ಬೆಳಗಾವಿ : 29ರಿಂದ ಹಲಕಿ ಹಿರೇಮಠದ ಜಾತ್ರೆ ಮಹೋತ್ಸವ

ಮುರಗೋಡ: ಹಲಕಿ ಗ್ರಾಮದ ಹಿರೇಮಠದ ಜಾತ್ರೆ ಮಹೋತ್ಸವ, ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ, ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಹಿರೇಮಠದ ಉದ್ಘಾಟನೆ ಕಾರ್ಯಕ್ರಮಗಳು ಶುಕ್ರವಾರದಿಂದ ಮಾ.31ರ ವರೆಗೆ ಜರುಗಲಿವೆ ಎಂದು ಹಿರೇಮಠದ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಕಾರ್ಯಕ್ರಮ ಜರುಗಲಿದ್ದು, ಜಾತ್ರೆ ನಿಮಿತ್ತ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ಮತ್ತು ಜಗದ್ಗುರು ವಿಶ್ವರಾಧ್ಯ ಹಾಗೂ ನಂದಿ ವಿಗ್ರಹಗಳ ಪ್ರತಿಷ್ಠಾಪನೆ, ನೂತನ ಹಿರೇಮಠದ ಉದ್ಘಾಟನಾ ಕಾರ್ಯಕ್ರಮಗಳು ನೆರವೇರಲಿವೆ.

ಶುಕ್ರವಾರ ಸಾಯಂಕಾಲ ಜಗದ್ಗುರು ವಿಶ್ವರಾಧ್ಯ ಮತ್ತು ನಂದಿ ವಿಗ್ರಹಗಳ ಮರುಪ್ರವೇಶ ಹೊಸ ಮೂರ್ತಿಗಳ ಜಲವಾಸ, ಧಾನ್ಯವಾಸ ನಡೆಯುವುದು. ನಂತರ ನಡೆಯುವ ಹಿರೇಮಠದ ಉದ್ಘಾಟನೆ ಕಾರ್ಯಕ್ರಮದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ, ಕೆಳದಿ ಹಿರೇಮಠ ಹಲಕಿ ವಹಿಸುವರು. ಪಾಶ್ಚಾಪುರ ಹಿರೇಮಠದ ವಿಶ್ವರಾಧ್ಯ ಶಿವಾಚಾರ್ಯ ಅಧ್ಯಕ್ಷತೆ ವಹಿಸುವರು. ಸತ್ತಿಗೇರಿ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸುವರು.
ಶನಿವಾರ ಬೆಳಗ್ಗೆ ನಂದಿ ವಿಗ್ರಹಗಳ ಮಹಾರುದ್ರಾಭಿಷೇಕ, ಹೋಮ, ಹವನ ಧಾರ್ಮಿಕ, ಕಾರ್ಯಕ್ರಮ ಜರಗುವುದು. ಸಾಯಂಕಾಲ ನಡೆಯಲಿರುವ ಶಿವಕೀರ್ತನೆ ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೈಲಹೊಂಗಲ ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಅಧ್ಯಕ್ಷತೆ ಹಾಗೂ ಪೂಜ್ಯರು ಸಾನ್ನಿಧ್ಯ ವಹಿಸಲಿದ್ದಾರೆ.

ಭಾನುವಾರ ಬೆಳಗ್ಗೆ ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ ಪೂರ್ಣ ಕುಂಭಮೇಳದೊಂದಿಗೆ ವಿವಿಧ ವಾದ್ಯಮೇಳಗಳ ಮುಖಾಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸುವುದು. ಸಂಜೆ ಧಾರ್ಮಿಕ ಕಾರ್ಯಕ್ರಮ ಜರುಗುವುದು. ಮಾಜಿ ಶಾಸಕ ಡಾ: ವಿಶ್ವನಾಥ ಪಾಟೀಲ ಉದ್ಘಾಟನೆ ನೆರವೇರಿಸುವರು.

ಅಥಿತಿಗಳಾಗಿ ಸಂಸದ ಸುರೇಶ ಅಂಗಡಿ, ಶಾಸಕ ಮಹಾಂತೇಶ ಕೌಜಲಗಿ, ಸವದತ್ತಿ ಶಾಸಕ ಆನಂದ ಮಾಮನಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *