ಹಗರಿಬೊಮ್ಮನಹಳ್ಳಿ: ಉಚಿತ ಕಾನೂನು ನೆರವು ಪಡೆಯಲು ಅವಕಾಶವಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶ ಡಿ.ಕೆ.ಮಧುಸೂದನ ಹೇಳಿದರು.
ಪಟ್ಟಣದ ಗಂಗಾವತಿ ವೆಂಕಟರಮಣ ಪಂಚರತ್ನಮ್ಮ ಪದ್ಮಾವತೆಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ತಾಲೂಕು ಕಾನೂನು ಸೇವಗಳ ಸಮಿತಿ, ವಕೀಲರ ಸಂಘ ಸಹಯೋಗದೊಂದಿಗೆ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್ಸಿ, ಎಸ್ಟಿ, ಮಹಿಳೆಯರು ಮತ್ತು ಮಕ್ಕಳು, ಕಾರ್ಮಿಕರು ವಿವಿಧ ಪ್ರಕರಣಗಳಲ್ಲಿ ಉಚಿತವಾಗಿ ಕಾನೂನು ಸಲಹೆ ಪಡೆಯಬಹುದು ಎಂದರು. ಕಾಲೇಜು ಪ್ರಾಚಾರ್ಯ ಬಸವರಾಜ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಪಿ.ರಮೇಶ, ವಕೀಲರಾದ ಶ್ರೀನಿವಾಸ, ಎಸ್.ಜಿ.ನಾಗರಾಜ, ಸೇವಾ ಸಮಿತಿಯ ಸತೀಶ ಇತರರಿದ್ದರು.