More

  ಬಹುಸಂಖ್ಯಾತರ ಮೇಲೆ ಕಲ್ಲೆಸೆಯುವಷ್ಟು ಸ್ವಾತಂತ್ರ್ಯ, ಶಭಾಷ್!

  ಬಹುಸಂಖ್ಯಾತರ ಮೇಲೆ ಕಲ್ಲೆಸೆಯುವಷ್ಟು ಸ್ವಾತಂತ್ರ್ಯ, ಶಭಾಷ್!ಕಲ್ಲೆಸೆಯುವ ರೋಗ ಹೇಗೆ ಇವರನ್ನು ಆವರಿಸಿಕೊಂಡಿದೆಯೋ ದೇವರೇ ಬಲ್ಲ. ಮೊದಲೆಲ್ಲ ದೂರದ ಕಾಶ್ಮೀರದಲ್ಲಿ ಕಲ್ಲೆಸೆಯುತ್ತಿದ್ದ ಈ ಜನರನ್ನು ನಾವು ಟಿವಿಯಲ್ಲಿ ನೋಡುತ್ತಿದ್ದೆವು. ಈಗ ಊರೂರಲ್ಲೂ ಇವರೇ ತುಂಬಿಬಿಟ್ಟಿದ್ದಾರೆ. ಕಾಶ್ಮೀರದಲ್ಲಿ ಸೈನಿಕರು ತಿರುಗಿಸಿ ನಾಲ್ಕು ಬಾರಿಸಿದರಲ್ಲ, ಹಾಗೆಯೇ ಎಲ್ಲೆಡೆಯೂ ಮಾಡಿದರೆ ಸರಿ ಹೋಗುತ್ತಾರೇನೋ ನೋಡಬೇಕು. ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಎಲ್ಲೆಲ್ಲೂ ಈ ಕಲ್ಲೆಸೆಯುವವರದ್ದೇ ಅಬ್ಬರ. ಮಸೀದಿಯ ಮೇಲೆ ನಿಂತುಕೊಂಡು ಹಿಂದೂಗಳು ಮೆರವಣಿಗೆ ಬರುವುದನ್ನು ಕದ್ದುಮುಚ್ಚಿ, ಕಾದುಕುಳಿತು ಕೊನೆಗೆ ಸುತ್ತುವರಿದು ಕಲ್ಲೆಸೆಯುವ ಹೀನಬುದ್ಧಿ ಇದೆಯಲ್ಲ, ಇದನ್ನು ಸಜ್ಜನನೆನಿಸಿಕೊಂಡವನ್ಯಾರೂ ಸಮರ್ಥಿಸಿಕೊಳ್ಳಲಾರ. ಇಂತಹುದರಲ್ಲೂ ಇಸ್ಲಾಂನಲ್ಲಿ ಸಂಗೀತಕ್ಕೆ ಅವಕಾಶವಿಲ್ಲವಾದ್ದರಿಂದ ಮಸೀದಿಯ ಹೊರಗೆ ಬರುತ್ತಿರುವ ಈ ಡಿಜೆ ಸಹಿತ ಮೆರವಣಿಗೆಯನ್ನು ಅವರು ವಿರೋಧಿಸುತ್ತಾರೆ ಎಂದಿದ್ದಾರೆ. ಶಭಾಷ್! ಪ್ರತಿದಿನ ಅಜಾನ್ ಕೂಗುವಾಗ ಅಲ್ಲಾ ಒಬ್ಬನೇ ದೇವರು ಎಂದು ಹೇಳುವ ಮಾತುಗಳನ್ನು ಮೂವತ್ಮೂರು ಕೋಟಿ ದೇವತೆಗಳನ್ನು ಪೂಜಿಸುವ ಹಿಂದೂ ಕೇಳಿಕೊಂಡೇ ಬಂದಿಲ್ಲವೇನು? ದೇವಸ್ಥಾನದ ಹೊರಗೆ ದಿನನಿತ್ಯ ಅರಚುವ ಮೈಕುಗಳನ್ನು ಕಲ್ಲೆಸೆದು ನಾಶ ಮಾಡಿದ್ದೇವೇನು? ಈಗ ಇವರಿಗೆ ಈ ಮೆರವಣಿಗೆಯಲ್ಲಿ ಸಂಗೀತವಿರುವುದರಿಂದ ಸಹಿಸಲಸಾಧ್ಯವೆಂದರೆ ಏನೆನ್ನಬೇಕು ಹೇಳಿ? ಇದೇ ಸಮುದಾಯದ ತರುಣರು ಗುಜರಾತಿಗಳು ಸಂಗೀತ ಹಾಕಿಕೊಂಡು ದಾಂಡ್ಯಾ ನೃತ್ಯ ಮಾಡುವಾಗ ಕದ್ದುಮುಚ್ಚಿ ಬಂದು ಆ ಹೆಣ್ಣುಮಕ್ಕಳೊಂದಿಗೆ ನಿರ್ಲಜ್ಜರಾಗಿ ಹೆಜ್ಜೆ ಹಾಕುತ್ತಾರಲ್ಲ, ಆಗ ಇಸ್ಲಾಮಿಗೆ ಸಂಗೀತ ಸಹ್ಯವೇನು? ಸೆಕ್ಯುಲರಿಸಂನ ಪಾಠ ಹಿಂದೂಗಳಿಗೆ ಏಕೆ? ಎಷ್ಟು ದಿನ ಕಲ್ಲೆಸೆಯುವ ಪುಂಡರನ್ನು ಅಲ್ಪಸಂಖ್ಯಾತರೆಂಬ ಛತ್ರದಡಿ ಕಾಪಾಡಿಕೊಳ್ಳಬೇಕು?

  ಅಲ್ಪಸಂಖ್ಯಾತರೆಂದರೆ ಸಂಖ್ಯೆ ಕಡಿಮೆಯಿರುವವರೆಂದರ್ಥ. ಆದರೆ, 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಮುಸಲ್ಮಾನರು ಶೇಕಡಾ 15ರಷ್ಟಿದ್ದು, 18 ಕೋಟಿಯನ್ನು ದಾಟಿದ್ದಾರೆ. ಇಂಡೋನೇಷ್ಯಾ, ಪಾಕಿಸ್ತಾನಗಳನ್ನು ಬಿಟ್ಟರೆ ಇವರು ಹೆಚ್ಚು ಪ್ರಮಾಣದಲ್ಲಿರೋದು ಭಾರತದಲ್ಲಿಯೇ. ಇವರ ಜನಸಂಖ್ಯೆ ಜಗತ್ತಿನ 95 ರಾಷ್ಟ್ರಗಳಿಗಿಂತಲೂ ಹೆಚ್ಚು. ಉತ್ತರ ಪ್ರದೇಶದಲ್ಲಿರುವ ಮುಸಲ್ಮಾನರ ಸಂಖ್ಯೆ ಇಸ್ಲಾಂ ಅವತರಿಸಿದ ಸೌದಿ ಅರೇಬಿಯಾದಲ್ಲಿರುವ ಮುಸಲ್ಮಾನರ ಜನಸಂಖ್ಯೆಗಿಂತಲೂ ಹೆಚ್ಚು! ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂಗಳಲ್ಲೆಲ್ಲ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸೋದು ಮುಸಲ್ಮಾನರೇ. ಹಾಗಿದ್ದರೂ ಇವರು ಅಲ್ಪಸಂಖ್ಯಾತರೇ? ಹಾಗೆ ನೋಡಿದರೆ ಭಾರತದಲ್ಲಿ ಸಲಿಂಗಕಾಮಿಗಳು, ತೃತೀಯ ಲಿಂಗಿಗಳು ನಿಜಕ್ಕೂ ಅಲ್ಪಸಂಖ್ಯಾತರು. ಸೌಲಭ್ಯ ಕೊಡಲೇಬೇಕಿದ್ದರೆ ಅವರಿಗೆ ಕೊಡಬೇಕೇ ಹೊರತು, ಇವರಿಗಲ್ಲ. ಹೀಗಾಗಿಯೇ ಕೇರಳದ ಗವರ್ನರ್ ಆಗಿದ್ದ ಆರಿಫ್ ಅಹ್ಮದ್ ಖಾನ್ ಅಲ್ಪಸಂಖ್ಯಾತ ಎಂಬ ವಿಭಾಗ ಇರಬೇಕಾದ್ದು, ಮತವೇ ಪ್ರಧಾನವಾಗಿರುವ ರಾಷ್ಟ್ರಗಳಲ್ಲಿ, ಭಾರತದಲ್ಲಿ ಎಲ್ಲರೂ ಸಮಾನರಾದ್ದರಿಂದ ಇಲ್ಲಿ ಇವುಗಳಿಗೆ ಅವಕಾಶ ಕೊಡಬಾರದು ಎಂದಿದ್ದರು. ಆ ದೃಷ್ಟಿಯಿಂದ ಹೇಳುವುದಾದರೆ ಇಸ್ಲಾಂ ಪ್ರಧಾನವಾದ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ, ಸೌದಿ ಅರೇಬಿಯಾದಲ್ಲಿ, ಕ್ರಿಶ್ಚಿಯಾನಿಟಿಯನ್ನೇ ರಾಷ್ಟ್ರಧರ್ಮವೆಂದು ಗುರುತಿಸಿಕೊಂಡಿರುವ ಇಂಗ್ಲೆಂಡಿನಲ್ಲಿ ಇತರೆ ಮತೀಯರನ್ನು ಅಲ್ಪಸಂಖ್ಯಾತರೆಂದು ಗುರುತಿಸಬೇಕೇ ಹೊರತು, ಭಾರತದಲ್ಲಲ್ಲ!

  ನಿಜಕ್ಕೂ ಜಾಗತಿಕವಾಗಿ ಅಲ್ಪಸಂಖ್ಯಾತ ಹಿಂದೂ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿರೋದು ಕ್ರಿಶ್ಚಿಯನ್ನರು, ಮುಸಲ್ಮಾನರೇ. ಒಬ್ಬೊಬ್ಬರೂ ಐವತ್ತಕ್ಕೂ ಹೆಚ್ಚು ದೇಶಗಳನ್ನು ತಮ್ಮ ಪಾಲಿಗೆ ಹಂಚಿಕೊಂಡುಬಿಟ್ಟಿದ್ದಾರೆ. ಹಿಂದೂಗಳು ಇರೋದು ಇಲ್ಲಿ ಮಾತ್ರ. ಹೀಗಾಗಿ, ಜಾಗತಿಕವಾದ ಅಲ್ಪಸಂಖ್ಯಾತರ ಸೌಲಭ್ಯವನ್ನು ಪಡೆಯಬೇಕಾದವರು ನಾವೇ ಹೊರತು, ಕತ್ತಿಗೆ ಹೆದರಿ ಮತಾಂತರಗೊಂಡ ಮಂದಿಯಲ್ಲ. ನಮ್ಮಲ್ಲಿಯಂತೂ ಪಂಜಾಬ್, ಜಮ್ಮು-ಕಾಶ್ಮೀರ, ನಾಗಾಲ್ಯಾಂಡು, ಮಿಜೋರಾಂ, ಅರುಣಾಚಲ ಪ್ರದೇಶಗಳಲ್ಲಿ ಹಿಂದೂವೇ ಅಲ್ಪಸಂಖ್ಯಾತ. ಆದರೆ, ಅಲ್ಲಿಯೂ ಅಲ್ಪಸಂಖ್ಯಾತರ ಎಲ್ಲ ಸೌಲಭ್ಯಗಳನ್ನೂ ಕಬಳಿಸುತ್ತಿರುವ ಮಂದಿ ಈ ಮುಸಲ್ಮಾನರೇ. ವಾಸ್ತವವಾಗಿ, ದೇಶದಲ್ಲೆಲ್ಲೆಡೆ ಅಲ್ಪಸಂಖ್ಯಾತ ಎಂಬ ಪದಕ್ಕೆ ಗೌರವ ತರುವಂತೆ ನಿಜಕ್ಕೂ ಕಡಿಮೆ ಸಂಖ್ಯೆಯಲ್ಲಿರುವವರು ಪಾರ್ಸಿಗಳೇ. ಸಿಗುವುದಿದ್ದರೆ ಧಾರ್ವಿುಕ ಅಲ್ಪಸಂಖ್ಯಾತರ ಹಣೆಪಟ್ಟಿ ಅವರಿಗೆ ದೊರೆಯಬೇಕೇ ಹೊರತು, 20 ಕೋಟಿಗಿಂತಲೂ ಹೆಚ್ಚಿರುವ, ಕಲ್ಲೆಸೆದು ರಾದ್ಧಾಂತ ಮಾಡಬಲ್ಲ ಈ ಮಂದಿಗಲ್ಲ.

  ಸ್ವಾತಂತ್ರ್ಯದ ಹೊಸ್ತಿಲಲ್ಲೇ ಕಾಂಗ್ರೆಸ್ಸು ಮುಸಲ್ಮಾನರನ್ನು ಮನೆಯ ಅಳಿಯನಂತೆ ನೋಡಿಕೊಳ್ಳುವ ಪರಿಪಾಠ ಆರಂಭಿಸಿತು. ಅಂಬೇಡ್ಕರುರು ಹೇಳುವಂತೆ ರಾಜಕೀಯವಾಗಿ ಚಾಣಾಕ್ಷರಲ್ಲದ ಮುಸಲ್ಮಾನರು ಮಸೀದಿಗೆ ನೆಲಹಾಸು ಹಾಕಿಕೊಟ್ಟರೂ ವೋಟು ಹಾಕಿಬಿಡುತ್ತಾರೆ. ಇಂಥವರನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ಸು ಅಲ್ಪಸಂಖ್ಯಾತ ನೀತಿಯೊಂದನ್ನು ಮುಂದಿಟ್ಟು ಅವರನ್ನು ಬಹುಸಂಖ್ಯಾತರಿಗಿಂತ ಮೇಲೆ ಕೂರಿಸುವ ಯೋಜನೆ ರೂಪಿಸಿದರು. ವಾಸ್ತವವಾಗಿ, ನಮ್ಮ ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು. ಆದರೆ, ಕಾಂಗ್ರೆಸ್ಸು ಮುಸಲ್ಮಾನರನ್ನು ಬಹುಸಂಖ್ಯಾತರಿಗಿಂತ ಮೇಲೆ ಕೂರಿಸಿತಲ್ಲದೆ ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳಲ್ಪಡುವ ಬೌದ್ಧ, ಸಿಖ್ಖ, ಜೈನರನ್ನೂ ಮೂಲೆಗುಂಪು ಮಾಡಿ ಮುಸಲ್ಮಾನರ ವೈಭವೀಕರಣಕ್ಕೆ ಪ್ರಯತ್ನಿಸಿತು. ಒಂದು ಹಂತದಲ್ಲಂತೂ ಮನಮೋಹನ್ ಸಿಂಗರು, ಈ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಅಧಿಕಾರ ಮುಸಲ್ಮಾನರದ್ದೇ ಎಂದೂ ಹೇಳಿಬಿಟ್ಟಿದ್ದರು. ಈಗಲೂ ಅಷ್ಟೇ, ಕಾಂಗ್ರೆಸ್ಸು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಸ್ತೆ ಅಗಲೀಕರಣಕ್ಕೆ ಮುಸಲ್ಮಾನರ ಮನೆಗಳು ಒಡೆಯಲ್ಪಡಬೇಕಾಯ್ತೆಂದರೆ ರಸ್ತೆ ಅಗಲೀಕರಣವೇ ನಿಂತುಬಿಡುತ್ತದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಕಥೆಯೂ ಇದಕ್ಕಿಂತ ಭಿನ್ನವೇನೂ ಅಲ್ಲ. ಸ್ವಲ್ಪಮಟ್ಟಿಗೆ ನಾಲ್ಕು ಬಾರಿಸಿ ಇವರ ಪುಂಡತನವನ್ನು ಹಿಡಿತದಲ್ಲಿರಿಸಿಕೊಂಡಿರೋದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರು ಮಾತ್ರ. ಅವರನ್ನೇ ಅನುಸರಿಸಿದ ಅಸ್ಸಾಮಿನ ಹಿಮಂತ್ ಬಿಸ್ವಾ ಸ್ವಲ್ಪಮಟ್ಟಿಗೆ ಈ ವಿಚಾರದಲ್ಲಿ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಬಾಕಿ ಎಲ್ಲರೂ ಅವರ ಕಲ್ಲೆಸೆತಕ್ಕೆ ಹೆದರಿ ಅಡಗಿ ಕುಳಿತ ನಾಯಕರೇ.

