ಬಬಲೇಶ್ವರ ತಾಲೂಕಿನ ಜೈನಾಪುರದಲ್ಲಿ ಶ್ರೀವಿರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ರೆ ನಿಮಿತ್ತ ಜ.5 ರಂದು ವಿಜಯಪುರದ ವಾಸುದೇವ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಜಾತ್ರೆ ಅಂಗವಾಗಿ ಜ.12 ರಂದು ಯುವ ಕಲಾವಿದರಿಂದ ರತ್ನ ಮಾಂಗಲ್ಯ ನಾಟಕ ಪ್ರದರ್ಶನ ,13ರಂದು ಶ್ರೀ ವೀರಭದ್ರೇಶ್ವರನಿಗೆ ಮಹಾ ಅಭಿಷೇಕ, ಮಧ್ಯಾಹ್ನ 12ಕ್ಕೆ ಪುರುವಂತರೊಂದಿಗೆ ಅಗ್ನಿ ಪ್ರವೇಶ, ರಾಜ್ಯ ಪ್ರಶಸ್ತಿ ಪಡೆದ ಅರುಣೋದಯ ಕಲಾ ತಂಡದವರಿಂದ ರಾತ್ರಿ ಜಾನಪದ ನಗೆ ಹಬ್ಬ ಕಾರ್ಯಕ್ರಮ ನಡೆಯಲಿದೆ.
14 ರಂದು ಕಾರ್ತಿಕ ದೀಪೋತ್ಸವದೊಂದಿಗೆ ಜಾತ್ರೆ ಮಂಗಲಗೊಳ್ಳುವುದು ಎಂದು ದೇವಸ್ಥಾನದ ಕಮಿಟಿ ಅಧ್ಯ ಪ್ರಭುಸ್ವಾಮಿ ಹಿರೇಮಠ, ಕಾರ್ಯದರ್ಶಿ ಅಶೋಕ ಲಗಳಿ, ಸದಸ್ಯರಾದ ಮಾದೇವ ಅವಟಿ ಗುರು ಬೆಳ್ಳಬ್ಬಿ,ಕಿರಣ ಹುದ್ದಾರ ತಿಳಿಸಿದ್ದಾರೆ.