More

    ನಾಳೆಯಿಂದ ಫುಲ್​ ಕ್ಲಾಸ್​; ಶೇ.100 ಹಾಜರಾತಿಯೊಂದಿಗೆ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಆದೇಶ

    ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅ.4ರಿಂದ ಶೇ.100 ಹಾಜರಾತಿ ಜತೆಗೆ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ.

    ಈ ಹಿಂದೆ ಅ.1ರಿಂದಲೇ ಶೇ.100 ಹಾಜರಾತಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸೂಚನೆ ನೀಡಿದ್ದರು. ಆದರೆ, ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ. ಅ.1ರಂದು ಶಿಕ್ಷಣ ಇಲಾಖೆ ಶೇ.100 ಹಾಜರಾತಿಗೆ ಅವಕಾಶ ಕಲ್ಪಿಸಿ ಆದೇಶ ನೀಡಿದೆ.

    ಭೌತಿಕ ತರಗತಿ ಆರಂಭವಾದ ಮೇಲೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಿತ್ಯ ಅರ್ಧದಿನ ಮಾತ್ರ ನಾಲ್ಕರಿಂದ ಐದು ಪೀರಿಯಡ್ ನಡೆಸಲು ಅವಕಾಶ ನೀಡಿತ್ತು. ಅಲ್ಲದೆ, ಪಿಯು ವಿದ್ಯಾರ್ಥಿಗಳಿಗೆ ಶೇ.50 ಮಕ್ಕಳಿಗೆ ವಾರದ ಮೊದಲ ಮೂರುದಿನ, ಉಳಿದ ಮೂರು ದಿನ ಇನ್ನುಳಿದ ಮಕ್ಕಳಿಗೆ ಭೌತಿಕ ತರಗತಿ ನಡೆಸಬೇಕಿತ್ತು.

    ಇದನ್ನೂ ಓದಿ: ಶಾಸಕರ ಕಾರಿಗೆ ಮಹಿಳೆ ಬಲಿ; ಕಾರು-ಬೈಕ್ ಅಪಘಾತದಲ್ಲಿ 58 ವರ್ಷದ ಸ್ತ್ರೀ ಸ್ಥಳದಲ್ಲೇ ಸಾವು..

    ಸಾಮಾಜಿಕ ಅಂತರ ಸೇರಿ ಕೋವಿಡ್ ಮಾರ್ಗಸೂಚಿ ಅನುಸರಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳ ತಂಡಗಳನ್ನು ರಚಿಸಿಕೊಂಡು ತರಗತಿ ನಡೆಸಲು, ಪ್ರೌಢ ಶಾಲೆಗಳಲ್ಲಿ 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ನಂತರ ತರಗತಿ ನಡೆಸಲು ಸುತ್ತೋಲೆ ಹೊರಡಿಸಿತ್ತು.

    ಹೊಸ ಸುತ್ತೋಲೆ ಪ್ರಕಾರ ಎಲ್ಲ ಸರ್ಕಾರಿ ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಅ.4ರಿಂದ ಬೆಳಗ್ಗೆಯಿಂದ ಸಂಜೆವರೆಗೂ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಬೇಕು. ಭೌತಿಕ ಹಾಜರಾತಿ ಕಡ್ಡಾಯ ಇರುವುದಿಲ್ಲ.

    ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ; ನೇಣಿಗೆ ಕೊರಳೊಡ್ಡಿದ ಸಹಾಯಕ್ ಸಬ್​ ಇನ್​​ಸ್ಪೆಕ್ಟರ್!​

    See also  ಗೂಡ್ಸ್ ಆಟೋ ಮೇಲೆ ಹತ್ತಿ ನಿಂತ ಕೆಎಸ್‌ಆರ್‌ಟಿಸಿ ಬಸ್ !

    ಮಕ್ಕಳಿಗಾಗಿ ಬಿಎಂಟಿಸಿ ಬಸ್ ಹೆಚ್ಚಳ: ಶಾಲಾ ಮಕ್ಕಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಬಿಎಂಟಿಸಿ ಹೆಚ್ಚುವರಿಯಾಗಿ 100 ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಅ.4ರಿಂದಲೇ ಹೆಚ್ಚುವರಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಸದ್ಯಕ್ಕೆ ನಗರದಲ್ಲಿ 4,953 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, 100 ಬಸ್ ಸೇರ್ಪಡೆ ಆಗುವುದರಿಂದ ಒಟ್ಟಾರೆಯಾಗಿ 5,053 ಬಸ್‌ಗಳು ಸಂಚರಿಸಲಿವೆ. ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಕಡಿಮೆ ಪ್ರಮಾಣದಲ್ಲಿ ಹಾಜರಾಗುತ್ತಿರುವುದಕ್ಕೆ ಪ್ರಮುಖ ಕಾರಣ ಬಸ್ ಸಂಚಾರದ ಅವ್ಯವಸ್ಥೆ ಎಂಬ ಮಾತು ಶಿಕ್ಷಕರಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಸ್‌ಗಳ ಸಂಖ್ಯೆಯನ್ನು ಬಿಎಂಟಿಸಿ ಹೆಚ್ಚಿಸಿದೆ.

    1ರಿಂದ 5ನೇ ಇಯತ್ತೆ ಭೌತಿಕ ತರಗತಿ ಜತೆಗೆ ಬಿಸಿಯೂಟ ಕೂಡ ಆರಂಭಿಸಲು ಇಲಾಖೆ ಚಿಂತನೆ; ಕ್ಲಾಸ್ ಯಾವತ್ತಿಂದ ಗೊತ್ತಾ?

    ಶಾಸಕರ ಕಾರಿಗೆ ಮಹಿಳೆ ಬಲಿ; ಕಾರು-ಬೈಕ್ ಅಪಘಾತದಲ್ಲಿ 58 ವರ್ಷದ ಸ್ತ್ರೀ ಸ್ಥಳದಲ್ಲೇ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts