More

  ಮಧುಮೇಹಿ ಮಕ್ಕಳಿಗೆ ಉಚಿತ ಇನ್ಸುಲಿನ್!

  ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಧುಮೇಹ (ಟೈಪ್ -1) ಹೊಂದಿ ರುವ ಮಕ್ಕಳಿಗೆ ಉಚಿತ ಇನ್ಸುಲಿನ್ ನೀಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಮುಂದಿನ ವರ್ಷದಿಂದ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.

  ಸದ್ಯ ಕೇರಳ ಹಾಗೂ ತಮಿಳುನಾಡಿನಲ್ಲಿ ಈ ಯೋಜನೆ ಇದೆ. ತುರ್ತು ಔಷಧಗಳ ಪಟ್ಟಿಯಲ್ಲಿ ಇನ್ಸುಲಿನ್ ಇಲ್ಲ. ಖಾಸಗಿಯಾಗಿ ಪಡೆಯಲು ಮಾಸಿಕ 5- 6 ಸಾವಿರ ರೂ. ಖರ್ಚು ಮಾಡಬೇಕಾಗಿದೆ. ಸದ್ಯ ಸರ್ಕಾರದ ಬಳಿ ಮಧುಮೇಹಪೀಡಿತ ಮಕ್ಕಳ ಸ್ಪಷ್ಟ ಮಾಹಿತಿ ಇಲ್ಲ. ಇಂಟರ್​ನ್ಯಾಷನಲ್ ಡಯಾಬಿಟಿಸ್ ಫೆಡರೇಷನ್ ದತ್ತಾಂಶ ಆಧರಿಸಿ ಹೇಳುವುದಾದರೆ ರಾಜ್ಯದಲ್ಲಿ 18ವರ್ಷಕ್ಕಿಂತ ಕಡಿಮೆ ವಯಸ್ಸಿನ 10 ರಿಂದ 11 ಸಾವಿರ ಮಕ್ಕಳಿರಬಹುದು. ನಗರದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯೊಂದರಲ್ಲೇ 18 ವರ್ಷದೊಳಗಿನ 1,200 ಮಕ್ಕಳು ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

  25 ಕೋಟಿ ರೂ.: ಮಧುಮೇಹಪೀಡಿತ 5 ಸಾವಿರ ಮಕ್ಕಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆಯಿದ್ದು, ಇವರಿಗೆ ಉಚಿತ ಇನ್ಸುಲಿನ್ ನೀಡಲು ಸರ್ಕಾರದ ಬೊಕ್ಕಸಕ್ಕೆ 25 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

  ಮಕ್ಕಳಲ್ಲಿ ಮಧುಮೇಹಕ್ಕೆ ಕಾರಣ: ಅತಿಯಾದ ದೇಹದ ತೂಕ, ನಿಯಮಿತ ವ್ಯಾಯಾಮದ ಕೊರತೆ, ಅತಿಯಾದ ಕೊಬ್ಬು ಮಿಶ್ರಿತ ಆಹಾರ ಸೇವನೆ, ಅನಿಯಂತ್ರಿತ ರಕ್ತದೊತ್ತಡ, ಕುಟುಂಬದಲ್ಲಿ ಸಕ್ಕರೆ ಕಾಯಿಲೆ ಇತಿಹಾಸ ಸೇರಿ ವಿವಿಧ ಕಾರಣಗಳಿಂದ ಮಧುಮೇಹ ಮಕ್ಕಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

  ಮಧುಮೇಹ ಹೊಂದಿರುವ ಮಕ್ಕಳಿಗೆ ಉಚಿತ ಇನ್ಸುಲಿನ್ ಒದಗಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ತಾಂತ್ರಿಕ ಸಮಿತಿ ವರದಿ ಸಲ್ಲಿಸಲಿದ್ದು, ಮುಂದಿನ ವಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

  | ಡಿ. ರಂದೀಪ್ ಆರೋಗ್ಯ ಇಲಾಖೆ ಆಯುಕ್ತ

  ಸ್ನೇಹಿತನನ್ನು ಕೊಂದಿದ್ದ ಇಬ್ಬರ ಬಂಧನ

  ಉದ್ಯಮಿಗೆ 5 ಕೋಟಿ ರೂ.ವಂಚನೆ ಪ್ರಕರಣ: ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ ಚೈತ್ರಾ ಕುಂದಾಪುರ

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts