 11 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ಎಸ್‌ಎಸ್‌ಎಸ್ ಶಿಬಿರಾಧಿಕಾರಿ ಎಸ್.ಬಿ. ಚವತ್ರಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.