ಬೆಳಗಾವಿ: ಮಾರಕಾಸಗಳಿಂದ, ಪತ್ನಿ, ಕೊಲೆ, ಪತಿ, ಬಂಧನ,

ಬೆಳಗಾವಿ: ಪತಿ ತನ್ನ ಪತ್ನಿಯನ್ನು ಮಾರಕಾಸಗಳಿಂದ ಹತ್ಯೆಗೈದಿರುವ ಬಗ್ಗೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ಗೋಕಾಕ ತಾಲೂಕಿನ ಕೈತಾನ್‌ಹೊಸುರ ಗ್ರಾಮದ ನಾಗವ್ವ ಮಿಡಿಕನಟ್ಟಿ (25) ಮೃತರು. ನಾಗವ್ವ ಎಂದಿನಂತೆ ಬುಧವಾರ ಬೆಳಗ್ಗೆ ಪತಿ ಸಿದ್ಧಾರೂಢ ರಾಮಸಿದ್ದಪ್ಪ ಮಿಡಿಕನಟ್ಟಿಯೊಂದಿಗೆ ಹೊಲಕ್ಕೆ ತೆರಳಿದ್ದು, ವಾಪಸ್ ಮನೆಗೆ ಬಂದಿರಲಿಲ್ಲ. ಆದರೆ, ಗುರುವಾರ ಬೆಳಗ್ಗೆ ಗ್ರಾಮದ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಆಕೆಯ ಪತಿಯೇ ತಲೆಗೆ ಮಾರಕಾಸದಿಂದ ಹಲ್ಲೆ ಮಾಡಿ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *