ಗಂಡಸಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಅರಸೀಕೆರೆ ತಾಲೂಕು ಲಾಳನಕೆರೆ ಗ್ರಾಮದಲ್ಲಿ ಮಹಿಳಾ ಜ್ಞಾನವಿಕಾಸ ಯೋಜನೆಯಡಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗ್ರಾಮದ ಮಾಜಿ ಗುಡಿಗೌಡ ಸಿದ್ದಲಿಂಗೇಗೌಡ(ದೊರೆ) ಕಾರ್ಯಕ್ರಮ ಉದ್ಘಾಟಿಸಿದರು. ಶಿಬಿರದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಕ್ಷಯ ರೋಗ, ರಕ್ತಹೀನತೆ, ಮಾನಸಿಕ ಆರೋಗ್ಯ, ಋತುಚಕ್ರ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳು, ನೇತ್ರ ಪರೀಕ್ಷೆ ನಡೆಸಲಾಯಿತು.
ಬಾಗಿವಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕೃತಿಕಾ, ಸಮನ್ವಯ ಅಧಿಕಾರಿ ಸಂಗೀತಾ, ಸೇವಾ ಪ್ರತಿನಿಧಿ ಅನುರಾಧಾ, ಗಂಡಸಿ ಸಮುದಾಯ ಆರೋಗ್ಯ ಕೇಂದ್ರದ ನಾಗರಾಜು, ಅನಿಲ್ ಕುಮಾರ್, ಗುರುಮೂರ್ತಿ, ಶ್ರದ್ಧಾ ಗಂಡಸಿ ಇತರರು ಇದ್ದರು.