ತಮ್ಮನ್ನು ಭೇಟಿಯಾಗದಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಸ್ನೇಹಿತರು

ಬೆಂಗಳೂರು: ಕುಡಿತದ ಚಟಕ್ಕೆ ದಾಸರಾಗಿದ್ದ ಸ್ನೇಹಿತರನ್ನು ಭೇಟಿಯಾಗದಿದ್ದಕ್ಕೆ ಇನ್ನಿಬ್ಬರು ಸ್ನೇಹಿತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ವಿಶ್ವನಾಥ್ ಎಂಬಾತನಿಗೆ ಇಬ್ಬರು ಸ್ನೇಹಿತರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮೂಲತಃ ಬಗಲಗುಂಟೆ ನಿವಾಸಿಯಾದ ವಿಶ್ವನಾಥ್ ಮನೆ ಪಕ್ಕದಲ್ಲೇ ಪ್ರೀತಮ್ ಹಾಗೂ ಚೇತನ್ ಎಂಬ ಇಬ್ಬರು ಸ್ನೇಹಿತರಿದ್ದರು. ಬಿಕಾಂ ಮುಗಿಸಿದ ಮೇಲೆ ವಿಶ್ವನಾಥ್ ಖಾಸಗಿ ಕಂಪನಿಗೆ ಸೇರಿದ್ದ. ಆದರೆ ಪ್ರೀತಮ್ ಚೇತನ್ ಇಬ್ಬರೂ ಕುಡಿತಕ್ಕೆ ದಾಸರಾಗಿದ್ದರು. ಈ ಹಿನ್ನೆಲೆ ಇಬ್ಬರ ಪೋಷಕರು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಇದನ್ನೆಲ್ಲ ಅರಿತಿದ್ದ ವಿಶ್ವನಾಥ್ ಸ್ನೇಹಿತರಿಂದ ಅಂತರ ಕಾಯ್ದುಕೊಂಡಿದ್ದ

ಆದರೆ ಮೊನ್ನೆ ಆಕಸ್ಮಿಕವಾಗಿ ಮೂವರು ಭೇಟಿಯಾಗಿದ್ದಾರೆ. ಈ ವೇಳೆ ವಿಶ್ವನಾಥ್‌ಗೆ ಸಣ್ಣ ಪುಟ್ಟ ಹಲ್ಲೆ ಮಾಡಿ ಏನಕ್ಕೆ ಭೇಟಿಯಾಗಿಲ್ಲ ಎಂದು ಕೇಳಿದ್ದಾನೆ. ಮಾತನಾಡಬೇಕೆಂದು ವಿಶ್ವನಾಥ್‌ ಮನೆಗೆ ತೆರಳಿ ಸ್ವಲ್ಪ ಮಾತನಾಡಬೇಕು ಬಾ ಎಂದು ಕೇಳಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ವಿಶ್ವನಾಥ್ ನನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಕರಣ ಸಂಬಂಧ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಆರೋಪಿ ಪ್ರೀತಮ್‌ನನ್ನು ಬಂಧಿಸಿದ್ದು, ಆರೋಪಿ ಚೇತನ್ ಎಸ್ಕೇಪ್‌ ಆಗಿದ್ದಾನೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *