ಘಟಪ್ರಭಾ: ಏ.14ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

ಘಟಪ್ರಭಾ: ಗ್ರಾಮದಲ್ಲಿ ಸ್ಥಳೀಯ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರೆ ಹಾಗೂ ಲಿಂ.ಡಾ.ಗಂಗಾಧರ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಏ.14 ಭಾನುವಾರ ಅನುಕಂಪ ಗ್ರೂಪ್, ಶಿವರುದ್ರೇಶ್ವರ ಸೇವಾ ಸಮಿತಿ, ಜೈಂಟ್ಸ್ ಗ್ರೂಪ್, ಜೆ.ಜಿ.ಸಹಕಾರಿ ಆಸ್ಪತ್ರೆ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗೋಕಾಕ ಹಾಗೂ ನರಗುಂದ ಮೆಡಿಕಲ್ ಏಜೆನ್ಸಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಥೈರಾಡ್ ಮತ್ತು ಮಧುಮೇಹ ತಜ್ಞರಾದ ಡಾ.ವಿಕ್ರಾಂತ ಘಟನಟ್ಟಿ, ಮಧುಮೇಹ ತಜ್ಞರಾದ ಡಾ.ನವೀನ ಗೋಲಬಾಂವಿ, ಅಸ್ತಮಾ ಮತ್ತು ಉಸಿರಾಟ ತಜ್ಞರಾದ ಡಾ.ಸಂದೀಪ ದಂಡಿನ, ಚಿಕ್ಕಮಕ್ಕಳ ತಜ್ಞರಾದ ಡಾ.ಮಂದಾರ ಹವಳ, ಚರ್ಮರೋಗ ತಜ್ಞರಾದ ಡಾ.ಶಿವಕುಮಾರ ಪಾಟೀಲ, ಬಂಜೆತನ ತಜ್ಞರಾದ ಡಾ.ಶ್ವೇತಾ ಘಟನಟ್ಟಿ, ಸ್ತ್ರೀರೋಗ ತಜ್ಞರಾದ ಡಾ.ಸೌಮ್ಯ ನಾಯಕವಾಡಿ, ಹಿರಿಯ ವೈದ್ಯ ಡಾ.ವಿಲಾಸ ನಾಯಕವಾಡಿ, ತಾಲೂಕು ವೈದ್ಯಾಧಿಕಾರಿ ಡಾ.ಆರ್.ಎಸ್. ಬೆಣಚಿನಮರಡಿ, ಡಾ.ಪ್ರವೀಣ ಕರಗಾಂವಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 9449200193, 9448029905 ಸಂಪರ್ಕಿಸಬಹುದು.