More

    ಅರಿವಿನಿಂದ ಸಮಾಜ ಸುಧಾರಣೆದತ್ತ- ಚಿಗರಳ್ಳಿಯ ಸಿದ್ಧಬಸವಕಬೀರ ಸ್ವಾಮೀಜಿ ಅಭಿಮತ

    ಯಲಬುರ್ಗಾ: ಶಿಷ್ಯರನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವುದು ಗುರುವಿನ ಕರ್ತವ್ಯ ಎಂದು ಚಿಗರಳ್ಳಿಯ ಸಿದ್ಧಬಸವಕಬೀರ ಸ್ವಾಮೀಜಿ ಹೇಳಿದರು.

    ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ಶನಿವಾರ ಮಲ್ಲಿನಾಥ ಶರಣರ ಸ್ಮರಣಾರ್ಥ 178ನೇ ಮಾಸಿಕ ಸಂಚಾರಿ ಶಿವಾನುಭವ ಗೋಷ್ಠಿ, ಮುದಕಪ್ಪ ಇಂಗಳದಾಳ 16ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಅರಿವಿನ ಪಥದಲ್ಲಿ ಸಾಗಿದಾಗ ಸಮಾಜ ಸುಧಾರಣೆಯಾಗಲಿದೆ ಎಂದರು.

    ಇದನ್ನೂ ಓದಿ: ಸಮಾಜ ಸುಧಾರಣೆಗೆ ಜೀವನ ಮುಡಿಪಿಟ್ಟಶರಣೆ ಅಕ್ಕಮಹಾದೇವಿ

    ಇಲಕಲ್ಲ ಮಹಾಂತ ಸ್ವಾಮೀಜಿ ಮಾತನಾಡಿ, ಗುರು ಎಂದರೆ ಕಾವಿ ಬಟ್ಟೆಯ ಮೇಲೆ ಗುರುತಿಸಬಾರದು. ಗುರು ಎನ್ನುವುದು ಸ್ಥಾನವಲ್ಲ. ಮಲ್ಲಿನಾಥ ಶರಣರು ಅರವಿನ ಜಾಗೃತಿ ಮೂಡಿಸಿದ್ದಾರೆ. ನಮ್ಮಲ್ಲಿರುವ ಅಜ್ಞಾನ, ದ್ವೇಷ, ಅಸೂಯೆ ಶಮನವಾಗಬೇಕಾದರೆ ಲಿಂಗ ಪೂಜೆ ಅವಶ್ಯ ಎಂದು ಹೇಳಿದರು.

    ಕೊಪ್ಪಳದ ಬಸವ ಟ್ರಸ್ಟ್ ಅಧ್ಯಕ್ಷ ರಾಜೇಶ ಸಶಿಮಠ, ರಾಯಚೂರ ಜಿಲ್ಲಾ ಬಸವಕೇಂದ್ರದ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ, ಅಶೋಕ ಬರಗುಂಡಿ, ಈರಮ್ಮ ಕೊಳ್ಳಿ, ಬಸಪ್ಪ ಬ್ಯಾಲಿಹಾಳ, ಬಸವರಾಜ ಇಂಗಳದಾಳ, ದೇವಣ್ಣ ಖಾನಿಹಾಳ, ಮಹಾದೇವಪ್ಪ ಚೆನ್ನಳ್ಳಿ, ಅಮರೇಶ ಗಡಿಹಳ್ಳಿ, ಶೇಖಣ್ಣ, ರುದ್ರಪ್ಪ ಹಳ್ಳಿ, ಸಿ.ಬಿ,ಅಂಗಡಿ, ಬಸವರಾಜ ಹಿರೇಹಡಗಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts