ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ ಗೆಳೆಯ

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪಟೇಗಾರಪಾಳ್ಯದಲ್ಲಿ ನಡೆದಿದೆ.

ರಾಬಿನ್(35) ಹತ್ಯೆಯಾದವನು. ಆರೋಪಿ ತನ್ವೀರ್ ಖಾನ್ ಅಲಿಯಾಸ್‌ ಶಾರುಖ್ ಖಾಖ್​​ ಕೃತ್ಯ ಎಸಗಿದ್ದಾನೆ.

ಮೃತ ರಾಬಿನ್ ಹಾಗೂ ಆತನ ಪತ್ನಿ ಜತೆ ಆರೋಪಿ ತನ್ವೀರ್ ಕೂಡ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ನಿರ್ಧಿಷ್ಟ ಮನೆಗಳಿಲ್ಲದೆಯೇ ಎಲ್ಲರೂ ಅಲ್ಲಿನ‌ ಶೆಡ್‌ಗಳಲ್ಲಿ ಮಲಗುತ್ತಿದ್ದರು. ಮೃತ ರಾಬಿನ್ ಪತ್ನಿಗೆ ಆರೋಪಿ ತನ್ವೀರ್ ಅನೈತಿಕ ಸಂಬಂಧಕ್ಕಾಗಿ ಒತ್ತಾಯಿಸುತ್ತಿದ್ದ. ಈ ಹಿನ್ನೆಲೆ ಅನೈತ್ತಿಕ‌ ಸಂಬಂಧಕ್ಕೆ ಅಡ್ಡಿಯಾದ ಎನ್ನುವ ಕಾರಣಕ್ಕೆ ರಾಬಿನ್ ತಲೆ ಮೇಲೆ ಕಲ್ಲು ಹಾಕಿ ತನ್ವೀರ್‌ ಕೊಲೆ ಮಾಡಿದ್ದಾನೆ.

ಘಟನೆ ಬಳಿಕ ಆರೋಪಿ ತನ್ವೀರ್‌ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *