ಹುಬ್ಬಳ್ಳಿ : ನಗರದ ಕೇಶ್ವಾಪುರದ ಕುಸುಗಲ್ಲ ರಸ್ತೆಯ ಆಕ್ಸ್ಫರ್ಡ್ ಆಫ್ ಗ್ರುಪ್ ಇನ್ಸ್ಟಿಟ್ಯೂಷನ್ಸ್, ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಹಯೋಗದೊಂದಿಗೆ ಜು. 18ರಂದು ಬೆಳಗ್ಗೆ 10.30ಕ್ಕೆ ಆಕ್ಸ್ಫರ್ಡ್ ಕಾಲೇಜಿನ ಆವರಣದಲ್ಲಿ ಉಚಿತ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.
ಆಕ್ಸ್ಫರ್ಡ್ ಗ್ರುಪ್ ಆಫ್ ಚೇರ್ಮನ್ ವಸಂತ ಹೊರಟ್ಟಿ ಅವರ ಜನ್ಮದಿನಾಚರಣೆ ಹಾಗೂ 14 ವರ್ಷಗಳ ಸಮರ್ಪಿತ ಜನೋಪಕಾರಿ ಕಾರ್ಯಚಟುವಟಿಕೆಗಳ ಭಾಗವಾಗಿ ಈ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ವೈದೇಹಿ ಆಸ್ಪತ್ರೆ ವತಿಯಿಂದ ಉಚಿತವಾಗಿ ಇಸಿಜಿ, ಜನರಲ್ ಮೆಡಿಸಿನ್, ಎಲುವು-ಕೀಲು, ಅಂಕೋಲಾಜಿ ಸ್ಕ್ರೀನಿಂಗ್, ನ್ಯೂರೋ ಮತ್ತು ಕಿಡ್ನಿ ಸ್ಟೋನ್ ತಪಾಸಣೆ ಮಾಡಲಾಗುವುದು.
ಆರೋಗ್ಯ ಇಲಾಖೆ ವತಿಯಿಂದ ಡೆಂಘ ತಪಾಸಣೆ, ರಕ್ತದ ಮಾದರಿ ಸಂಗ್ರಹ, ಕಿಮ್್ಸ ಬ್ಲಡ್ ಬ್ಯಾಂಕಿನಿಂದ ರಕ್ತದಾನ ಶಿಬಿರ, ಎಸ್ಡಿಎಂ ಆಸ್ಪತ್ರೆಯಿಂದ ಸಾಮೂಹಿಕ ಅಂಗಾಂಗ ದಾನ ಪ್ರತಿಜ್ಞೆ, ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ತಪಾಸಣೆ, ಪತಂಜಲಿ ಸ್ವಾಸ್ಥ್ಯ ಕೇಂದ್ರದಿಂದ ಯೋಗ ಆಯುರ್ವೆದ ಮತ್ತು ಪ್ರಕೃತಿ ಚಿಕಿತ್ಸಾ ಸಮಾಲೋಚನೆ, ಅಪ್ರೊಲೊ ಔಷಧಾಲಯದಿಂದ ರಕ್ತದೊತ್ತಡ ಮತ್ತು ಮಧುಮೇಹ ಪರಿಶೀಲಿಸಿ, ರಿಯಾಯಿತಿ ದರದಲ್ಲಿ ಔಷಧಿಗಳ ವಿತರಣೆ ನಡೆಯಲಿದೆ.