More

  ರಕ್ತದಾನದಿಂದ ದೈಹಿಕ ಚೈತನ್ಯ

  ಅಥಣಿ ಗ್ರಾಮೀಣ: ಯುವಕರು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಿ ರೋಗಿಗಳಿಗೆ ನೆರವಾಗಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಬಿ.ಬಾಲಪ್ಪನವರ ಹೇಳಿದರು.

  ಗ್ರಾಮದ ಹನುಮಾನ ದೇವಾಲಯದ ಸಮುದಾಯ ಭವನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಡಹಳ್ಳಿ ಹಾಗೂ ಗ್ರಾಪಂ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

  ರಕ್ತದಾನ ಮಾಡಿದರೆ ರಕ್ತ ಕಡಿಮೆಯಾಗುತ್ತದೆ. ಮತ್ತು ಅಶಕ್ತತನ ಬರುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ದಾನಿಯಲ್ಲಿ ಚೈತನ್ಯ ತುಂಬುತ್ತದೆ. ರಕ್ತದಾನ ಮಾಡುವುದರಿಂದ ಹೃದಯ ರೋಗ ಬರುವ ಸಂಭವ ಕಡಿಮೆಯಾಗುತ್ತದೆ ಎಂದರು. ಸುಮಾರು 30ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
  ಗ್ರಾಪಂ ಅಧ್ಯಕ್ಷ ಬಸವಂತ ಗುಡ್ಡಾಪುರ ಅಧ್ಯಕ್ಷತೆ ವಹಿಸಿದ್ದರು.

  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ವಿ. ಕೊಪ್ಪದ, ಎಂ.ಎ. ಶೇಖ, ನಿಜಗುಣಿ ಪೂಜಾರಿ, ಎಸ್.ಆರ್. ಸಿಳೀನ್, ಟಿ.ಎಸ್ ಸಿಪಾಯಿ, ಮಲ್ಲಿಕಾರ್ಜುನ ಸಕ್ರಿ, ಎಫ್.ಎಸ್.ಕೋಲಾರ, ಸಂಧ್ಯಾ ಕಾಡೇಶ, ಶೋಭಾ ಸನದಿ, ಸುಜಾತಾ ಹಾಲಳ್ಳಿ, ಜಯಶ್ರೀ ನಾಯಿಕ, ಇಂದ್ರವ್ವ ಕಾಂಬಳೆ, ಸುನಂದಾ ಗುಡ್ಡಾಪುರ, ಕವಿತಾ ಕಿವಡಣ್ಣವರ ಇತರರಿದ್ದರು.

  See also  ಮೋದಿ ವಿಶ್ವಮಾನ್ಯ ನಾಯಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts