ಸಂವಿಧಾನದಿಂದ ಎಲ್ಲರಿಗೂ ಸ್ವಾತಂತ್ಯ್ಯ

ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ | ಹರ್ತಿ ಸಹಕಾರ ಸಂದ ವಾರ್ಷಿಕ ಸಭೆ

ವಿಜಯವಾಣಿ ಸುದ್ದಿಜಾಲ ತುಮಕೂರು
ಸಂವಿಧಾನ ಬದಲಾಯಿಸುವ ಹುನ್ನಾರ ಹುಸಿಗೊಳಿಸುವ ಬಹುದೊಡ್ಡ ಹೋರಾಟದ ಭಾಗವಾಗಿ ರಾಜ್ಯ ಸರ್ಕಾರ ಬೀದರ್​ನಿಂದ ಚಾಮರಾಜ ನಗರದವರೆಗೆ ಸುಮಾರು 2500 ಕಿ.ಮೀ. 25 ಲಕ್ಷಕ್ಕೂ ಹೆಚ್ಚು ಜನ ಮಾನವ ಸರಪಳಿ ನಿರ್ಮಿಸಿ ಗಿನ್ನೆಸ್​ ರೆಕಾರ್ಡ್ಸ್​ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಅಕ್ಕಮಹಾದೇವಿ ಸಭಾಂಗಣದಲ್ಲಿ ಶನಿವಾರ ಹರ್ತಿ ಪತ್ತಿನ ಸಹಕಾರ ಸಂಘದ 30ನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ಯ್ಯದಲ್ಲಿ ಈ ಜನಾಂಗಕ್ಕೆ ಶಕ್ತಿಯನ್ನು ಕೊಟ್ಟವರು ಬಾಬಾ ಸಾಹೇಬ್​ ಅಂಬೇಡ್ಕರ್​, ಅಂಬೇಡ್ಕರ್​ ಅವರ ಜೀವನ ಚರಿತ್ರೆ ಓದದಿದ್ದರೆ ಈ ಭೂಮಿಯ ಮೇಲೆ ಬದುಕಿದ್ದು ಸತ್ತಂತೆ ಎಂದರು.


ಮುಂದಿನ ಪೀಳಿಗೆಗೆ ಈ ಜಾತಿ, ಧರ್ಮದ ಕೀಳರಿಮೆ ಬಿಟ್ಟು ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿ ಸಾಧನೆ ಮಾಡುವಂತಹ ವಾತಾವರಣ ಸೃಷ್ಟಿಸಬೇಕಿದೆ. ಮೆಡಿಕಲ್​, ಇಂಜಿನಿಯರಿಂಗ್​, ವಿಜ್ಞಾನ, ತಂತ್ರಜ್ಞಾನ ವಿಷಯದಲ್ಲಿ ಸಮರ್ಥರಾಗಬೇಕು. ರಾಜಕೀಯವಾಗಿಯೂ ಬೆಳೆಯುವಂತಹ ರಾಜಕೀಯ ಜ್ಞಾನ ರೂಪಿಸಬೇಕಿದೆ. ಆಗ ಮಾತ್ರ ನಾವು ದೇಶದಲ್ಲಿ ಮುನ್ನೆಡೆ ಸಾಧಿಸಲು ಸಾಧ್ಯ, ಛಲವಾದಿ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಹರ್ತಿ ಪತ್ತಿನ ಸಹಕಾರ ಸಂಘಕ್ಕೆ ಒಂದು ಕೋಟಿ ರೂ. ಠೇವಣಿ ನೀಡುವುದಾಗಿ ಹೇಳಿದರು.ಛಲವಾದಿ ಸಮುದಾಯ ಒಂದು ವಿಶಿಷ್ಟವಾದ ಸಮುದಾಯ ಎಂಬುದನ್ನು 32 ವರ್ಷಗಳ ಕಾಲ ದೇಶ ಸಂಚಾರ ಮಾಡಿದ್ದ ಪ್ರೆಂಚ್​ ವಿದ್ವಾಂಸ ಬರೆದಿರುವ ಹಿಂದು ಕಸ್ಟಮ್ಸ್​ ಆ್ಯಂಡ್​ ಪ್ರಾಕ್ಟಿಸಸ್​ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.


ಕೇರಳದ ನಂಬೂದರಿ ಬ್ರಾಹ್ಮಣರಿಂದ ಹಿಡಿದು ಎಲ್ಲ ವರ್ಗದವರ ಅಧ್ಯಯನ ಮಾಡಿ ನಮೂದಿಸಿದ್ದಾರೆ. ಅವರ ಪುಸ್ತಕದಲ್ಲಿ ಛಲವಾದಿಗಳೆಂದರೆ ಯಾರು?, ಅವರನ್ನು ಯಾಕೆ ಈ ಹೆಸರಿನಿಂದ ಕರೆಯುತ್ತಾರೆ ಎಂಬುದನ್ನು ತಿಳಿಸಿದ್ದಾರೆ ಎಂದರು. ಆಂಧ್ರ ಪ್ರದೇಶದ ಮಾರ, ಮಹಾರಾಷ್ಟ್ರದ ಮಹರ್​, ಕರ್ನಾಟಕದ ಛಲವಾದಿ ಎಲ್ಲವೂ ಒಂದೇ ಸಮುದಾಯ. ಬಹಳ ಸ್ವಾಭಿಮಾನ ಮತ್ತು ಹಠವಾದಿಗಳು ಎಂಬುದನ್ನು ಹೆಸರಿಸಿದ್ದಾರೆ, ಭೀಮ ಕೋರೆಗಾವ್​ ಯುದ್ಧದ ಉಲ್ಲೇಖವೂ ಇದೆ ಎಂದರು.


ಕೆಪಿಎಸ್​ಸಿ ಸದಸ್ಯೆ ಡಾ.ಕಾವಾಲಮ್ಮ ಮಾತನಾಡಿ, ಛಲವಾದಿ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಬಸವಲಿಂಗಪ್ಪ, ಕೆ.ಎಚ್​.ರಂಗನಾಥ್​, ಮಲ್ಲಿಕಾರ್ಜುನ ರ್ಖಗೆ ಸೇರಿದಂತೆ ಹಲವರು ಸಿಎಂ ಕುರ್ಚಿಯಿಂದ ವಂಚಿತರಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿ ಎಲ್ಲರೂ ಲೀಡರ್​ಗಳಾಗಿದ್ದಾರೆ. ಅನುಯಾಯಿಗಳಾಲು ಸಿದ್ಧರಿಲ್ಲ. ಜನಾಂಗಕೋಸ್ಕರ ಸ್ವಾರ್ಥ ಬಿಟ್ಟರೆ ಮಾತ್ರ ರಾಜಕೀಯದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು. ಛಲವಾದಿ ಸಮುದಾಯ ಭವನಕ್ಕೆ ಅನುದಾನ ನೀಡುವಂತೆ ಛಲವಾದಿ ಸಾಂಸತಿಕ ಸಂಘದ ಡಾ.ಪಿ.ಚಂದ್ರಪ್ಪ, ಚಂದ್ರಶೇಖರ್​, ಎಸ್​.ರಾಜಣ್ಣ ಸಚಿವರಿಗೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಲ್ಲಸಂದ್ರ ಹಾಲು ಒಕ್ಕೂಟದ ಎಂಡಿ.ಶ್ರೀನಿವಾಸ್​, ಸಹಕಾರಿ ಸಂಘದ ಉಪಾಧ್ಯಕ್ಷ ವಿ.ಮೋಹನ್​ ಕುಮಾರ್​, ನಿರ್ದೇಶಕರಾದ ಡಾ.ವೈ. ದಾಸಪ್ಪ ಮತ್ತಿತರರು ಇದ್ದರು.

ಜಾತಿ, ಧರ್ಮ ಮರೆತು ಕೈಕೈ ಹಿಡಿದು ನಿಂತರು: ಬಾಬಾ ಸಾಹೇಬರು ಬರೆದ ಸಂವಿಧಾನದ ಪ್ರಕಾರ ಈ ದೇಶದ ಎಲ್ಲ ಪ್ರಜೆಗಳಿಗೆ ಧಾರ್ಮಿಕ, ಅರ್ಥಿಕ, ಸಾಮಾಜಿಕ ಸ್ವಾತಂತ್ರವಿದೆ. ಇದನ್ನು ಜನರಿಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಬಹುತ್ವದ ಭಾರತದಲ್ಲಿ ಎಲ್ಲರಿಗೂ ಅವಕಾಶವಿದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಕೆಲಸ ಶ್ಲಾಘನೀಯ, ಚಿಕ್ಕಮಕ್ಕಳಿಂದ ವಯೋವೃದ್ಧರವರೆಗೆ ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಕೈಕೈ ಹಿಡಿದು ನಿಂತಿದ್ದಾರೆ ಇದು ನಮ್ಮ ಭಾರತ ಎಂದು ಪರಮೇಶ್ವರ ಹೇಳಿದರು.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…