ನಿಪ್ಪಾಣಿ: 25ರಂದು ಕ್ಯಾಂಪಸ್ ಸಂದರ್ಶನ

ನಿಪ್ಪಾಣಿ: ಸ್ಥಳೀಯ ವಿಎಸ್‌ಎಂ ಸೋಮಶೇಖರ ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬೆಳಗ್ಗೆ 9.30ಕ್ಕೆ ಕೊನೆಯ ವರ್ಷದ ಎಲ್ಲ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆಯಲಿದೆ.

ಸಂದರ್ಶನದಲ್ಲಿ ಹಲವು ಪ್ರಮುಖ ಕಂಪನಿಗಳು ಭಾಗವಹಿಸಲಿದ್ದು, ಡಿಪ್ಲೊಮಾ ಮೆಕಾನಿಕಲ್, ಪ್ರೊಡಕ್ಷನ್, ಆಟೊಮೊಬೈಲ್, ಐಟಿಐ, ಸಿಎನ್‌ಸಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಉತ್ತೀರ್ಣಗೊಂಡ ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಮೊ.ಸಂ.9590357172, 9036235898ಗೆ ಸಂಪರ್ಕಿಸಬಹುದು ಎಂದು ಮಹಾವಿದ್ಯಾಲಯ ತಿಳಿಸಿದೆ.