  ಮುಸಲ್ಮಾನರಿಗೆ ಅಲ್ಪಸಂಖ್ಯಾತರ ದರ್ಜೆಯನ್ನು ಕೊಡಲೇಬೇಕೆಂದು ವಾದಿಸುವ ಎಡಪಂಥೀಯ ಬುದ್ಧಿಜೀವಿಗಳಲ್ಲಿ ಕೆಲವರು, ಅಲ್ಪಸಂಖ್ಯಾತರ ಶೈಕ್ಷಣಿಕ ಮಟ್ಟ ಹಿಂದಿರುವುದರಿಂದ ಈ ನೀತಿ ಅತ್ಯಗತ್ಯ ಎನ್ನುತ್ತಾರೆ. ವಾಸ್ತವವೇನು ಗೊತ್ತೇ? ಹಿಂದೂಗಳ ಮತ್ತು ಮುಸಲ್ಮಾನರ ಶೈಕ್ಷಣಿಕ ಮಟ್ಟ ಅಂದಾಜು ಶೇಕಡಾ 64ರಷ್ಟಿದ್ದು ಸಮಸಮಕ್ಕೆ ಇದ್ದಾರೆ. ಅಲ್ಪಸಂಖ್ಯಾತರೆಂದು ಗುರುತಿಸಲ್ಪಡುವ ಜೈನರ ಶೈಕ್ಷಣಿಕ ಮಟ್ಟ ಶೇಕಡಾ 87ರಷ್ಟಿದೆ. ಉಳಿದೆಲ್ಲ ಅಲ್ಪಸಂಖ್ಯಾತರದ್ದು ಹಿಂದೂಗಳಿಗಿಂತ ಹೆಚ್ಚಿನ ಶೈಕ್ಷಣಿಕ ಮಟ್ಟವೇ. ಆದರೂ ಹೆಚ್ಚು ಹೆಚ್ಚು ಸೌಲಭ್ಯ ಸಿಗುತ್ತಿರುವುದು ಇವರಿಗೇ ಎಂದರೇನರ್ಥ! ಇಷ್ಟಾಗಿಯೂ ಉಳಿದೆಲ್ಲ ಅಲ್ಪಸಂಖ್ಯಾತರ ಸಂಖ್ಯೆ ಜನಗಣತಿಯಿಂದ ಜನಗಣತಿಗೆ ಕುಸಿಯುತ್ತಿದ್ದರೆ, ಮುಸಲ್ಮಾನರ ಸಂಖ್ಯೆ ಮಾತ್ರ ಯದ್ವಾ ತದ್ವಾ ಏರುತ್ತಿದೆ. ಇದಕ್ಕೆ ಕಾರಣ ಈ ಸಮುದಾಯದ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿರುವುದೇ ಎನ್ನಲಾಗುತ್ತದೆ. ಅಂಕಿ-ಅಂಶಗಳ ಪ್ರಕಾರ ಹಿಂದೂ ಮತ್ತು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಮಟ್ಟ ಶೇಕಡಾ 90ರಷ್ಟಿದೆ. ಆದರೂ ಆ ಹೆಣ್ಣುಮಕ್ಕಳು ಮದುವೆಯಾದೊಡನೆ ಮಕ್ಕಳನ್ನು ಹೆರುವ ಯಂತ್ರಗಳಾಗಿಬಿಡುತ್ತಾರೆಂದರೆ ಇದರ ಹಿಂದೆ ಬಲವಾದ ಹುನ್ನಾರವೊಂದಿರಲೇಬೇಕು. ಇದರ ಕುರಿತಂತೆ ಯಾವ ಯೋಜನೆ ರೂಪಿಸುವವನೂ ಗಮನ ಹರಿಸುವುದಿಲ್ಲವಲ್ಲ ಎನ್ನುವುದೇ ಆಶ್ಚರ್ಯ.

  ಇಷ್ಟಕ್ಕೂ ಸಂವಿಧಾನದ ಪ್ರಕಾರ ಎರಡು ಬಗೆಯ ಅಲ್ಪಸಂಖ್ಯಾತರಿದ್ದಾರೆ. ಇಷ್ಟು ಹೊತ್ತು ನಾವು ನೋಡಿದ ಧಾರ್ವಿುಕ ಅಲ್ಪಸಂಖ್ಯಾತರು ಒಂದೆಡೆಯಾದರೆ, ಭಾಷಾ ಅಲ್ಪಸಂಖ್ಯಾತರು ಮತ್ತೊಂದೆಡೆ. ಆದರೆ, ಈ ಭಾಷಾ ಅಲ್ಪಸಂಖ್ಯಾತರ ಕುರಿತಂತೆ ನಮ್ಮ ರಾಜಕಾರಣಿಗಳು ಕಾಳಜಿ ಹರಿಸಿದ್ದು ಬಲುಕಡಿಮೆಯೇ. ಮಾತೆತ್ತಿದರೆ ಮುಸಲ್ಮಾನರಿಗೆ ಸೌಲಭ್ಯಗಳ ಕೊಡುಗೆಯನ್ನೇ ಹಂಚುವ ಈ ಮಂದಿ ಎಂದಾದರೂ ಮಹಾರಾಷ್ಟ್ರದಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಯೋಜನೆಯಲ್ಲಿ ಪಾಲು ಕೊಟ್ಟಿದ್ದಾರೇನು? ಹಿಂದಿಯನ್ನುಳಿದು ಉಳಿದೆಲ್ಲ ಭಾರತೀಯ ಭಾಷೆಗಳೂ ಭಾಷಾ ಅಲ್ಪಸಂಖ್ಯಾತ ವರ್ಗಕ್ಕೆ ಸೇರುತ್ತವೆನ್ನುವಾದರೆ ಅಲ್ಲಿ ಮೀಸಲಾತಿ ಬೇಡವೇನು? ಈ ಕುರಿತಂತೆ ಪ್ರಶ್ನಿಸಿದಾಗ ನ್ಯಾಯಾಲಯ ಭಾಷಾ ಅಲ್ಪಸಂಖ್ಯಾತರ ಕುರಿತಂತೆ ನಿರ್ಣಯವನ್ನು ಆಯಾ ರಾಜ್ಯಗಳ ಮಟ್ಟದಲ್ಲಿ ತೆಗೆದುಕೊಳ್ಳಬೇಕು ಎಂದಿತ್ತು. ಆದರೆ, ಧಾರ್ವಿುಕ ಅಲ್ಪಸಂಖ್ಯಾತರ ವಿಚಾರದಲ್ಲಿ ಮಾತ್ರ ರಾಷ್ಟ್ರಮಟ್ಟದಲ್ಲೇ ನಿರ್ಣಯ ಕೈಗೊಳ್ಳಲಾಗುತ್ತದಲ್ಲ! ಸ್ವಲ್ಪ ಗೊಂದಲವಿದೆ ಎನಿಸುತ್ತಿಲ್ಲವೇ? ಈ ಕಾರಣಕ್ಕಾಗಿಯೇ ಧಾರ್ವಿುಕ ಅಲ್ಪಸಂಖ್ಯಾತರಾಗಿ ಮುಸಲ್ಮಾನರು ದೇಶದ ಬಹುತೇಕ ಯೋಜನೆಗಳನ್ನು ಕಬಳಿಸಿ ಬೆಳೆಯುತ್ತಿರುವುದಲ್ಲದೆ, ಇವರ ಸೌಖ್ಯಕ್ಕಾಗಿ ತೆರಿಗೆ ಕಟ್ಟುತ್ತಿರುವ ಹಿಂದೂಗಳ ಮೇಲೆ ಕಲ್ಲೆಸೆಯುವ ಧಾಷ್ಟರ್್ಯ ತೋರುತ್ತಿರುವುದು.

  ಎಲ್ಲ ತಪ್ಪೂ ಹಿಂದೂವಿನದ್ದೇ. ಇವರೆಲ್ಲ ತಮ್ಮನ್ನು ತಾವು ರಿಲಿಜನ್ ಎಂದು ಕರೆದುಕೊಂಡರೆ, ನಾವು ಮಾತ್ರ ಹಿಂದೂಧರ್ಮವನ್ನು ಜೀವನ ಪದ್ಧತಿ ಎಂದು ಕರೆದಿದ್ದೇವೆ. ಸಂವಿಧಾನದಲ್ಲಿ ಧರ್ಮಕ್ಕೆ ಜಾಗವಿದೆ, ಜೀವನ ಪದ್ಧತಿಗೆ ಜಾಗವೇ ಇಲ್ಲ. ಹಿಂದೂಗಳಿಗೆ ಬಾಲ್ಯದಿಂದಲೂ ಒಳ್ಳೆಯ ಸಂಸ್ಕಾರಗಳನ್ನು ಕೊಟ್ಟು ಶ್ರೇಷ್ಠ ನಾಗರಿಕನಾಗುವಂತೆ ರೂಪಿಸಲಾಗುತ್ತದೆ. ಸಹಜವಾಗಿಯೇ ಆತ ವಿವೇಕಿಯಾಗಿ ಬೆಳೆಯುತ್ತಾನೆ. ವಿವೇಕಿ ಮತ್ತು ಅವಿವೇಕಿಗಳು ಬಡಿದಾಟಕ್ಕೆ ಬಿದ್ದರೆ ಗೆಲ್ಲೋದು ಅವಿವೇಕಿಯೇ. ಏಕೆಂದರೆ ವಿವೇಕಿ ತರ್ಕಬದ್ಧವಾಗಿ ಯೋಚಿಸಿ ಕೈಚೆಲ್ಲಿಬಿಡುತ್ತಾನೆ. ಟಿವಿ ಡಿಬೆಟ್​ನಲ್ಲಿ ಹೇಳಿದ ಮಾತೊಂದಕ್ಕಾಗಿ ಸರ್ ತನ್​ಸೆ ಜುದಾ ಎನ್ನುತ್ತಾ ಬೀದಿಗಿಳಿದ ಅವಿವೇಕಿಗಳನ್ನು ಕಂಡು ಹಿಂದೂ ಶಾಂತವಾಗಿಬಿಟ್ಟ. ಏಕೆಂದರೆ ಅವನಂತೆ ಬೀದಿಗಿಳಿದು ಕಾದಾಟ ಮಾಡುವುದು ಇವನಿಂದ ಎಂದಿಗೂ ಸಾಧ್ಯವಾಗಲಾರದು. ಇನ್ನು ಪುಂಡತನಕ್ಕೆ ಸರ್ಕಾರಗಳೂ ಬಾಗುತ್ತವೆ. ಇರುವಷ್ಟು ದಿನ ಅಧಿಕಾರವನ್ನು ಶಾಂತವಾಗಿ ನಡೆಸಿದರೆ ಅವರಿಗೆ ಸಾಕು. ಇಂತಹ ಸರ್ಕಾರಗಳು ಶಾಂತಿಯನ್ನು ಬಯಸುವವನಿಗೆ ಬೆನ್ನಿಗೊಂದು ಗುದ್ದು ಕೊಟ್ಟು ಬುದ್ಧಿವಾದ ಹೇಳುತ್ತವೆಯೇ ಹೊರತು ಪುಂಡನಿಗೆ ನಾಲ್ಕು ಬಾರಿಸಿ ಬಾಯ್ಮುಚ್ಚಿಕೊಂಡು ಕೂರಲು ಹೇಳದು. ಹೀಗಾಗಿಯೇ ಕಲ್ಲೆಸೆಯುವ ಈ ಮಂದಿ ಗೆದ್ದುಬಿಡುತ್ತಾರೆ. ಹಾಗಂತ ಇದನ್ನು ಸಭ್ಯ ಸಮಾಜ ಗೆಲುವೆಂದು ಕರೆಯುವುದಿಲ್ಲ. ಅವರನ್ನು ಕಂಡು ಅಸಹ್ಯಪಟ್ಟುಕೊಳ್ಳುತ್ತದೆ. ಅವರುಗಳು ಬಂದರೆ ದೂರ ಹೋಗಿಬಿಡೋಣ ಎನ್ನುತ್ತದೆ. ಕೊನೆಗೆ ಅಕ್ಕಪಕ್ಕದಲ್ಲಿ ಅವರುಗಳಿದ್ದರೂ ಮನೆಯನ್ನು ಮಾರಿ ಸಭ್ಯರಿರುವ ಜಾಗಕ್ಕೆ ವರ್ಗಾವಣೆಯಾಗಿಬಿಡುತ್ತದೆ. ಹೀಗಾಗಿಯೇ ನಾಲ್ಕು ಮುಸಲ್ಮಾನರ ಮನೆಯಿಂದ ಆರಂಭವಾದ ಏರಿಯಾವೊಂದು ಕಾಲಕ್ರಮದಲ್ಲಿ ಮಿನಿ ಪಾಕಿಸ್ತಾನವೇ ಆಗಿ ರೂಪುಗೊಂಡುಬಿಡೋದು!

  ಹಾಗಂತ ಎಲ್ಲ ಮುಸಲ್ಮಾನರು ಈ ಕಲ್ಲೆಸೆಯುವವರ ಬೆಂಬಲಿಗರೆಂದೇನೂ ಅಲ್ಲ. ಮುಸಲ್ಮಾನರಲ್ಲಿ ಇಂತಹ ಕಲ್ಲೆಸೆಯುವ ಪುಂಡರ ಒಂದು ಅಲ್ಪಸಂಖ್ಯಾತ ವರ್ಗವಿದ್ದರೆ ಇವರ ಕುರಿತಂತೆ ಏನೂ ಮಾತನಾಡಲಾಗದೇ ಶಾಂತವಾಗಿ ಸಹಿಸಿಕೊಂಡಿರುವ ಬಹುಸಂಖ್ಯಾತರಿದ್ದಾರೆ. ಇಂತಹ ಶಾಂತಿಪ್ರಿಯ ಬಹುಸಂಖ್ಯಾತರಲ್ಲೂ ಮುಸಲ್ಮಾನರು ವಿಕಾಸದ ಹಾದಿಯಲ್ಲಿ ನಡೆಯಬೇಕೆಂದು ಹೇಳುತ್ತಾ ಈ ಎಲ್ಲ ವಿಪರೀತವಾದ ಆದರ್ಶಗಳನ್ನು ಧಿಕ್ಕರಿಸುವ ಮಂದಿಯಿದ್ದರೆ, ಮತ್ತೊಂದೆಡೆ ಈ ಪುಂಡರನ್ನು ಧಿಕ್ಕರಿಸಿದರೂ ಮುಸಲ್ಮಾನರ ವಿಕಾಸದ ಕುರಿತಂತೆ ಕಲ್ಪನೆಯಿಲ್ಲದ ಮಂದಿ ಇದ್ದಾರೆ. ಅಂಥವರೇ ಬುರ್ಖಾ, ಹಿಜಾಬ್​ಗಳನ್ನು ಬೆಂಬಲಿಸಿ ಮೆರವಣಿಗೆಗೆಂದು ಬೀದಿಗೆ ಬರೋದು. ಇವರಿಗೆ ಕಲ್ಲೆಸೆಯುವವರು ಇಷ್ಟವಾಗೋದಿಲ್ಲ ನಿಜ. ಆದರೆ, ಮುಸಲ್ಮಾನರನ್ನು ವಿಕಾಸದ ಹಾದಿಯಲ್ಲಿ ನೋಡಲಿಕ್ಕೂ ಇವರು ಇಚ್ಛಿಸುವುದಿಲ್ಲ. ಇಂಥವರ ಬೆಂಬಲವೇ ಕಾಂಗ್ರೆಸ್​ಗೆ, ಜನತಾದಳಕ್ಕೆ. ಕಳೆದ ಏಳು ದಶಕಗಳಿಂದಲೂ ರಾಜಕೀಯ ಮುಖ್ಯ ಭೂಮಿಕೆಯಲ್ಲಿರುವ ಈ ಪಕ್ಷಗಳು ಒಮ್ಮೆಯಾದರೂ ಮುಸಲ್ಮಾನರನ್ನು ಉನ್ನತ ಹುದ್ದೆಯಲ್ಲಿ ಕೂರಿಸುವ ಕಲ್ಪನೆಯನ್ನೂ ಕಟ್ಟಿಕೊಂಡಿಲ್ಲ. ಮೋದಿಗಿಂತ ಮುಂಚೆ ಹತ್ತು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ಸು ಮುಸಲ್ಮಾನರನ್ನು ಪ್ರಧಾನಮಂತ್ರಿ ಮಾಡಿತ್ತೇನು? ಅಹ್ಮದ್ ಪಟೇಲರ ನೆರಳಲ್ಲೇ ಬೆಳೆದಿದ್ದ ಕಾಂಗ್ರೆಸ್ಸು ಅವರನ್ನು ಗುಜರಾತಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೊಷಿಸಲೇ ಇಲ್ಲವಲ್ಲ! ಇಷ್ಟೆಲ್ಲ ಮಾತನಾಡುವ ಮಮತಾ ಬ್ಯಾನರ್ಜಿ ತನ್ನ ಸ್ಥಾನವನ್ನು ಯಾರಾದರು ಮೌಲ್ವಿಗೆ ಬಿಟ್ಟುಕೊಟ್ಟಿದ್ದನ್ನು ನೋಡಿದ್ದೀರಾ? ಸಿದ್ದರಾಮಯ್ಯನವರಂತೂ ಕಳೆದ ಚುನಾವಣೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿ ಮುಖ್ಯಮಂತ್ರಿ ರೇಸಿನಿಂದಲೇ ದೂರವುಳಿಯುವಂತೆ ಮಾಡಿಬಿಟ್ಟಿದ್ದರು! ಇವರೆಲ್ಲರೂ ವೇದಿಕೆಯ ಮೇಲೆ ಮಾತನಾಡುತ್ತಾರಲ್ಲ, ಹಾಗೆ ಬದುಕಿನಲ್ಲಿ ನಡೆಯುವುದಿಲ್ಲ. ಆದರೂ ಮುಸಲ್ಮಾನರಿಗೆ ಇವರ ಮೇಲೆಯೇ ವಿಶ್ವಾಸ.

  ಇರಲಿ, ತಪ್ಪೇನೂ ಇಲ್ಲ. ಅವರ ಈ ವಿಶ್ವಾಸವನ್ನು ಉಳಿಸಿಕೊಳ್ಳಲು ತುಳಿತಕ್ಕೊಳಗಾದವರ, ಅವಕಾಶ ವಂಚಿತರ ಸವಲತ್ತುಗಳನ್ನು ಅವರಿಗೆ ನೀಡುವುದನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಬೊಮ್ಮಾಯಿ ಸರ್ಕಾರ ಮುಸಲ್ಮಾನರ ನಾಲ್ಕು ಪ್ರತಿಶತ ಮೀಸಲಾತಿಯನ್ನು ತೆಗೆದು ಗೌಡರಿಗೆ, ಲಿಂಗಾಯಿತರಿಗೆ ವರ್ಗಾಯಿಸಿದ್ದು ಈ ಹಿನ್ನೆಲೆಯಲ್ಲಿ ಮೆಚ್ಚಬೇಕಾದ ಸಂಗತಿಯೇ.

  (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

  ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts