ಇಂದಿನಿಂದ ಕುದ್ರೋಳಿ ಬ್ರಹ್ಮಕಲಶ ಸಂಭ್ರಮ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ೆ.10ರಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಆರಂಭವಾಗಲಿದ್ದು, ೆ.13ರಂದು ಹೊರೆಕಾಣಿಕೆ, ೆ.17ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.

ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿವಗಿರಿ ಮಠದ ಶ್ರೀಸುಗುದಾನಂದ ತಂತ್ರಿ ಮತ್ತು ಶ್ರೀ ಕ್ಷೇತ್ರದ ಮುಖ್ಯ ಅರ್ಚಕ ಲಕ್ಷ್ಮಣ ಶಾಂತಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

10ರಂದು ಸಂಜೆ 6.30ರಿಂದ ಗುರುಪ್ರಾರ್ಥನೆ, ಆಚಾರ್ಯ ವರ್ಣ, ಋತ್ವಿಜರ ಸ್ವಾಗತ, ಮಹಾಪೂಜೆ, ಅಂಕುರಪೂಜೆ, ಪುಣ್ಯಾಹ ಪೂಜೆ ನಡೆಯಲಿದೆ. ನಾಳೆ ಮಹಾಗಣಪತಿ ಹೋಮ, ಯಜಮಾನ ಸ್ವಾಗತ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ, ಭಗವತಿ ಪೂಜೆ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ವಿಶ್ವಶಾಂತಿ ಹೋಮ, ಕುಂಡ ಶುದ್ಧಿ, ಮಹಾಪೂಜೆ ನಡೆಯಲಿದೆ.

13ರಂದು ಹೊರೆಕಾಣಿಕೆ: ೆ.13ರಂದು ಮಧ್ಯಾಹ್ನ 4ಗಂಟೆಯಿಂದ ವೈಭವದ ಹೊರೆಕಾಣಿಕೆ ಮೆರವಣಿಗೆ ನಗರದ ನೆಹರು ಮೈದಾನದಿಂದ ಹೊರಡಲಿದೆ. ಈ ಸಂದರ್ಭ ಕರಾವಳಿ ಜಿಲ್ಲೆ ಮಾತ್ರವಲ್ಲದೆ ನಾನಾ ಕಡೆಯಿಂದ 500ಕ್ಕೂ ಅಧಿಕ ವಾಹನಗಳಲ್ಲಿ ಹೊರೆಕಾಣಿಕೆ ಆಗಮಿಸಲಿದ್ದು, ಇದರಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.

17ರಂದು ಬ್ರಹ್ಮಕಲಶೋತ್ಸವ: ೆ.17ರಂದು ಬೆಳಗ್ಗೆ 5.00ಕ್ಕೆ ಮಹಾಗಣಪತಿ ಹೋಮ, ಗುರುಪೂಜೆ, ಬೆಳಗ್ಗೆ 7.35ಕ್ಕೆ ರಾಜಗೋಪುರ ಶಿಖರ ಪ್ರತಿಷ್ಠಾಪನೆ, ಕಲಶಾಭಿಷೇಕ, ಅಧಿವಾಸಂ, ವೀರಕಾಂಡ ಪೀಠ ಪೂಜೆ. ಬೆಳಗ್ಗೆ ಗಂಟೆ 8.5ಕ್ಕೆ ವಾಹನ ಪ್ರತಿಷ್ಠಾಪನೆ, ಕಲಶಾಭಿಷೇಕ, ಧ್ವಜಾರೋಹಣ. ಮಧ್ಯಾಹ್ನ ಗಂಟೆ 12.15ಕ್ಕೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ವಿಶೇಷ ಪೂಜೆ, ನೈವೇದ್ಯ ಪೂಜೆ, ಪ್ರಸನ್ನಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.