ರಾಯಬಾಗ: ಎಲ್ಲ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ ಮಿಷನ್ ಜಾರಿಗೆ ತಂದಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಬೋಮ್ಮನಾಳ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲ ಜೀವನ ಮಿಷನ್ ಯೋಜನೆಯಡಿ ಮಂಜೂರಾದ 76 ಲಕ್ಷ ರೂ. ವೆಚ್ಚದ 400 ಮನೆಗಳಿಗೆ ನಳ ಸಂಪರ್ಕ ಮತ್ತು 50 ಸಾವಿರ ಲೀ. ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.
ಜೆಇ ಲೋಹಿತ ಕಾಂಬಳೆ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪುರೆ, ಲಗಮಣ್ಣ ಸವಸುದ್ದಿ, ಅರ್ಜುನ ಕಾಂಬಳೆ, ಮಹಾದೇವ ಕಾಂಬಳೆ, ಸಂತೋಷ ಪೂಜಾರಿ, ರಮೇಶ ಕಾಂಬಳೆ, ರವಿ ರಬಕವಿ, ಬಾಬು ಕರಿಹೊಳೆ, ಬಾಬು ಪಾಟೀಲ ಇತರರಿದ್ದರು.