More

    ಶಿಕ್ಷಕರಿಂದ ತರಗತಿಗಳ ಸಿಂಗಾರ: ಮಕ್ಕಳನ್ನು ಆಕರ್ಷಿಸುತ್ತಿರುವ ಸಮಾನ ಮನಸ್ಕರ ತಂಡ

    ವಿಜಯವಾಣಿ ವಿಶೇಷ ಅಳವಂಡಿ: ಇತ್ತೀಚಿನ ಕೆಲ ದಿನಗಳಿಂದ ಸರ್ಕಾರಿ ಶಾಲೆಗಳಲ್ಲಿ ಸಮಾನ ಮನಸ್ಕ ಶಿಕ್ಷಕರು ತಂಡಗಳನ್ನು ರಚಿಸಿಕೊಂಡು ಸ್ವಂತ ಖರ್ಚಿನಲ್ಲಿ ಗ್ರಾಮೀಣ ಭಾಗದ ಶಾಲೆಗಳ ಅಂದವನ್ನು ಹೆಚ್ಚಿಸಿ ಮಕ್ಕಳನ್ನು ಆಕರ್ಷಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಮಕ್ಕಳು ಶಾಲೆಗೆ ಬರುವಂತೆ ಪ್ರೇರೇಪಿಸುತ್ತಿದೆ. ಕಲರವ ಶಿಕ್ಷಕರ ತಂಡ ತಿಂಗಳ ಒಂದು ದಿನ ಆಯ್ದ ಶಾಲೆಗೆ ಸುಣ್ಣ ಬಣ್ಣವನ್ನು ಹೆಚ್ಚಿಸಿ ಅಂದಗೊಳಿಸುತ್ತಿದೆ.

    ನಲಿಕಲಿ ಕೊಠಡಿಯ ಅಂದವನ್ನು ಹೆಚ್ಚಿಸಿ ಮಕ್ಕಳ ಮೆಚ್ಚುಗೆಗೆ ಪಾತ್ರ

    ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಕೊಠಡಿಯ ಅಂದವನ್ನು ಹೆಚ್ಚಿಸಿ ಮಕ್ಕಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತಾಲೂಕಿನಲ್ಲಿ ಶಾಲೆಗಳನ್ನು ಆಯ್ದುಕೊಂಡು ಸ್ವಂತ ವೆಚ್ಚದಲ್ಲಿ ನಲಿಕಲಿ ಕೊಠಡಿಗಳಿಗೆ ಅಭ್ಯಾಸಕ್ಕೆ ಅವಶ್ಯವಿರುವ ವಿವಿಧ ಕಲಾಕೃತಿ ಚಿತ್ರ, ಗೋಡೆ ಬರಹ ಹಾಗೂ ಸುಣ್ಣ ಬಣ್ಣವನ್ನು ಮಾಡಿ ಅಂದವನ್ನು ಹೆಚ್ಚಿಸುತ್ತಿದೆ. ಶಿಕ್ಷಕ ವೃತ್ತಿಯ ಜತೆಗೆ ಬಿಡುವಿನ ಸಮಯದಲ್ಲಿ ಶಾಲೆಯ ಅಂದವನ್ನು ಹೆಚ್ಚಿಸುತ್ತಿದ್ದಾರೆ.

    ಅಭಿನವ ಗವಿಶ್ರೀ ಗುರುಸೇವಾ ಬಳಗ ಕಾಯ೵ ಶ್ಲಾಘನೀಯ

    ನಲಿಕಲಿ, ಶೃಂಗಾರ ಮಕ್ಕಳ ಬದುಕು ಬಂಗಾರ ಎಂಬ ಘೋಷವಾಕ್ಯದೊಂದಿಗೆ ತಾಲೂಕಿ ಸಮಾನ ಮನಸ್ಕ 18 ಶಿಕ್ಷಕರನ್ನೊಳಗೊಂಡ ಅಭಿನವ ಗವಿಶ್ರೀ ಗುರುಸೇವಾ ಬಳಗವು ಸ್ವತಂ ಖರ್ಚಿನಲ್ಲಿ ಸರ್ಕಾರಿ ಶಾಲೆಗಳ ನಲಿಕಲಿ ತರಗತಿಗೆ ಬಣ್ಣ, ನಲಿಕಲಿ ತಟ್ಟೆ ಚಪ್ಪರ, ಕಲಿಕೋಪರಣಗಳು, ಗೋಡೆ ಬರಹಗಳಿಂದ ಜೀವ ತುಂಬುವ ಕೆಲಸ ಮಾಡುತ್ತಾ ಗ್ರಾಮೀಣ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಂತೆ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಶಾಲೆಗಳ ಆರಂಭಕ್ಕೆ ದಿನಗಣನೆ, ಜಿಲ್ಲೆಯಲ್ಲಿ ಶೇ.99.77 ಪಠ್ಯಪುಸ್ತಕ ಪೂರೈಕೆ

