PHOTOS: ಮೊದಲ ರಫೇಲ್​ ಜೆಟ್​ನ್ನು ಹಸ್ತಾಂತರಿಸಿದ ಬೆನ್ನಲ್ಲೇ ಎರಡನೇ ಜೆಟ್​ನ ಅದ್ಭುತ ಫೋಟೋಗಳನ್ನು ಬಿಡುಗಡೆ ಮಾಡಿದ ಡಸಾಲ್ಟ್​ ಏವಿಯೇಷನ್…​

ಬೋರ್ಡೆಕ್ಸ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಫ್ರಾನ್ಸ್​ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಮಂಗಳವಾರ ಮೊದಲ ರಫೇಲ್ ಯುದ್ಧ ವಿಮಾನವನ್ನು ಅಧಿಕೃತವಾಗಿ ಹಸ್ತಾಂತರ ಮಾಡಿದೆ. ಭಾರತ ಒಟ್ಟು 36 ರಫೇಲ್ ಯುದ್ಧವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು 2020 ರ ಮೇ ಒಳಗೆ ನಾಲ್ಕು ಜೆಟ್​ಗಳು ಭಾರತಕ್ಕೆ ತಲುಪಲಿವೆ.

RB 001 ಹೆಸರಿನ ಮೊದಲ ವಿಮಾನವನ್ನು ವಿಜಯದಶಮಿಯಂದು ಸ್ವೀಕರಿಸಿದ ರಾಜನಾಥ್​ ಸಿಂಗ್​ ಅವರು, ಇದೊಂದು ಐತಿಹಾಸಿಕ ದಿನ ಎಂದು ಹೇಳಿದ್ದರು. ಯುದ್ಧ ವಿಮಾನದ ಮೇಲೆ ಒಂದು ಸುತ್ತು ಹಾರಾಟ ನಡೆಸಿದ್ದಲ್ಲದೆ..ಇದೊಂದು ಅದ್ಭುತ ವಿಮಾನ ಎಂದಿದ್ದರು.

ಇಂದು ಡಸಾಲ್ಟ್​ ಏವಿಯೇಷನ್​ ಎರಡನೇ ರಫೇಲ್​ ಜೆಟ್​ನ ಕೆಲವು ಫೋಟೋಗಳನ್ನು ಬಿಡುಗಡೆ ಮಾಡಿದೆ. RB 002 ಹಾರಾಟದ ಈ ಫೋಟೋಗಳನ್ನು ನೋಡಿದರೆ ಮೈ ಜುಂ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಮೊದಲ ಮೂರು ವಿಮಾನಗಳಿಗೆ RB 001, RB 002, RB 003 ಎಂದು ಹೆಸರು ನೀಡಲಾಗಿದೆ. ಇದಕ್ಕೆ ಕಾರಣವೂ ಇದೆ. ಆರ್​ಬಿ ಎಂಬುದು ವಾಯುಸೇನೆ ಮುಖ್ಯಸ್ಥ ಮಾರ್ಷಲ್​ ರಾಕೇಶ್​ ಕುಮಾರ್​ ಸಿಂಗ್​ ಬುದುರಿಯಾ ಅವರ ಹೆಸರಿನ ಮೊದಲ ಅಕ್ಷರಗಳನ್ನು ಸೂಚಿಸುತ್ತದೆ. ರಾಕೇಶ್​ ಕುಮಾರ್ ಸಿಂಗ್​ ಅವರು ಐಎಎಫ್​ ಡೆಪ್ಯೂಟಿ ಚೀಫ್​ ಆಗಿದ್ದಾಗ ನಡೆದಿದ್ದ ರಫೇಲ್​ ಒಪ್ಪಂದಲ್ಲಿ ಅವರು ತುಂಬ ಪ್ರಮುಖ ಪಾತ್ರ ವಹಿಸಿದ್ದರು.

ಇದೇ ಕಾರಣಕ್ಕೆ ಅವರ ಹೆಸರಿನ ಮೊದಲ ಎರಡು ಅಕ್ಷರಗಳನ್ನು ಮೂರು ರಫೇಲ್​ ಜೆಟ್​ಗಳಿಗೆ ನಾಮಕರಣ ಮಾಡಲಾಗಿದೆ.

Leave a Reply

Your email address will not be published. Required fields are marked *