    ಒಂದು ಶಾಲೆಗೆ ಸುಮಾರು 30 ರಿಂದ 40 ಸಾವಿರ ರೂ ಖರ್ಚು

    ಓಜನಹಳ್ಳಿ, ಮುನಿರಾಬಾದ್, ಹಟ್ಟಿ ಸರ್ಕಾರಿ ಶಾಲೆಯ ನಲಿಕಲಿ ಕೊಠಡಿಯನ್ನು ಈ ತಂಡವು ಸುಣ್ಣ ಬಣ್ಣಗಳಿಂದ ಸಿಂಗರಿಸಿದೆ. ಒಂದು ಶಾಲೆಗೆ ಸುಮಾರು 30 ರಿಂದ 40 ಸಾವಿರ ರೂ. ಹಣವನ್ನು ಪ್ರತಿಯೊಬ್ಬ ಶಿಕ್ಷಕರು ಸ್ವಂತ ಭರಿಸುತ್ತಿದ್ದಾರೆ. ಈ ಕಾರ್ಯಕ್ಕೆ ಶಿಕ್ಷಕರ ಸಂಘವು ಕೂಡ ಸಹಕಾರ ನೀಡುತ್ತಿದೆ.


    ತಂಡದ ಸದಸ್ಯರಿವರು: ಪರಶುರಾಮ ಬೆಲಮ್ಕರ, ರಮೇಶ ಬುಡ್ಡನಗೌಡರ, ಮಹೇಶ ಟಂಕಸಾಲಿ, ನಪೀಸಖಾನ ಪಠಾಣ, ಸುರೇಶ ತೋಟದ, ಬಾಳಪ್ಪ ಕಾಳೆ, ಬಸವರಾಜ ಕೋಮಲಾಪುರ, ಗವಿಸಿದ್ದಪ್ಪ ಕೇರಿ, ಬಸನಗೌಡ ಹೊಸಮನಿ, ದೇವೇಂದ್ರಪ್ಪ ಕೊಡದಾಳ, ಪರಮೇಶ್ವರಪ್ಪ ಕೊಟ್ರಣ್ಣವರ, ಅಂಬಣ್ಣ ಬೀಮನೂರ, ದೇವಪ್ಪ ಒಂಟಿಗಾರ, ಪ್ರಶಾಂತ, ಸುಗೂರೇಶ, ಪ್ರಕಾಶ ತಟ್ಟಿ, ಈರಪ್ಪ ಬಿಜಲಿ, ಯಶೋಧಾ ಹುನಗುಂದ, ಸುಮತಿ, ಪೂರ್ಣಿಮಾ ತುಪ್ಪದ, ಪೂರ್ಣಿಮಾ ಪಟ್ಟಣಶೆಟ್ಟಿ, ನಾಗರತ್ನ.

    ಸಮಾನ ಮನಸ್ಕ ಶಿಕ್ಷಕರ ತಂಡ ಸ್ವಂತ ಖರ್ಚಿನಲ್ಲಿ ಮಕ್ಕಳ ಕಲಿಕೆಗೆ ಒತ್ತು ನೀಡಲು ನಲಿಕಲಿ ಕೊಠಡಿಗಳನ್ನು ಸುಣ್ಣ ಬಣ್ಣ ಹಾಗೂ ಗೋಡೆ ಬರಹ ಅಂಟಿಸಿ ಸಿಂಗರಿಸುತ್ತಿದೆ. ಇದು ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಂತೆ ಮಾಡುತ್ತಿದೆ. ಇವರ ಕಾರ್ಯ ಶ್ಲಾಘನೀಯ.
    ಶಂಕ್ರಯ್ಯ ಟಿ.ಎಸ್. ಬಿಇಒ ಕೊಪ್ಪಳ

    ಗ್ರಾಮೀಣ ಭಾಗದಲ್ಲಿ ನಲಿಕಲಿ ಮಕ್ಕಳಿಗೆ ಈ ಕೊಠಡಿಗಳು ಉಪಯುಕ್ತ ಅಭ್ಯಾಸ ಮಾಡಿಸುವಲ್ಲಿ ಸಹಕಾರಿಯಾಗಲಿದೆ. ತಂಡದ ಸರ್ವ ಸದಸ್ಯರು ಕೊಠಡಿ ಸಿಂಗಾರ ಕಾರ್ಯದಲ್ಲಿ ಭಾಗಿಯಾಗಿದ್ದೇವೆ. ಇದರಲ್ಲಿ ಎಲ್ಲ ಶಿಕ್ಷಕರ ಸಹಕಾರ ಇದೆ. ಗ್ರಾಮೀಣ ಭಾಗದ ಮಕ್ಕಳ ಓದಿಗೆ ಸಹಕಾರಿಯಾಗಲಿಚೆ.
    ರಮೇಶ ಬುಡ್ಡನಗೌಡರ, ಅಭಿನವ ಗವಿಶ್ರೀ ಸೇವಾ ಬಳಗದ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts